More

    ಹಳ್ಳಾಡಿ ಮತಾಂತರ ಕೇಂದ್ರಕ್ಕೆ ಹಿಂಜಾವೇ ಮುತ್ತಿಗೆ, ನಾಲ್ವರು ವಶ

    ಕೋಟ (ಉಡುಪಿ): ಶಿರಿಯಾರ ಸಮೀಪ ಹಳ್ಳಾಡಿಯಲ್ಲಿ ಮತಾಂತರ ನಡೆಸುತ್ತಿದ್ದ ನಾಲ್ವರನ್ನು ಕೋಟ ಪೊಲೀಸರು ಭಾನುವಾರ ವಶಕ್ಕೆ ಪಡೆದಿದ್ದಾರೆ.
    ಭಾನುವಾರ ಸಾಯಂಕಾಲ 7 ಗಂಟೆ ವೇಳೆಗೆ ಭೋವಿ ಸಮುದಾಯದ ಕುಟುಂಬವೊಂದನ್ನು ಮತಾಂತರಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂಬ ಮಾಹಿತಿ ಪಡೆದ ಹಿಂದು ಜಾಗರಣ ವೇದಿಕೆ ಕಾರ್ಯಕರ್ತರು ಕೋಟ ಠಾಣೆ ಪೊಲೀಸರ ಉಪಸ್ಥಿತಿಯಲ್ಲಿ ಮುತ್ತಿಗೆ ಹಾಕಿದ್ದರು. ಪೊಲೀಸರು ಕ್ರೈಸ್ತ ಮಿಷನರಿಗಳಾದ ಜ್ಯೋತಿ, ಪ್ರಕಾಶ, ಮನೋಹರ, ರವಿ ಎಂಬುವರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ. ಇವರು ಹಿಂದೆ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದು, ಪರಿಸರದ ಇತರರನ್ನು ಮತಾಂತರ ಮಾಡುತ್ತಿದ್ದರು ಎಂದು ಆರೋಪಿಸಲಾಗಿದೆ.
    ಠಾಣೆ ಬಳಿ ಜಮಾಯಿಸಿದ ಹಿಂಜಾವೇ ಕಾರ್ಯಕರ್ತರು: ನಾಲ್ವರನ್ನು ಠಾಣೆಗೆ ಕರೆತಂದ ಕೆಲ ಹೊತ್ತಿನಲ್ಲಿ ಭಾರಿ ಪ್ರಮಾಣದಲ್ಲಿ ಹಿಂದು ಜಾಗರಣಾ ವೇದಿಕೆಯ ಕಾರ್ಯಕರ್ತರು ಜಮಾಯಿಸಿ ಮತಾಂತರ ನಡೆಸುವವರಿಗೆ ಕಠಿಣ ಶಿಕ್ಷೆ ನೀಡುವಂತೆ ಆಗ್ರಹಿಸಿವೆ. ಕೆಲ ವರ್ಷಗಳಿಂದ ಹಳ್ಳಾಡಿ, ಶಿರಿಯಾರ, ಕಾಜ್ರಳ್ಳಿ ಮೊದಲಾದ ಒಳ ಪ್ರದೇಶಗಳಲ್ಲಿ ಸಂಚು ರೂಪಿಸಿ ಸಾಕಷ್ಟು ಭೋವಿ ಹಾಗೂ ಮೊಗವೀರ ಕುಟುಂಬಗಳನ್ನು ಆರೋಪಿಗಳು ಮತಾಂತರಗೊಳಿಸಿದ್ದಾರೆ ಎಂಬ ಆರೋಪವಿದೆ. ಈ ಮಾಹಿತಿಯ ಮೇರೆಗೆ ಜಾಗರಣಾ ವೇದಿಕೆಯ ಮುಖಂಡರು ಹಾಗೂ ಕಾರ್ಯಕರ್ತರು ಪೊಲೀಸರಿಗೆ ಮಾಹಿತಿ ನೀಡಿ ದಾಳಿ ನಡೆಸಿದೆ.
    ಹಿಂದು ಜಾಗರಣಾ ವೇದಿಕೆಯ ಪ್ರಮುಖರಾದ ಪ್ರಕಾಶ್ ಕುಕ್ಕೆಹಳ್ಳಿ, ಶಂಕರ್ ಸ್ಕಂದ ಕೋಟ, ಪ್ರವೀಣ್ ಯಕ್ಷಿಮಠ, ಶಿರಿಯಾರ ಚಂದ್ರ ಆಚಾರ್ಯ, ಪ್ರಮೋದ್ ಶೆಟ್ಟಿ, ಪ್ರದೀಪ್ ಸಂಗಮ್, ಸುರೇಶ್ ಸಮತಾ, ವಕೀಲರಾದ ಶ್ಯಾಮಸುಂದರ ನಾಯಿರಿ, ಪ್ರಮೋದ್ ಹಂದೆ, ಬೋವಿ ಸಮುದಾಯ ಸಂಘಟನೆಯ ಪ್ರಮುಖರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts