More

    ನಾಗಾವಿ ವಿವಿ ಪುನರುಜ್ಜೀವನಕ್ಕೆ ಸಹಕಾರ

    ಚಿತ್ತಾಪುರ: ಹಿಂದಿನ ಕಾಲದಲ್ಲಿ ಶ್ರೇಷ್ಠ ವಿದ್ಯಾ ಸಂಸ್ಥೆಯಾಗಿ ಮೆರೆದ ಇಲ್ಲಿನ ಇತಿಹಾಸಪ್ರಸಿದ್ಧ ನಾಗಾವಿ ವಿಶ್ವವಿದ್ಯಾಲಯ ಪುನರುಜ್ಜೀವನಗೊಳಿಸಲು ಎಲ್ಲ ರೀತಿಯ ಸಹಕಾರ ನೀಡುವುದಾಗಿ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರ, ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ್ ಭರವಸೆ ನೀಡಿದರು.

    ನಾಗಾವಿ ಪ್ರದೇಶದ 60 ಕಂಬದ ಸ್ಮಾರಕ ಆವರಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ನಮ್ಮ ಸ್ಮಾರಕ ದರ್ಶನ ಮತ್ತು ಸಂರಕ್ಷಣೆಗಾಗಿ ಪ್ರವಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಾಗಾವಿ ವಿವಿ ಗತವೈಭವ ಮರುಕಳಿಸಲು ಸಚಿವ ಪ್ರಿಯಾಂಕ್ ಖರ್ಗೆ ನೇತೃತ್ವ ವಹಿಸಬೇಕು. ವಿವಿಯನ್ನು ಮತ್ತೆ ಕಟ್ಟಲು ಸರ್ಕಾರ ಮತ್ತು ಪ್ರವಾಸೋದ್ಯಮ ಇಲಾಖೆಯಿಂದ ಎಲ್ಲ ರೀತಿಯ ಸಹಾಯ ನೀಡುವುದಾಗಿ ಹೇಳಿದರು.

    ಇತಿಹಾಸಕಾರರು ನಾಗಾವಿ ನಾಡಿನ ಗತವೈಭವ ಸಾರುವ ನಾಗಾವಿ ಘಟಿಕ ಸ್ಥಾನದ ಕುರಿತು ವಿವರಿಸುವಾಗ ನನಗೆ ಸಾಕಷ್ಟು ಸಂತಸವಾಯಿತು. ಕನ್ನಡದ ಮೊಟ್ಟ ಮೊದಲ ವಿವಿ ಎಂಬುದನ್ನು ತಿಳಿದು ಹೆಮ್ಮೆ ಪಟ್ಟಿz್ದೆÃನೆ. ಎಲ್ಲರೂ ನಳಂದ ವಿವಿ ಮೊಟ್ಟಮೊದಲ ಯುನಿವರ್ಸಿಟಿ ಎನ್ನುತ್ತಾರೆ. ಆದರೆ ಕನ್ನಡದ ಮೊಟ್ಟಮೊದಲ ವಿವಿ ನಾಗಾವಿ. ಇಲ್ಲಿ ಕಾನೂನು, ಗಣಿತ, ವೇದ, ಮನು ಸಾಹಿತ್ಯ ಸೇರಿ ಹಲವಾರು ವಿಷಯಗಳ ಬಗ್ಗೆ ಹೇಳಿಕೊಡಲಾಗುತ್ತಿತ್ತು. ಸುಮಾರು 1800 ವರ್ಷ ಹಿಂದೆ ವಿವಿ ಕೆಲಸ ಮಾಡುತ್ತಿತ್ತು ಎಂಬುದೇ ಹಿರಿಮೆ ಎಂದು ಬಣ್ಣಿಸಿದರು.

    ಇಂತಹ ಐತಿಹಾಸಿಕ ಕೇಂದ್ರವನ್ನು ಸಂಶೋಧನೆಗೆ ಒಳಪಡಿಸಬೇಕಿದೆ. ಈ ನಿಟ್ಟಿನಲ್ಲಿ ಹಂಪಿ ಕನ್ನಡ ವಿವಿಯಿಂದ ಪಿಜಿ ಅಥವಾ ಸಂಶೋಧನಾ ಕೇಂದ್ರ ತೆರೆದು ಮತ್ತಷ್ಟು ಬೆಳಕು ಚೆಲ್ಲುವ ಕೆಲಸ ಮಾಡಲಾಗುವುದು. ಈ ನಾಡಿನ ಬಗ್ಗೆ ನಮಗೆಲ್ಲ ಅಭಿಮಾನ ಇರಬೇಕು. ನಾಗಾವಿಯ ಶಿಲಾ ಶಾಸನಗಳನ್ನು ರಕ್ಷಿಸಿ ಮುಂದಿನ ಪೀಳಿಗೆಗೆ ತಿಳಿಸಬೇಕಿದೆ ಎಂದರು.

    ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, ಕರ್ನಾಟಕ ಹಲವು ವೈವಿಧ್ಯಗಳಿಂದ ಕೂಡಿದೆ. ಪ್ರತಿ 150 ಕಿಮೀಗೆ ಭಾಷೆ, ಆಚಾರ, ವಿಚಾರ, ಸಂಸ್ಕೃತಿ ಬದಲಾಗುತ್ತದೆ. ಹೀಗಾಗಿ ನಮ್ಮ ರಾಜ್ಯವನ್ನು ಒಂದು ರಾಜ್ಯ, ಹಲವು ಜಗತ್ತು ಎಂದೇ ಕರೆಯಲಾಗುತ್ತದೆ. ಓರಿಯಂಟಲ್ ಸಿಮೆಂಟ್ ಕಂಪನಿ ನಾಗಾವಿ ಯಲ್ಲಮ್ಮ ದೇವಾಲಯ ಅಭಿವೃದ್ಧಿಗೆ ಮುಂದೆ ಬಂದಿದೆ. ಶೀಘ್ರದಲ್ಲೇ ಕೆಲಸ ಶುರುವಾಗಲಿದೆ ಎಂದು ಹೇಳಿದರು.

    ಎಫ್‌ಕೆಸಿಸಿಐ ಅಧ್ಯಕ್ಷ ರಮೇಶಚಂದ್ರ ಲಾಹೋಟಿ, ರಾಜ್ಯ ಪುರಾತತ್ವ ಇಲಾಖೆ ಆಯುಕ್ತ ಎ.ದೇವರಾಜ, ಕಲ್ಕಿ ಫೌಂಡೇಷನ್‌ನ ಕಾರ್ತಿಕ್ ಕಿಟ್ಟು, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಆರ್ಟಿಟೆಕ್ಟ್ ಕರ್ನಾಟಕ ಚಾಪ್ಟರ್ ಅಧ್ಯಕ್ಷ ಮೋಯಿನ್ ಹರೀಶ್ ಮಾತನಾಡಿದರು.

    ಶಾಸಕರಾದ ಅಲ್ಲಮಪ್ರಭು ಪಾಟೀಲ್, ತಿಪ್ಪಣ್ಣಪ್ಪ ಕಮಕನೂರ, ಡಿಸಿ ಬಿ.ಫೌಜಿಯಾ ತರನ್ನುಮ್, ಜಿಪಂ ಸಿಇಒ ಭನ್ವರ್‌ಸಿಂಗ್ ಮೀನಾ, ಎಸ್‌ಪಿ ಅಡ್ಡೂರು ಶ್ರೀನಿವಾಸುಲು, ತಹಸೀಲ್ದಾರ್ ಷಾಷಾವಲಿ, ತಾಪಂ ಇಒ ನೀಲಗಂಗಾ ಬಬಲಾದ, ಪುರಸಭೆ ಮುಖ್ಯಾಧಿಕಾರಿ ಮನೋಜಕುಮಾರ ಗುರಿಕಾರ, ಬೆಂಗಳೂರಿನ ಯುನೈಟೆಡ್ ವೇ ಸಂಸ್ಥೆಯ ರಾಜೇಶ ಕೃಷ್ಣನ್, ಪ್ರಮುಖರಾದ ಪ್ರಶಾಂತ, ಸತ್ಯಾಭ್ರತ ಶರ್ಮಾ, ಶಿವಾನಂದ ಪಾಟೀಲ್, ಸತೀಶ, ಹರ್ಷ ಲಾಹೋಟಿ, ಭಾಗಣ್ಣಗೌಡ ಸಂಕನೂರ, ಜಗದೇವ ಗುತ್ತೇದಾರ್, ವೀರಣ್ಣಗೌಡ ಪರಸರೆಡ್ಡಿ, ಭೀಮಣ್ಣ ಸಾಲಿ, ನಾಗರೆಡ್ಡಿ ಪಾಟೀಲ್ ಕರದಾಳ, ಚಂದ್ರಶೇಖರ ಕಾಶಿ, ಶೀಲಾ ಕಾಶಿ, ಮಲ್ಲಿಕಾರ್ಜುನ ಕಾಳಗಿ, ಶಿವರುದ್ರ ಭೀಣಿ, ಜಗಣ್ಣಗೌಡ ರಾಮತೀರ್ಥ, ಮುಕ್ತಾರ್ ಪಟೇಲ್, ಈರಪ್ಪ ಬೋಯಿ, ಸುನೀಲ್ ದೊಡ್ಮನಿ, ನಾಗರೆಡ್ಡಿ ಗೋಪಶೇನ್ ಇತರರಿದ್ದರು.

    ಅಶ್ವಿನಿ, ವಿನಯ ಶಿಲ್ಪಿ ಪ್ರಾರ್ಥನೆ ಗೀತೆ, ಕನ್ಯಾ ಪ್ರೌಢ ಶಾಲೆ ವಿದ್ಯಾರ್ಥಿನಿಯರು ನಾಡ ಗೀತೆ ಹಾಡಿದರು. ಸೇಡಂ ಸಹಾಯಕ ಆಯುಕ್ತ ಆಶಪ್ಪ ಸ್ವಾಗತಿಸಿದರು. ಸಂತೋಷಕುಮಾರ ಶಿರನಾಳ ನಿರೂಪಣೆ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts