ಹುಕ್ಕೇರಿ: ತಾಲೂಕಿನ ಬೆಲ್ಲದಬಾಗೇವಾಡಿ ಗ್ರಾಮದಲ್ಲಿ ಶುಕ್ರವಾರ ಸಹಕಾರಿ ರೂವಾರಿ, ಮಾಜಿ ಶಾಸಕ, ದಿ. ವಿಶ್ವನಾಥ ಕತ್ತಿ ಅವರ 35ನೇ ಪುಣ್ಯಸ್ಮರಣೆ ಕಾರ್ಯಕ್ರಮ ಜರುಗಿತು.
ದಿ. ವಿಶ್ವನಾಥ ಕತ್ತಿ ಅವರ ಸಮಾಧಿ ಸ್ಥಳದಲ್ಲಿ ಕತ್ತಿ ಕುಟುಂಬ ಸದಸ್ಯರು, ಅಭಿಮಾನಿಗಳು ಪೂಜೆ ಸಲ್ಲಿಸಿದರು. ಬಳಿಕ ಶಾಸಕ ಉಮೇಶ ಕತ್ತಿ, ಜಿಪಂ ಸದಸ್ಯ ನಿಖಿಲ್ ಕತ್ತಿ, ಪವನ್ ಕತ್ತಿ ಹಾಗೂ ಉದ್ಯಮಿ ಪೃಥ್ವಿ ಕತ್ತಿ ಸಹೋದರರು ಸಮಾಧಿಗೆ ಪುಷ್ಪಗುಚ್ಛ ಅರ್ಪಿಸಿ ನಮನ ಸಲ್ಲಿಸಿದರು.
ಸ್ಥಳೀಯ ವೈದ್ಯ ನೇಮಿರಾಜ ದಸ್ತೆನ್ನವರ ಮಾತನಾಡಿ, ನಾಡು-ನುಡಿ ಹಾಗೂ ಬಡವರಿಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟವರನ್ನು ಸಮಾಜ ಸದಾ ಸ್ಮರಿಸುತ್ತದೆ ಎಂಬುವುದಕ್ಕೆ ಸಹಕಾರಿ ಧುರೀಣ ದಿ. ವಿಶ್ವನಾಥ ಕತ್ತಿ ಅವರ 35ನೇ ಪುಣ್ಯಸ್ಮರಣೆಯಲ್ಲಿ ಪಾಲ್ಗೊಂಡ ಅಭಿಮಾನಿಗಳೇ ನಿದರ್ಶನ ಎಂದರು. ಹಿರಾಶುಗರ್ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಅಪ್ಪಾಸಾಹೇಬ ಶಿರಕೋಳಿ, ನಿರ್ದೇಶಕ ಶಿವನಾಯಿಕ ನಾಯಿಕ, ಸಂಗಮ ಶುಗರ್ಸ್ ಅಧ್ಯಕ್ಷ ರಾಜೇಂದ್ರ ಪಾಟೀಲ, ಪಿಕಾರ್ಡ್ ಬ್ಯಾಂಕ್ ನಿರ್ದೇಶಕರಾದ ಪರಗೌಡ ಪಾಟೀಲ, ರಮೇಶ ಕುಲಕರ್ಣಿ, ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಅಧ್ಯಕ್ಷ ಬಸವರಾಜ ಮರಡಿ, ಸ್ಥಾನಿಕ ಅಭಿಯಂತ ನೇಮಿನಾಥ ಖೇಮಲಾಪುರೆ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ರಾಚಯ್ಯ ಹಿರೇಮಠ, ಜಯಸಿಂಗ್ ಸನದಿ, ಅರ್ಬನ್ ಬ್ಯಾಂಕ್ ಸಲಹೆಗಾರ ಎಂ.ಕೆ. ಅಮ್ಮಣಗಿ, ಜನರಲ್ ಮ್ಯಾನೇಜರ್ ಸುಜಿತ್ ಕತ್ತಿ, ಆರ್.ಟಿ. ಶಿರಾಳಕರ, ಕಾಡಯ್ಯ ಪೂಜೇರಿ, ದಿಲೀಪ ವಾಳಿಖಿಂಡಿ, ತಾಪಂ ಸದಸ್ಯ ಬಾಳಾಸಾಹೇಬ ನಾಯಿಕ, ಸತ್ಯಪ್ಪ ನಾಯಿಕ, ಮಲ್ಲಪ್ಪ ನಾಯಿಕ ಹಾಗೂ ಗ್ರಾಮಸ್ಥರು ಇದ್ದರು.