More

    ಕರೊನಾ ಅಟ್ಟಹಾಸಕ್ಕೆ ಡೆಂಘೆ ಸಾಥ್

    ಯರಗಟ್ಟಿ: ರಾಜ್ಯದಲ್ಲಿ ಮಹಾಮಾರಿ ಕರೊನಾ ವೈರಸ್ ದಿನದಿಂದ ದಿನಕ್ಕೆ ತನ್ನ ಅಟ್ಟಹಾಸ ಮೆರೆಯುತ್ತಿರುವ ಸಂದರ್ಭದಲ್ಲೇ ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿ ಡೆಂಘೆ ಹಾವಳಿ ಹೆಚ್ಚಾಗುತ್ತಿದೆ. ಜಲ್ಲೆಯಲ್ಲಿ 7ಡೆಂಘೆ ಪ್ರಕರಣಗಳು ದೃಢಪಟ್ಟಿದ್ದು, ಕರೊನಾತಂಕದೊಂದಿಗೆ ಡೆಂಘೆ ಭೀತಿಯೂ ಆವರಿಸಿದೆ.

    ಬೆಳಗಾವಿ ರುಕ್ಮಿಣಿ ನಗರ, ಬೈಲಹೊಂಗಲ ನಗರ, ಸವದತ್ತಿ ತಾಲೂಕಿನ ಯರಗಟ್ಟಿ ಗ್ರಾಮದಲ್ಲಿ 7 ಪ್ರಕರಣಗಳು ಬೆಳಕಿಗೆ ಬಂದಿವೆ. ಅಲ್ಲದೆ, ಚಿಕ್ಕ ಮತ್ತು ಮಧ್ಯಮ ವಯಸ್ಸಿನ ಮಕ್ಕಳಲ್ಲಿಯೇ ಅಧಿಕ ಪ್ರಮಾಣದಲ್ಲಿ ಸಾಂಕ್ರಾಮಿಕ ರೋಗಗಳು ಕಂಡು ಬರುತ್ತಿರುವುದು ಪಾಲಕರಲ್ಲಿ ಆತಂಕ ತಂದಿದೆ. ಈಗಾಗಲೇ ಬೆಳಗಾವಿ ನಗರದ ಖಾಸಗಿ ಆಸ್ಪತ್ರೆಗಳಲ್ಲಿ ಡೆಂ ಗಿ ಲಕ್ಷಣಗಳುಳ್ಳ 20ಕ್ಕೂ ಅಧಿಕ ಜನರು ದಾಖಲಾಗಿದ್ದಾರೆ. ಆದರೆ, ಡೆಂಘೆ ದೃಢಪಟ್ಟಿಲ್ಲ.

    ಆರೋಗ್ಯ ತಪಾಸಣೆ: ಬೆಳಗಾವಿ ರುಕ್ಮಿಣಿ ನಗರದಲ್ಲಿಯೇ ದಿನದಿಂದ ದಿನಕ್ಕೆ ಡೆಂಘೆ ಪ್ರಕರಣಗಳ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ವೈದ್ಯರು ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ಆರೋಗ್ಯ ತಪಾಸಣೆ ನಡೆಸುತ್ತಿದ್ದಾರೆ. ಸವದತ್ತಿ ತಾಲೂಕಿನ ಯರಗಟ್ಟಿ ಗ್ರಾಮದಲ್ಲಿ ಡೆಂಘೆ ಲಕ್ಷಣ ಕಂಡು ಬಂದ ನಾಲ್ವರು ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಅದರಲ್ಲಿ ಒಬ್ಬರಿಗೆ ಡೆಂಘೆ ದೃಢಪಟ್ಟಿದ್ದು, ಇನ್ನುಳಿದವರ ವರದಿ ಬಂದಿಲ್ಲ.

    ನಮ್ಮ ಮನೆಯಲ್ಲಿ ಮೂವರಲ್ಲಿ ಡೆಂಗಿ ಜ್ವರ ಕಾಣಿಸಿಕೊಂಡಿದೆ. ಈ ಕುರಿತು ಜಿಲ್ಲಾ ಪಂಚಾಯಿತಿ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೂ ಅವರು ಕ್ರಮ ತೆಗೆದುಕೊಳ್ಳುತ್ತಿಲ್ಲ. ವಾರ್ಡ್‌ಗಳಲ್ಲಿ ಅಧಿಕಾರಿಗಳು ಕಾಟಾಚಾರಕ್ಕೆ ಸಭೆ ಮಾಡುತ್ತಾರೆ. ಸೊಳ್ಳೆ ನಿಯಂತ್ರಣಕ್ಕೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ.
    | ಶಿವಾನಂದ ಪಟ್ಟಣಶೆಟ್ಟಿ, ಯರಗಟ್ಟಿ ಗ್ರಾಮದ ಮಹಾಂತೇಶ ನಗರದ ನಿವಾಸಿ

    ಕಳೆದ ಒಂದು ವಾರದ ಅವಧಿಯಲ್ಲಿ ಜಿಲ್ಲೆಯಲ್ಲಿ ಬೆಳಗಾವಿಯ ರುಕ್ಮಿಣಿ ನಗರದಲ್ಲಿ 5, ಸವದತ್ತಿ ತಾಲೂಕು ಯರಗಟ್ಟಿ ಗ್ರಾಮದಲ್ಲಿ 1, ಬೈಲಹೊಂಗಲ ನಗರದಲ್ಲಿ 1 ಸೇರಿ ಒಟ್ಟು 7 ಡೆಂಗಿ ಪ್ರಕರಣ ಪತ್ತೆಯಾಗಿವೆ. ಜನರಲ್ಲಿ ಸ್ವಚ್ಛತೆ ಸೇರಿದಂತೆ ಸಾಂಕ್ರಾಮಿಕ ರೋಗಗಳ ನಿಯಂತ್ರಣ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ.
    | ಡಾ. ಎಂ.ಎಸ್. ಪಲ್ಲೇದ, ಜಿಲ್ಲಾ ಆಹಾರ ಸುರಕ್ಷತಾ ಮತ್ತು ಅಂಕಿತ ಅಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts