More

    ರೆಡ್​ಹ್ಯಾಂಡ್​ ಆಗಿ ಸಿಕ್ಕಿಬೀಳ್ತಿದ್ದಂತೆ ಲಂಚದ ಹಣ ನುಂಗಲು ಯತ್ನ! SI ಹೈಡ್ರಾಮಕ್ಕೆ ಅಧಿಕಾರಿಗಳಿಂದ ತಕ್ಕ ಉತ್ತರ

    ಚಂಡೀಗಢ: ಎಮ್ಮೆ ಕಳ್ಳತನ ಪ್ರಕರಣದಲ್ಲಿ ಲಂಚ ಪಡೆಯುತ್ತಿದ್ದ ಪೊಲೀಸ್​ ಸಬ್​ ಇನ್ಸ್​ಪೆಕ್ಟರ್​ ಒಬ್ಬರನ್ನು ಹರಿಯಾಣದ ಜಾಗೃತ ದಳದ ಅಧಿಕಾರಿಗಳು ರೆಡ್​ಹ್ಯಾಂಡ್​ ಆಗಿ ಹಿಡಿದಿದ್ದಾರೆ. ಈ ಘಟನೆ ಫರೀದಾಬಾದ್​ನಲ್ಲಿ ನಿನ್ನೆ (ಡಿ.13) ನಡೆದಿದೆ.

    ಅಧಿಕಾರಿಗಳ ಕೈಗೆ ಸಿಕ್ಕಿ ಬೀಳುತ್ತಿದ್ದಂತೆ ಸ್ಥಳದಲ್ಲೇ ಹೈಡ್ರಾಮ ಸೃಷ್ಟಿಸಿದ ಎಸ್​ಐ, ಸಾಕ್ಷಿ ನಾಶ ಮಾಡುವ ಉದ್ದೇಶದಿಂದ ತಾನು ಪಡೆದ ಲಂಚದ ಹಣವನ್ನು ನುಂಗಲು ಯತ್ನಿಸಿದ್ದರು. ಆದರೆ, ಹಣವನ್ನು ನುಂಗಲು ಅಧಿಕಾರಿಗಳು ಬಿಡಲಿಲ್ಲ. ಸಿಕ್ಕಿಬಿದ್ದ ಸಬ್​ ಇನ್ಸ್​ಪೆಕ್ಟರ್​ನನ್ನು ಮಹೇಂದ್ರ ಉಲಾ ಎಂದು ಗುರುತಿಸಲಾಗಿದೆ. ಇಡೀ ಘಟನೆಯನ್ನು ಸ್ಥಳೀಯರೊಬ್ಬರು ಮೊಬೈಲ್​ನಲ್ಲಿ ರೆಕಾರ್ಡ್​ ಮಾಡಿದ್ದು, ವಿಡಿಯೋ ವೈರಲ್​ ಆಗಿದೆ.

    ವಿಡಿಯೋದಲ್ಲಿ ಏನಿದೆ?
    ಎಸ್​ಐನನ್ನು ಜಾಗೃತ ದಳದ ಅಧಿಕಾರಿಗಳು ಲಂಚ ತೆಗೆದುಕೊಳ್ಳುವಾಗ ರೆಡ್​ಹ್ಯಾಂಡ್​ ಆಗಿ ಹಿಡಿದುಕೊಂಡಿದ್ದಾರೆ. ಎಲ್ಲಿ ಬಂಧನವಾಗುತ್ತೇನೋ ಎಂಬ ಭಯದಿಂದ ಎಸ್​ಐ ತನ್ನ ಕೈಯಲ್ಲಿದ್ದ ಲಂಚದ ಹಣವನ್ನು ನುಂಗಲು ಯತ್ನಿಸಿ, ಬಾಯಿಗೆ ಹಾಕಿಕೊಂಡಿದ್ದಾನೆ. ಆದರೆ, ಅಧಿಕಾರಿಯೊಬ್ಬರು ಎಸ್​ಐ ಬಾಯಿಗೆ ಕೈಹಾಕಿ ನೋಟುಗಳನ್ನು ವಶಕ್ಕೆ ಪಡೆದಿದ್ದಾರೆ. ಹೇಗಾದರೂ ಸರಿ ಅಧಿಕಾರಿಗಳಿಂದ ತಪ್ಪಿಸಿಕೊಳ್ಳಬೇಕೆಂದು ಸಾಕಷ್ಟು ಪ್ರಯತ್ನ ಮಾಡಿದ ಎಸ್​ಐ, ನೆಲದ ಮೇಲೆ ಬಿದ್ದ ಹೊರಳಾಡಿದ್ದಾನೆ. ಕೊನೆಗೂ ಆತನನ್ನು ಬಿಡದ ಅಧಿಕಾರಿಗಳು ಕಾರಿನಲ್ಲಿ ಕೂರಿಸಿಕೊಂಡು ಅಲ್ಲಿಂದ ತೆರಳುತ್ತಾರೆ. ಇದರ ಮಧ್ಯೆ ಸಾರ್ವಜನಿಕನೊಬ್ಬ ಮಧ್ಯ ಪ್ರವೇಶ ಮಾಡಿದರೂ ಆತನನ್ನು ಅಧಿಕಾರಿಯೊಬ್ಬರು ದೂರ ತಳ್ಳುತ್ತಾರೆ.

    ಅಧಿಕಾರಿಗಳ ಪ್ರಕಾರ ಸಂತ್ರಸ್ತ ವ್ಯಕ್ತಿ ಸುಭನಾಥ್​ ಎಂಬುವರು ತಮ್ಮ ಎಮ್ಮೆಯನ್ನು ಕಳೆದುಕೊಂಡಿದ್ದರು. ಕಳ್ಳತನ ಮಾಡಿದ ಆರೋಪಿಯನ್ನು ಹಿಡಿದು ಆತನ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು ಪೊಲೀಸರಿಗೆ ದೂರು ನೀಡಿದ್ದರು. ಈ ವೇಳೆ ಸಂತ್ರಸ್ತನ ಬಳಿ ಎಸ್​ಐ ಮಹೇಂದ್ರ 10 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದ. ಮೊದಲೇ 6 ಸಾವಿರ ರೂ. ಹಣ ಪಡೆದಿದ್ದ. ಉಳಿದ ಹಣವನ್ನು ಕೊಡುವ ಮುನ್ನ ಸಂತ್ರಸ್ತ, ಜಾಗೃತ ದಳದ ಅಧಿಕಾರಿಗಳ ಬಳಿ ದೂರು ನೀಡಿದ್ದು, ಬಳಿಕ ಉಳಿದ ಹಣವನ್ನು ಕೊಡುವ ಸಮಯದಲ್ಲಿ ಎಸ್​ಐನನ್ನು ರೆಡ್​ಹ್ಯಾಂಡ್​ ಆಗಿ ಸೆರೆಹಿಡಿದಿದ್ದಾರೆ. (ಏಜೆನ್ಸೀಸ್​)

    ಪವಿತ್ರಾ ಲೋಕೇಶ್ ಬಳಿಕ ಕೆಲ ಯೂಟ್ಯೂಬರ್ಸ್​ಗೆ ಶಾಕ್​ ಕೊಟ್ಟ ನಟ ನರೇಶ್! ಕೋರ್ಟ್​ನಿಂದ ಹೊರಬಿತ್ತು ಆದೇಶ​

    ರಿಷಭ್​ ಶೆಟ್ಟಿ ಕಂಡರೆ ಹೊಟ್ಟೆಕಿಚ್ಚಂತೆ! ಕಾಂತಾರ ಯಶಸ್ಸಿನ ಬಗ್ಗೆ ನವಾಜುದ್ದೀನ್​ ಸಿದ್ದಿಖಿ ಆಡಿದ ಮಾತುಗಳಿವು…

    ಬ್ಯಾಂಕ್​ಗಳಿಂದ 10,09,511 ಕೋಟಿ ರೂ. ಸಾಲ ರೈಟ್​ಆಫ್: ವಸೂಲಾತಿಗೆ ಬಾಧಕವಿಲ್ಲ, ಸರ್ಕಾರದ ಪರಿಹಾರ ನಿಧಿಗೆ ಸಿಎಸ್​ಆರ್ ಫಂಡ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts