More

    ಹೊರಗಿನಿಂದ ಬರುವವರ ವಿಚಾರಣೆ; ನಾಗೇನಹಳ್ಳಿ ಗ್ರಾಪಂನಿಂದ ವ್ಯಕ್ತಿ ನಿಯೋಜನೆ

    ಹೊಸಪೇಟೆ: ಗ್ರಾಮೀಣ ಭಾಗದಲ್ಲಿ ಕರೊನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ತಾಲೂಕಿನ ನಾಗೇನಹಳ್ಳಿ ಗ್ರಾಮದ ಪ್ರವೇಶದ್ವಾರದ ಬಳಿ ಹೊರಗಿನಿಂದ ಬರುವವರ ವಿಚಾರಣೆ ನಡೆಸಿ, ಒಳಗೆ ಬಿಡಲಾಗುತ್ತಿದೆ. ಅದಕ್ಕೆ ಗ್ರಾಪಂ ಒಬ್ಬ ವ್ಯಕ್ತಿಯನ್ನು ನೇಮಿಸಿದೆ.

    ಅನಂತಶಯನಗುಡಿಯಿಂದ ಗ್ರಾಮಕ್ಕೆ ಸಂಪರ್ಕಿಸುವ ರಸ್ತೆ, ಬಸವನದುರ್ಗಾ ಗ್ರಾಮದ ಕಡೆಯಿಂದ ಬರುವ ರಸ್ತೆಯಲ್ಲಿ ಕಟ್ಟಿಗೆಗಳನ್ನು ಕಟ್ಟಲಾಗಿದೆ. ಎಲ್ಲಿಂದ ಬಂದಿದ್ದೀರಿ, ನಗರಗಳಿಗೆ ದುಡಿಯಲು ಹೋಗಿದ್ದೀರಾ ಎಂಬಿತ್ಯಾದಿ ಮಾಹಿತಿ ಪಡೆಯಲಾಗುತ್ತಿದೆ. ಒಂದು ವೇಳೆ ನಗರಗಳಿಂದ ಬಂದವರಾಗಿದ್ದರೆ ಅಂತಹವರನ್ನು ಕೋವಿಡ್ ಪರೀಕ್ಷೆಗೆ ಶಿಫಾರಸು ಮಾಡುವುದು, ಕ್ವಾರಂಟೈನ್‌ನಲ್ಲಿ ಇರಿಸುವ ಕುರಿತಾಗಿ ಗ್ರಾಪಂನವರು ನಿರ್ಧರಿಸಿ ಆರೋಗ್ಯ ಇಲಾಖೆಗೆ ಮಾಹಿತಿ ನೀಡಲಿದ್ದಾರೆ. ಗ್ರಾಮದಲ್ಲಿ 5ಕ್ಕೂ ಹೆಚ್ಚು ಪಾಸಿಟಿವ್ ಕೇಸ್‌ಗಳಿವೆ. ಮುಂಜಾಗ್ರತಾ ಕ್ರಮವಾಗಿ ಗ್ರಾಪಂ ಹೊರಗಿನಿಂದ ಬಂದವರ ಮಾಹಿತಿ ಪಡೆದು ಗ್ರಾಮದ ಒಳಗೆ ಬಿಡಲು ಮುಂದಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts