More

    ಹುಬ್ಬಳ್ಳಿಯಲ್ಲಿ ವಿಜಯ ಸಹಕಾರಿ

    ಹುಬ್ಬಳ್ಳಿ: ನಿರಾಣಿ ಉದ್ಯಮ ಸಮೂಹದ ವಿಜಯ (ಎಂಆರ್​ಎನ್) ಸೌಹಾರ್ದ ಕ್ರೆಡಿಟ್ ಸಹಕಾರಿಯ 53ನೇ ಶಾಖೆಯು ಹುಬ್ಬಳ್ಳಿಯ ನ್ಯೂ ಕಾಟನ್ ಮಾರ್ಕೆಟ್​ನಲ್ಲಿ ನ. 13ರಂದು ಪ್ರಾರಂಭವಾಗಲಿದೆ ಎಂದು ಸಮೂಹದ ಸಂಸ್ಥಾಪಕ ಅಧ್ಯಕ್ಷ ಹಾಗೂ ಬೀಳಗಿ ಶಾಸಕ ಮುರುಗೇಶ ನಿರಾಣಿ ತಿಳಿಸಿದ್ದಾರೆ.

    ಸಂ. 7 ಗಂಟೆಗೆ ನಡೆಯುವ ಹುಬ್ಬಳ್ಳಿ ಶಾಖೆಯ ಉದ್ಘಾಟನೆ ಕಾರ್ಯಕ್ರಮದ ಸಾನ್ನಿಧ್ಯವನ್ನು ಮೂರುಸಾವಿರ ಮಠದ ಶ್ರೀ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ವಹಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಅಧ್ಯಕ್ಷತೆ ವಹಿಸುವರು. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಉದ್ಘಾಟಿಸುವರು. ಗೃಹ ಸಚಿವ ಬಸವರಾಜ ಬೊಮ್ಮಾಯಿ, ಶಾಸಕರಾದ ಅರವಿಂದ ಬೆಲ್ಲದ, ಶಂಕರ ಪಾಟೀಲ ಮುನೇನಕೊಪ್ಪ, ವಿಪ ಸದಸ್ಯರಾದ ಬಸವರಾಜ ಹೊರಟ್ಟಿ, ಪ್ರದೀಪ ಶೆಟ್ಟರ್, ಹುಡಾ ಅಧ್ಯಕ್ಷ ನಾಗೇಶ ಕಲಬುರ್ಗಿ, ಕೆಎಲ್​ಇ ನಿರ್ದೇಶಕ ಶಂಕರಣ್ಣ ಮುನವಳ್ಳಿ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.

    ಮಾಧ್ಯಮಗಳಿಗೆ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಗ್ರಾಹಕರಿಗೆ ತ್ವರಿತ ಹಾಗೂ ವಿಶ್ವಾಸಾರ್ಹ ಸೇವೆ ನೀಡುವುದು. ಮಧ್ಯಮ ಹಾಗೂ ಕೆಳವರ್ಗದ ಕುಟುಂಬಗಳ ಆರ್ಥಿಕತೆಯನ್ನು ಬಲಪಡಿಸುವುದು ಸಂಸ್ಥೆಯ ಮುಖ್ಯ ಉದ್ದೇಶಗಳಾಗಿವೆ. 9000 ಕೋಟಿ ಆರ್ಥಿಕ ವಹಿವಾಟು ಹೊಂದಿದ್ದು, 800 ಕೋಟಿ ರೂ. ಠೇವಣಿ ಸಂಗ್ರಹವಿದೆ. 200 ಕೋಟಿ ರೂ. ಗಳನ್ನು ವಿವಿಧ ಹಣಕಾಸು ಸಂಸ್ಥೆಗಳಲ್ಲಿ ಹೂಡಿಕೆ ಮಾಡಲಾಗಿದೆ. 600 ಕೋಟಿ ರೂ. ವಿವಿಧ ಮಾದರಿಯ ಸಾಲ ಹಂಚಿಕೆ ಮಾಡಲಾಗಿದೆ. 2019-20ನೇ ಸಾಲಿನಲ್ಲಿ 5 ಕೋಟಿ ಲಾಭ ಗಳಿಸಿದ್ದು ಸಹಕಾರಿ ಸದಸ್ಯರಿಗೆ ದಾಖಲೆಯ ಶೇ. 25ರಷ್ಟು ಲಾಭಾಂಶ ಹಂಚಿಕೆ ಮಾಡಲಾಗಿದೆ. 60 ಸಾವಿರ ಸಹಕಾರಿ ಸದಸ್ಯರು, 350 ಜನ ಸಿಬ್ಬಂದಿ ಸಹಕಾರಿಯ ಶ್ರೇಯೋಭಿವೃದ್ಧಿಗಾಗಿ ದುಡಿಯುತ್ತಿದ್ದಾರೆ ಎಂದು ಹೇಳಿದ್ದಾರೆ.

    ಗ್ರಾಹಕರ ಅನುಕೂಲಕ್ಕಾಗಿ ಎಲ್ಲ ಶಾಖೆಗಳಲ್ಲಿ ಗಣಕೀಕೃತ ಕೋರ್ ಬ್ಯಾಂಕಿಂಗ್ ಮತ್ತು ಸೇಫ್ ಲಾಕರ್ ಸೌಲಭ್ಯ, ಸರಳ ಹಾಗೂ ಸುರಕ್ಷಿತ ಹಣ ವರ್ಗಾವಣೆಗಾಗಿ ವಿಜಯ ಪೇ ಆಪ್ ಮೂಲಕ ಮೊಬೈಲ್ ಬ್ಯಾಂಕಿಂಗ್ ಸೇವೆ, ಆರ್​ಟಿಜಿಎಸ್, ಎನ್​ಇಎಫ್​ಟಿ ಸೌಲಭ್ಯ ಕಲ್ಪಿಸಲಾಗಿದೆ. ಸಹಕಾರಿ ಸದಸ್ಯರಿಗಾಗಿ ಜನರಲ್ ಹಾಗೂ ಲೈಫ್ ಇನ್ಶೂರೆನ್ಸ್ ಸೇವೆ ನೀಡಲಾಗಿದೆ. ವಿಶಾಲ ಕರ್ನಾಟಕದಾದ್ಯಂತ ಶಾಖೆಗಳನ್ನು ತೆರೆಯಲಾಗುತ್ತಿದ್ದು, ಈ ಮಾಸಾಂತ್ಯದ ವೇಳೆಗೆ ಬಬಲೇಶ್ವರ, ದಾವಣಗೆರೆ, ಹಾವೇರಿ, ಮಂಡ್ಯ, ಮುನವಳ್ಳಿಯಲ್ಲಿ ಹೊಸ ಶಾಖೆಗಳನ್ನು ಪ್ರಾರಂಭಿಸಲಾಗುವುದು. 2021-22ರ ವೇಳೆಗೆ ರಾಜ್ಯಾದ್ಯಂತ 125 ಶಾಖೆ ತೆರೆಯುವ ಗುರಿ ಹೊಂದಲಾಗಿದೆ ಎಂದು ಪ್ರಕಟಣೆಯಲ್ಲಿ ನಿರಾಣಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts