More

    ರೈತರ ಅಭಿವೃದ್ಧಿಗೆ ಸಹಕಾರಿ ಸಂಘಗಳು ಶ್ರಮಿಸಲಿ

    ಬೋರಗಾಂವ: ಕೃಷಿ ಪತ್ತಿನ ಸಹಕಾರ ಸಂಘದ ಮೂಲಕ ರೈತರು ಆರ್ಥಿಕವಾಗಿ ಅಭಿವೃದ್ಧಿ ಹೊಂದುತ್ತಿದ್ದಾರೆ. ಅವುಗಳು ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ಮೂಲಕ ರೈತರ ಆರ್ಥಿಕ ಜೀವನಮಟ್ಟ ಹೆಚ್ಚಿಸಲು ಪ್ರಾಮಾಣಿಕವಾಗಿ ಶ್ರಮಿಸಬೇಕು ಎಂದು ಸಹಕಾರ ರತ್ನ ಉತ್ತಮ ಪಾಟೀಲ ಹೇಳಿದರು.

    ಪಟ್ಟಣದ ಪಿಕೆಪಿಎಸ್ ಕಚೇರಿಯಲ್ಲಿ ಮಂಗಳವಾರ ಕುನ್ನೂರು ದೂಧಗಂಗಾ ಪಿಕೆಪಿಎಸ್ ಚುನಾವಣೆಯಲ್ಲಿ ಆಯ್ಕೆಯಾದ
    ಎಲ್ಲ ನಿರ್ದೇಶಕರನ್ನು ಸತ್ಕರಿಸಿ ಮಾತನಾಡಿದರು. ರೈತರಿಗೆ ಸಕಾಲಕ್ಕೆ ಸಾಲ ನೀಡಬೇಕು. ಸಹಕಾರಿ ಕ್ಷೇತ್ರ ನಂಬಿಕೆಗೆ ಅರ್ಹವಾಗಿಸಲು ಎಲ್ಲರೂ ಶ್ರಮಿಸಬೇಕು. ಸಹಕಾರಿ ಕ್ಷೇತ್ರ ರಾಜಕೀಯ ರಹಿತವಾಗಿ ಮುನ್ನಡೆಸಿದರೆ ಸಂಘಗಳು ಪ್ರಗತಿ ಹೊಂದಲಿವೆ. ಚುನಾವಣೆಯಲ್ಲಿ ಸಿಕ್ಕ ಅಧಿಕಾರವನ್ನು ಎಲ್ಲ ರೈತ ಸದಸ್ಯರ ಅಭಿವೃದ್ಧಿಗೆ ಬಳಸಿ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

    ಗ್ರಾಪಂ ಅಧ್ಯಕ್ಷ ಲಕ್ಷ್ಮಣ ಕಾಂಬಳೆ, ಸದಸ್ಯರಾದ ಪೋಪಟ ಜಾಧವ, ಮಾನಾಜಿ ಚೆಂಡ್ಕೆ, ಸಂತೋಷ ಕೋಳಿ, ಶಿವಾಜಿ ನಿಕ್ಕಂ, ಲಕ್ಷ್ಮಣ ಕಾಂಬಳೆ, ಅನಿಲ ನಿಕ್ಕಂ, ಧೋಂಡಿರಾಮ ಧನಗರ, ಮಾಣಿಕ ಕಾಂಬಳೆ, ವೈಭವ ಚೆಂಡ್ಕೆ , ಅನಿಲ ಸಾಕಾನ,, ಚೈತನ್ಯ ಚೆಂಡ್ಕೆ, ರಾಮಚಂದ್ರ ಜಾಧವ, ರಾಮಚಂದ್ರ ಜಾಧವ, ಶಿವಚಂದ್ರ ತಾವದಾರೆ, ವಿಜಯ ನಾಯ್ಕ, ಅಜಿತ ಕೋಣೆ, ಉಮಾ ಪಾಟೀಲ, ಜಯಶ್ರೀ ನಿಕ್ಕಂ, ಮೀನಾಕ್ಷಿ ತಾವದಾರೆ, ಪಲ್ಲವಿ ಬುರುಡ, ಪಂಡಿತ ಹೆಗಡೆ, ಆರ್. ಟಿ.ಚೌಗುಲೆ, ಸುಮಿತ ರೊಡ್ಡ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts