More

    ಸಹಕಾರಿ ಸಂಘಗಳು ಬಡಜನರ ಆಶಾಕಿರಣ

    ಹುಕ್ಕೇರಿ: ಸರ್ಕಾರದಿಂದ ಆಗದಿರುವ ಕಾರ್ಯವನ್ನು ಸಹಕಾರಿ ಕ್ಷೇತ್ರ ಮಾಡುತ್ತದೆ. ಇತ್ತೀಚಿನ ದಿನಗಳಲ್ಲಿ ಸೌಹಾರ್ದ ಸಹಕಾರಿಗಳು ಬಡ ವರ್ಗದವರಿಗೆ ಹೆಚ್ಚಿನ ಆಶಾ ಕಿರಣಗಳಾಗಿವೆ ಎಂದು ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ಹೇಳಿದರು.

    ಆಂಜನೇಯ ನಗರದಲ್ಲಿ ಬುಧವಾರ ‘ಮಹಾವೀರ ಮಲ್ಟಿಪರ್ಪಜ್ ಸೌಹಾರ್ದ ಸಹಕಾರಿಯ ಸ್ೇ ಲಾಕರ್ ಘಟಕ’ ಉದ್ಘಾಟಿಸಿ ಅವರು ಮಾತನಾಡಿದರು. 20 ವರ್ಷಗಳ ಹಿಂದೆ ಸಹಕಾರಿ ಧುರೀಣ ವಸಂತ ನಿಲಜಗಿ ಅವರು ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದವರನ್ನು ಸಬಲರನ್ನಾಗಿ ಮಾಡುವ ನಿಟ್ಟಿನಲ್ಲಿ ಸ್ಥಾಪಿಸಿದ ಈ ಸೌಹಾರ್ದ ಸಹಕಾರಿ ಇಂದು ಹೆಮ್ಮರವಾಗಿ ಬೆಳೆದಿದೆ. 13 ಶಾಖೆಗಳೊಂದಿಗೆ, ನೂರಾರು ಕೋಟಿ ರೂ. ಠೇವಣಿ ಹೊಂದಿರುವ ಸಹಕಾರಿ, ಸಾರ್ವಜನಿಕರ ಪ್ರೀತಿ ವಿಶ್ವಾರ್ಹತೆಗೆ ಪಾತ್ರವಾಗಿದೆ. ಜತೆಗೆ ಸಾಲವನ್ನು ಹಂಚಿ ತಾನು ಬೆಳೆದು ತನ್ನೊಂದಿಗೆ ಬಡ ವರ್ಗದವರು, ಉದ್ಯೋಗಸ್ಥರು, ನೌಕರ ವರ್ಗದವರನ್ನು ಬೆಳೆಸಿರುವುದು ಶ್ಲಾಘನೀಯ ಎಂದರು. ಸಾಲ ಪಡೆದವರು ಸದ್ಬಳಕೆ ಮಾಡಿಕೊಂಡು ಮರು ಪಾವತಿ ಮಾಡಿದಾಗ ಮಾತ್ರ ಸಹಕಾರಿ ಸಂಸ್ಥೆಗಳ ಶ್ರಮ ಸಾರ್ಥಕವಾಗುತ್ತದೆ ಎಂದರು.

    ಮಹಾವೀರ ಉದ್ಯೋಗ ಸಮೂಹ ಸಂಸ್ಥೆ ಲಾಭದ ದೃಷ್ಟಿಗಿಂತ ಸೇವಾ ಮನೋಭಾವ ಹಾಗೂ ಸಮಾಜಮುಖಿಯಾಗಿ ಸಾಗುತ್ತಿರುವುದರಿಂದ ಗ್ರಾಹಕರ, ಉದ್ಯೋಗಸ್ಥರ ಮತ್ತು ದೀನ ದುರ್ಬಲರ ವಿಶ್ವಾಸಕ್ಕೆ ಪಾತ್ರವಾಗಿದೆ ಎಂದರು.

    ಸಂಸ್ಥೆ ಅಧ್ಯಕ್ಷ ಮಹಾವೀರ ನಿಲಜಗಿ ಅಧ್ಯಕ್ಷತೆ ವಹಿಸಿದ್ದರು. ಮಹಾವೀರ ಉದ್ಯೋಗ ಸಮೂಹ ಸಂಸ್ಥೆ ಉಪಾಧ್ಯಕ್ಷ ಪ್ರಜ್ವಲ ನಿಲಜಗಿ, ಕಾರ್ಯದರ್ಶಿ ಸಂಜಯ ನಿಲಜಗಿ, ನಿರ್ದೇಶಕ ಬಾಹುಬಲಿ ಸೊಲ್ಲಾಪೂರೆ, ಕಿರಣ ಸೊಲ್ಲಾಪೂರೆ, ಸಂಗೀತಾ ನಿಲಜಗಿ, ಜೈನ್ ಮಹಾಸಭಾ ನೂತನ ಸದಸ್ಯ ರೋಹಿತ ಚೌಗಲಾ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಜಯಗೌಡ ಪಾಟೀಲ, ಅಶೋಕ ಪಾಟೀಲ, ಶಾಖಾ ಕಾರ್ಯದರ್ಶಿ ಇಕಬಾಲ್ ಘಾಲವಾಡೆ ಇದ್ದರು.

    ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಆರ್.ಟಿ. ಪಾಟೀಲ ಸ್ವಾಗತಿಸಿದರು. ಸಂಗಮೇಶ ನಿರೂಪಿಸಿದರು. ಸಂತೋಷಸಿಂಗ್ ರಜಪೂತ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts