More

    ಅಪರಾಧಿಗೆ ಜೀವಾವಧಿ ಶಿಕ್ಷೆ, 25 ಸಾವಿರ ರೂಪಾಯಿ ದಂಡ

    ವಿಜಯಪುರ: ತನ್ನ ತಾಯಿಗೆ ಚುಡಾಯಿಸುತ್ತಿರುವ ಕುರಿತು ಪ್ರಶ್ನಿಸಲು ಹೋದ ವ್ಯಕ್ತಿಯನ್ನು ಚಿಕನ್ ಅಂಗಡಿ ಮಾಲೀಕ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ 1ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆರೋಪಿಗೆ ಜೀವಾವಧಿ ಶಿಕ್ಷೆ ಹಾಗೂ 25 ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ.

    ವಿಜಯಪುರ ತಾಲೂಕಿನ ಖತಿಜಾಪುರದ ಖಾಜಲ್ ಅಮೀನಸಾಬ ಮನಗೂಳಿ ಶಿಕ್ಷೆಗೆ ಒಳಗಾದ ಅಪರಾಧಿ. ಈತ ಅದೇ ಗ್ರಾಮದ ಇಸ್ಮಾಯಿಲ್ ಮಸ್ತಾನಸಾಬ ಮುಲ್ಲಾ ಎಂಬವವನನ್ನು ಕೊಲೆ ಮಾಡಿ ಜೈಲು ಸೇರಿದ್ದನು. 26-12 2020 ರಂದು ಈ ಘಟನೆ ನಡೆದಿತ್ತು. ಕೊಲೆಯಾದ ಇಸ್ಮಾಯಿಲ್ ಮುಲ್ಲಾ ಅಮೀನಸಾಬ ಮನಗೂಳಿ ಎಂಬುವವವರ ತಾಯಿಗೆ ಶಿಕ್ಷೆಗೆ ಒಳಗಾದ ಆರೋಪಿ ಪದೇ ಪದೇ ಚುಡಾಯಿಸುತ್ತಿದ್ದ.

    ಈ ಸಂಬಂಧ ಆತನ ತಾಯಿ ಹಸೀನಾ ಮುಲ್ಲಾ ತನ್ನ ಹಿರಿಯ ಮಗ ಇಸ್ಮಾಯಿಲ್ ಮುಲ್ಲಾಗೆ ವಿಷಯ ತಿಳಿಸಿದ್ದಳು. ಇದರಿಂದ ಕೋಪಿತಗೊಂಡ ಇಸ್ಮಾಯಿಲ್ ಶಿಕ್ಷೆಗೆ ಒಳಗಾದ ಆರೋಪಿ ಖಾಜಲ್ ಮನಗೂಳಿ ಅವರ ಚಿಕನ್ ಅಂಗಡಿಗೆ ತೆರಳಿ ತನ್ನ ತಾಯಿಯನ್ನು ಏಕೆ ಚುಡಾಯಿಸುತ್ತಿ? ಎಂದು ಪ್ರಶ್ನಿಸಿದ್ದ. ಈ ಸಂಬಂಧ ಇಬ್ಬರ ನಡುವೆ ವಾದವಿವಾದವಾಗಿತ್ತು.

    ಇದರಿಂದ ಕೋಪಿತಗೊಂಡ ಆರೋಪಿ ಅಂಗಡಿಯಲ್ಲಿದ್ದ ಚಾಕು ತೆಗೆದುಕೊಂಡು ಹೊಡೆಯಲು ಹೋದಾಗ ಮೃತ ಓಡಿ ಹೋಗಲು ಪ್ರಯತ್ನಿಸಿದರೂ ಬೆನ್ನು ಹತ್ತಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದನು. ಈ ಸಂಬಂಧ ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

    ಈ ಸಂಬಂಧ ಗ್ರಾಮೀಣ ಪೊಲೀಸರು ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದ್ದರು. ವಿಚಾರಣೆ ನಡೆಸಿದ 1ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಸುಭಾಷ ಸಂಕದ ವಾದ, ವಿವಾದ ಆಲಿಸಿ ಅಪರಾಧಿ ಖಾಜಲ್ ಮನಗೂಳಿಗೆ ಜೀವಾವಧಿ ಶಿಕ್ಷೆ ಹಾಗೂ 25 ಸಾವಿರ ರೂಪಾಯಿ ದಂಡ ವಿಧಿಸಿ ಆದೇಶಿಸಿದ್ದಾರೆ. ನ್ಯಾಯವಾದಿ ಬಿ.ಡಿ. ಬಾಗವಾನ ಸರ್ಕಾರದ ಪರ ವಾದ ಮಂಡಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts