More

    ಅನ್ನ ನೀಡುವ ರೈತರಿಗೆ ಜಾಗೃತಿ ಮೂಡಿಸಿ

    ಹುಕ್ಕೇರಿ: ನಾಡಿಗೆ ಅನ್ನ ನೀಡುವ ರೈತನ ಬದುಕು ಸುಂದರವಾಗಿರಬೇಕು. ಈ ನಿಟ್ಟಿನಲ್ಲಿ ಸ್ಥಳೀಯ ಸಂಸ್ಥೆಗಳು ಅವರಿಗೆ ಕರೊನಾ ಸೋಂಕು ನಿಯಂತ್ರಣ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಮಾಜಿ ಸಂಸದ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ಹೇಳಿದ್ದಾರೆ.

    ತಾಲೂಕಿನ ಎಲಿಮುನ್ನೋಳಿ, ಶಿರಹಟ್ಟಿ ಮತ್ತು ಸಾರಾಪುರ ಗ್ರಾಮಗಳಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪಿಕೆಪಿಎಸ್ ಸದಸ್ಯರ ಸಭೆಯಲ್ಲಿ ಅವರು ಮಾತನಾಡಿ, ಶುಚಿತ್ವದ ಕೊರತೆಯಿಂದ ಇಂದು ಸಾಂಕ್ರಾಮಿಕ ರೋಗಗಳು ಹೆಚ್ಚುತ್ತಿವೆ.

    ಹಿರಿಯರು ಪಾಲಿಸಿಕೊಂಡು ಬಂದಿದ್ದ ಆಚಾರ- ವಿಚಾರ ಹಾಗೂ ಆಹಾರ ಪದ್ಧತಿಯನ್ನು ಮರೆತು ಆಧುನಿಕತೆಯ ಬೆನ್ನು ಹತ್ತಿರುವುದರಿಂದ ನಮ್ಮಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತಿದೆ. ಹಾಗಾಗಿ ನಾವು ಇನ್ನಾದರೂ ಎಚ್ಚೆತ್ತುಕೊಳ್ಳಬೇಕು. ಎಲ್ಲರೂ ಶುಚಿತ್ವ ಹಾಗೂ ಉತ್ತಮ ಆರೋಗ್ಯಕ್ಕೆ ಒತ್ತು ನೀಡಬೇಕು ಎಂದರು.

    ಬಳಿಕ 2020-21ನೇ ಸಾಲಿನ ಪತ್ತು ವಿತರಣೆ ಕಾರ್ಯ ನೆರವೇರಿಸಿದರು. ವಿವಿಧ ಸಂಘ- ಸಂಸ್ಥೆಗಳ ವತಿಯಿಂದ ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ಅವರನ್ನು ಸತ್ಕರಿಸಿದರು. ಪಿಕಾರ್ಡ್ ಬ್ಯಾಂಕ್ ಹಾಗೂ ಬಿಜೆಪಿ ಮಂಡಲ ಅಧ್ಯಕ್ಷ ರಾಚಯ್ಯ ಹಿರೇಮಠ, ತಾಲೂಕು ಪಂಚಾಯಿತಿ ಸದಸ್ಯ ಬಾಳಾಸಾಹೇಬ ನಾಯಿಕ, ಸತ್ತೆಪ್ಪ ನಾಯಿಕ, ಪಿಕೆಪಿಎಸ್ ಅಧ್ಯಕ್ಷ ಶಶಿಕಾಂತ ದೊಡಲಿಂಗಣ್ಣವರ, ರಾಮಣ್ಣ ಗೋಟೂರೆ, ರಾಜೇಂದ್ರಕುಮಾರ ಕಂಠೀಕರ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕಸ್ತೂರಿ ತಿಪ್ಪಾಗೋಳ, ಡಿಸಿಸಿ ಬ್ಯಾಂಕ್ ತಾಲೂಕು ನಿಯಂತ್ರಣಾಧಿಕಾರಿ ಶ್ರೀಶೈಲ ಸನದಿ, ಬ್ಯಾಂಕ್ ಇನ್ಸ್‌ಪೆಕ್ಟರ್ ಎಂ.ಬಿ.ಹಡಾಡಿ, ಮಹಾಂತೇಶ ಹಾಗೂ ವಿವಿಧ ಗ್ರಾಮಸ್ಥರು ಉಪಸ್ಥಿತರಿದ್ದರು.

    797 ಸದಸ್ಯರಿಗೆ 7.19 ಕೋಟಿ ರೂ. ಸಾಲ ವಿತರಣೆ

    ಎಲಿಮುನ್ನೋಳಿ ಪಿಕೆಪಿಎಸ್‌ನಿಂದ 797 ಸದಸ್ಯರಿಗೆ 7.19 ಕೋಟಿ ರೂ. ಸಾಲ ವಿತರಿಸಲಾಗುತ್ತಿದೆ. ಇಲ್ಲಿಯವರೆಗೆ ಈ ಸಂಘ ಹಾಗೂ ಮತ್ತೊಂದು ಸಂಘದ ಸದಸ್ಯರಿಗೆ ಅಂದಾಜು 12 ಕೋಟಿ ರೂ. ಸಾಲಮನ್ನಾ ಭಾಗ್ಯ ದೊರಕಿದೆ. ಶಿರಹಟ್ಟಿ ಪಿಕೆಪಿಎಸ್‌ನಿಂದ ಪ್ರಸಕ್ತ ಸಾಲಿಗಾಗಿ 7.2 ಕೋಟಿ ರೂ. ಸಾಲ ವಿತರಿಸಲಾಗುತ್ತಿದೆ. ಈ ಸಂಘಕ್ಕೆ 8.69 ಕೋಟಿ ರೂ. ಸಾಲಮನ್ನಾ ಭಾಗ್ಯ ಸಿಕ್ಕಿದೆ. ಸಾರಾಪುರ ಪಿಕೆಪಿಎಸ್‌ನಿಂದ ಪ್ರಸಕ್ತ ಸಾಲಿನ 577 ಸದಸ್ಯರಿಗೆ 4.29 ಕೋಟಿ ರೂ. ಸಾಲ ವಿತರಿಸಲಾಗುತ್ತಿದೆ. ಸಂಘವು 94.26 ಲಕ್ಷ ರೂ. ಸಾಲಮನ್ನಾ ಸೌಲಭ್ಯ ಪಡೆದಿದೆ ಎಂದು ರಮೇಶ ಕತ್ತಿ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts