More

    ಬೇಸಿಗೆಗೂ ತಂಪು… ರೋಗನಿರೋಧಕ ಶಕ್ತಿಯೂ ಸೊಂಪು ಈ ಕೂಲ್​, ಕೂಲ್​ ಜ್ಯೂಸ್​; ಹೇಗೆ ಮಾಡುವುದು ಗೊತ್ತಾ?

    ನವದೆಹಲಿ: ಈಗ ಬೇಸಿಗೆಯ ಕಾಲ. ನೆತ್ತಿ ಸುಡುವಂಥ ಬಿಸಿಲು. ಜತೆಗೆ ಕೋವಿಡ್​ 19ನಿಂದಾಗಿ ಮೇ 3ರವರೆಗೆ ಮನೆಗಳಲ್ಲೇ ಕೂರಬೇಕಾದ ಅನಿವಾರ್ಯತೆ. ಹೀಗಾಗಿ ನಮ್ಮ ಪ್ರಿಯವಾದ ಹೋಟೆಲ್​ಗೆ ಹೋಗಿ, ಇಷ್ಟವಾದ ಭಕ್ಷ್ಯವನ್ನು ಆಸ್ವಾದಿಸುವುದೂ ಕಷ್ಟವಾಗಿದೆ. ಹಾಗಾಗಿ ದೇಹಕ್ಕೂ ತಂಪಾದ, ಕರೊನಾ ಸೋಂಕಿನಿಂದ ದೂರವುಳಿಯಲು ರೋಗನಿರೋಧಕ ಶಕ್ತಿಯನ್ನೂ ಹೆಚ್ಚಿಸುವ ಪಾನೀಯ ಕುಡಿವುದು ಒಳ್ಳೆಯದಲ್ಲವೇ?

    ಆ ಪಾನೀಯ ಯಾವುದು? ಹೇಗೆ ಮಾಡುವುದು ಎಂಬ ನಿಮ್ಮ ಕುತೂಹಲ ತಣಿಸುವ ಮಾಹಿತಿ ಇಲ್ಲಿದೆ.

    ಈ ಜ್ಯೂಸ್​ ತಯಾರಿಸಲು ಮುಖ್ಯವಾಗಿ ಮೂರು ಸಾಮಗ್ರಿಗಳು ಬೇಕಾಗುತ್ತವೆ. ಬಾಳೆಹಣ್ಣು, ಪೀನಟ್​ ಬಟರ್​ ಮತ್ತು ಅರಿಷಿಣದ ಪುಡಿ.

    ಒಟ್ಟಾರೆ ಬೇಕಾಗುವ ಸಾಮಗ್ರಿಗಳ ಪಟ್ಟಿ ಇಂತಿದೆ: ಒಂದು ಬಾಳೆಹಣ್ಣು, ಒಂದು ಟೇಬಲ್​ ಸ್ಪೂನ್​ ಪೀನಟ್​ ಬಟರ್​, ಒಂದು ಟೇಬಲ್​ ಸ್ಪೂನ್​ ಅರಿಷಿಣದ ಪುಡಿ, ಒಂದು ಟೇಬಲ್​ ಸ್ಪೂನ್​ ಹಸಿ ಶುಂಠಿ (ಚೆನ್ನಾಗಿ ಹೆಚ್ಚಿಕೊಂಡಿರಬೇಕು), ಒಂದು ಟೇಬಲ್​ ಸ್ಪೂನ್​ ಚಿಯಾ ಬೀಜ, ಕಾಲು ಕಪ್​ ಓಟ್ಸ್​, 1 ಕಪ್​ ಹಾಲು, ಒಂದು ಚಿಟಿಕೆ ಕಪ್ಪುಮೆಣಸಿನ ಪುಡಿ, ಕಾಲು ಕಪ್​ ಬ್ಲ್ಯೂಬೆರೀಸ್​ (ಬೇಕಾದರೆ)

    ಮಾಡುವ ಬಗೆ: ಮೇಲೆ ಹೇಳಿದ ಎಲ್ಲ ಸಾಮಗ್ರಿಗಳನ್ನು ಮಿಕ್ಸಿ ಜಾರ್​ಗೆ ಹಾಕಿ ಚೆನ್ನಾಗಿ ರುಬ್ಬಿಕೊಳ್ಳಬೇಕು. ಇದಕ್ಕೆ ಸ್ವಲ್ಪ ನೀರು ಮತ್ತು ಐಸ್​ ಕ್ಯೂಬ್​ ಹಾಕಿ ಕುಡಿದರೆ, ತಂಡಾ, ತಂಡಾ ಕೂಲ್​, ಕೂಲ್​ ಹಾಗೂ ರೋಗನಿರೋಧಕ ಶಕ್ತಿಯೂ ಸೊಂಪು.

    ದೇಣಿಗೆಯಾಗಿ ಚೀನಾದಿಂದ ಬಂದವು ಪಿಪಿಇ, ಒಟ್ಟು 50 ಸಾವಿರ ಪಿಪಿಇಗಳ ಗುಣಮಟ್ಟ ಕಳಪೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts