More

    ಮಹಿಳೆಯರೇ ಈ ಪೊಲೀಸಪ್ಪನ ಟಾರ್ಗೆಟ್​: ಕಾರಿನ ಆಸೆಗೆ ಬಿದ್ದ ಸಂತ್ರಸ್ತೆಯರ ಗೋಳು ಹೇಳತೀರದು

    ಕೊಚ್ಚಿ: ವಾಹನ ಖರೀದಿಸಿ ಕೊಡುವುದಾಗಿ ನಂಬಿಸಿ ಮಹಿಳೆಯೊಬ್ಬರಿಂದ ಲಕ್ಷಾಂತರ ರೂಪಾಯಿ ಪಡೆದು ವಂಚನೆ ಮಾಡಿರುವ ಆರೋಪ ಕೇರಳದ ಪೊಲೀಸ್​ ಪೇದೆ ಒಬ್ಬರ ವಿರುದ್ಧ ಕೇಳಿಬಂದಿದೆ. ಪೊಲೀಸ್​ ಹೆಸರನ್ನು ದುರ್ಬಳಕೆ ಮಾಡಿಕೊಂಡು ಸಾಕಷ್ಟು ಮಹಿಳೆಯಿಂದ ಆರೋಪಿ ಹಣ ಸುಲಿಗೆ ಮಾಡಿದ್ದಾನೆ.

    ಆರೋಪಿಯ ಹೆಸರು ಬಿನುಕುಮಾರ್​. ಈತ ಕೇರಳದ ಕೊನ್ನಿ ಠಾಣೆಯಲ್ಲಿ ಕಾನ್ಸ್​ಟೇಬಲ್​ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಾರು ಖರೀದಿ ಮಾಡಿ ಕೊಡುವುದಾಗಿ ಮಹಿಳೆಯೊಬ್ಬರಿಂದ 13.5 ಲಕ್ಷ ರೂಪಾಯಿ ಹಣ ಸುಲಿಗೆ ಮಾಡಿದ್ದು, ವಾಪಸ್​ ಕೇಳಿದ್ದಕ್ಕೆ ಬೆದರಿಕೆ ಹಾಕಿದ್ದಾನೆಂದು ಆರೋಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಆತನ ವಿರುದ್ಧ ದೂರು ದಾಖಲಿಸಲಾಗಿದೆ.

    ಕಾರು ಖರೀದಿ ಮಾಡಿದ್ದಲ್ಲದೆ, ಬಳಿಕ ಅದನ್ನು 10 ಲಕ್ಷ ರೂಪಾಯಿಗೆ ಅಡಮಾನ ಇಟ್ಟಿದ್ದಾನೆ. ಈ ಕೊನ್ನಿ ಪೊಲೀಸ್​ ಠಾಣೆಗೆ ಸೇರಿದಾಗಿನಿಂದ ಸುಮಾರು ಐವರು ಮಹಿಳೆಯರಿಗೆ ವಂಚನೆ ಮಾಡಿರುವುದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

    ಈ ಹಿಂದೆ ಪೆರುನಾಡು ಠಾಣೆಯಲ್ಲಿ ಕೆಲಸ ಮಾಡುತ್ತಿದ್ದಾಗಲೂ ಮಹಿಳೆಯರಿಗೆ ವಂಚನೆ ಮಾಡಿರುವುದಾಗಿ ತಿಳಿದುಬಂದಿದೆ. ವಿಧವೆಯೊಬ್ಬರ ಬಳಿ 2 ಲಕ್ಷ ರೂ. ಹಾಗೂ ಇತರರಿಂದ ಸುಮಾರು 50 ಸಾವಿರ ರೂಪಾಯಿ ಹಣ ಪಡೆದು ವಂಚನೆ ಮಾಡಿರುವ ಆರೋಪ ಮಾಡಲಾಗಿದೆ. (ಏಜೆನ್ಸೀಸ್​)

    ಇನ್ಸ್​ಪೆಕ್ಟರ್​ ನಂದೀಶ್ ಸಾವು ಪ್ರಕರಣ: ಪೊಲೀಸ್​ ಕಮಿಷನರ್ ವಿರುದ್ಧವೇ ದೂರು ದಾಖಲು

    ಬಾಲಿವುಡ್​ ಸ್ಟೈಲ್​ನಲ್ಲಿ ಬೈಕ್ ಸ್ಟಂಟ್​: ನವಜೋಡಿಯ ವಿಭಿನ್ನ ಪ್ರೀ ವೆಡ್ಡಿಂಗ್​ ಫೋಟೋಶೂಟ್​ ವಿಡಿಯೋ ವೈರಲ್​

    ಸ್ಪೋರ್ಟ್ಸ್​ ಲೈವ್​ ಗೇಮಿಂಗ್​ ಇಂಡಸ್ಟ್ರಿಯ ಏಳು-ಬೀಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts