More

    ಮಾಂಸ ಮಾರಾಟ ಬೆಲೆ ನಿಯಂತ್ರಿಸಿ

    ಕಾರವಾರ: ತಾಲೂಕಿನಲ್ಲಿ ಬೇಕಾಬಿಟ್ಟಿ ಬೆಲೆಗೆ ಮಾಂಸ ಮಾರಾಟ ನಡೆದಿದ್ದು, ಬೆಲೆ ನಿಯಂತ್ರಣ ಮಾಡುವ ಬಗ್ಗೆ ಬುಧವಾರ ನಡೆದ ತಾಪಂ ಸಾಮಾನ್ಯ ಸಭೆಯಲ್ಲಿ ಚರ್ಚೆ ನಡೆಯಿತು.

    ಉಪಾಧ್ಯಕ್ಷ ರವೀಂದ್ರ ಪವಾರ ಮಾತನಾಡಿ, ಸದಾಶಿವಗಡದಲ್ಲಿ ಕರೊನಾ ಲಾಕ್​ಡೌನ್ ಹಾಗೂ ನಂತರದ ದಿನದಲ್ಲಿ 400 ರೂ. ಮೌಲ್ಯದ ಪ್ರತಿ ಕೆ.ಜಿ. ಕುರಿ ಮಾಂಸವನ್ನು 700ರಿಂದ 800 ರೂ.ಗೆ ಮಾರಾಟ ಮಾಡಿ ಗ್ರಾಹಕರನ್ನು ಲೂಟಿ ಮಾಡಲಾಗುತ್ತಿದೆ. ಈ ಕುರಿತು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.

    ಆದರೆ, ಆಹಾರ ಇಲಾಖೆ ಅಧಿಕಾರಿ ಎಸ್.ವಿ. ನಾಯಕ ಮಾತನಾಡಿ, ಅದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಮಾಹಿತಿ ನೀಡಿದರು. ಎಲ್ಲ ಮಾಂಸದ ಅಂಗಡಿ ಮಾಲೀಕರ ಜತೆ ಸಭೆ ನಡೆಸಿ ಬೆಲೆ ನಿಗದಿ ಬಗ್ಗೆ ರ್ಚಚಿಸುವಂತೆ ಪಿಡಿಒಗೆ ಸೂಚನೆ ನೀಡುವುದಾಗಿ ತಾಪಂ ಇಒ ಆನಂದಕುಮಾರ ಬಾಲಣ್ಣನವರ್ ಸೂಚಿಸಿದರು.

    ಹಳಗೆ ಜೂಗ ಕಾಕೆವಾಡದಲ್ಲಿ ಅಂಗನವಾಡಿ ನಿರ್ವಣವಾಗಿ 3 ವರ್ಷ ಕಳೆದಿದೆ. ಇನ್ನೂ ಉದ್ಘಾಟನೆಯಾಗಿಲ್ಲ. ಈಗಲೇ ಬಾಗಿಲು ಹಾಳಾಗಿದೆ. ಸಿಮೆಂಟ್ ಕಿತ್ತು ಬರುತ್ತಿದೆ. ಗುತ್ತಿಗೆದಾರರಿಗೆ ನೋಟಿಸ್ ನೀಡಿ ಅದನ್ನು ರಿಪೇರಿ ಮಾಡಿಸಿ ಶೀಘ್ರ ಉದ್ಘಾಟನೆ ಮಾಡುವಂತೆ ಪ್ರಮಿಳಾ ನಾಯ್ಕ ಸೂಚಿಸಿದರು. ಹಳಗೆಜೂಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು, ಅವರು ಉಳಗಾಕ್ಕೆ ನೀರು ತರಲು ಬರುತ್ತಾರೆ. ಆ ಭಾಗಕ್ಕೆ ಶಾಶ್ವತ ಕುಡಿಯುವ ನೀರಿನ ಯೋಜನೆ ಸಿದ್ಧಪಡಿಸುವಂತೆ ಪ್ರಮಿಳಾ ನಾಯ್ಕ ಗ್ರಾಮೀಣ ಕುಡಿಯುವ ನೀರು ಇಲಾಖೆ ಅಧಿಕಾರಿಗಳಿಗೆ ಆದೇಶಿಸಿದರು.

    ತಪ್ಪು ಮಾಹಿತಿ ನೀಡಿ ಕಿಸಾನ ಸಮ್ಮಾನ್ ಯೋಜನೆಯಡಿ ಸೌಲಭ್ಯ ಪಡೆದ 200 ರೈತರಿಗೆ ನೋಟಿಸ್ ನೀಡಿದ್ದು. ಹಣ ಮರಳಿಸುವಂತೆ ಸೂಚಿಸಲಾಗಿದೆ ಎಂದು ಕೃಷಿ ಇಲಾಖೆ ಅಧಿಕಾರಿ ಜಿ.ಎನ್. ಗುಡಿಗಾರ ಮಾಹಿತಿ ನೀಡಿದರು. ತಹಸೀಲ್ದಾರ್ ರಾಮಚಂದ್ರ ಕಟ್ಟಿ, ಇಒ ಆನಂದ ಕುಮಾರ್ ಬಾಲಣ್ಣನವರ್ ಇದ್ದರು.

    ಹಣ ಕೊಡಬೇಡಿ

    ಹೆಸ್ಕಾಂನಿಂದ ಕಾರವಾರ ನಗರದಲ್ಲಿ ಸ್ಟ್ಯಾಟಿಕ್ ವಿದ್ಯುತ್ ಮಾಪಕ (ಮೀಟರ್) ಅಳವಡಿಕೆ ಕಾರ್ಯವನ್ನು ದಾವಣಗೆರೆಯ ರಾಜೇಶ್ವರಿ ಇಲೆಕ್ಟ್ರಿಕಲ್ಸ್ ಎಂಬ ಖಾಸಗಿ ಕಂಪನಿಯಿಂದ ಪ್ರಾರಂಭಿಸಲಾಗಿದೆ. 2021ರ ಮಾರ್ಚ್​ವರೆಗೆ ಕಾರವಾರ ನಗರದಲ್ಲಿ 15 ಸಾವಿರ ವಿದ್ಯುತ್ ಮೀಟರ್ ಅಳವಡಿಸುವ ಗುರಿ ಹೊಂದಲಾಗಿದೆ. ಸಾರ್ವಜನಿಕರು ಯಾವುದೇ ಹಣ ಕೊಡುವ ಅವಶ್ಯಕತೆಯಿಲ್ಲ. ಮನೆಯ ಒಳಗೆ ಮೀಟರ್ ಇದ್ದರೆ ಅದನ್ನು ಉಚಿತವಾಗಿ ಹೊರಗೆ ಹಾಕಿಕೊಡಲಾಗುತ್ತದೆ. ಉಚಿತವಾಗಿ ಸುರಕ್ಷಾ ಬಾಕ್ಸ್ ಅಳವಡಿಸುವ ಕಾರ್ಯವೂ ಇದೇ ಟೆಂಡರ್​ನಲ್ಲೇ ನಡೆದಿದೆ. ಜನರು ಸಹಕಾರ ನೀಡಬೇಕು. ಯಾವುದೇ ಕಾರಣಕ್ಕೂ ಹಣ ನೀಡಬಾರದು ಎಂದು ಹೆಸ್ಕಾಂ ಎಇಇ ವೀರೇಶ ಶೇಬಣ್ಣನವರ್ ಮಾಹಿತಿ ನೀಡಿದರು.



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts