More

    ಬುಡ ಕೊಳೆಯುವ ರೋಗ ಹತೋಟಿಗೆ ತನ್ನಿ

    ಸಿಂದಗಿ: ತಾಲೂಕಿನ ಮಂಗರೂಳ ಗ್ರಾಮದ ವಿವಿಧ ರೈತರು ಬೆಳೆದ ಪಪ್ಪಾಯ ತೋಟಗಳಿಗೆ ಮಂಗಳವಾರ ಭೇಟಿ ನೀಡಿದ ಸಹಾಯಕ ತೋಟಗಾರಿಕೆ ನಿರ್ದೇಶಕ ಗುರುಲಿಂಗಪ್ಪ ಬಗಲಿ, ಬೆಳೆಯ ಬುಡಕೊಳೆ ರೋಗದ ಹತೋಟಿಗೆ ಮುಂಜಾಗ್ರತೆ ಮತ್ತು ರೋಗ ತಗುಲಿದ ನಂತರ ಮಾಡುವ ಕ್ರಮಗಳನ್ನು ಪ್ರಾತ್ಯಕ್ಷಿಕೆ ಮೂಲಕ ತಿಳಿಸಿದರು.

    ಇತ್ತೀಚೆಗೆ ಪಪ್ಪಾಯಕ್ಕೆ ಈ ರೋಗ ತೀವ್ರವಾಗಿ ಕಾಡುತ್ತಿದೆ. ಇದರ ತಡೆಗೆ ಬೆಳೆಗೆ ನೀರು ಉಣಿಸುವ ಪ್ರಮಾಣವು ಕಡಿಮೆಗೊಳಿಸುವದು. ಬಸಿಗಾಲುವೆ ಅಳವಡಿಸಿಕೊಳ್ಳುವುದು. ಹನಿ ನೀರಾವರಿ ಲಾಟರಲ್ ಪೈಪುಗಳನ್ನು ಪಪ್ಪಾಯ ಗಿಡದ ಬುಡದಿಂದ ಕನಿಷ್ಠ 2ಅಡಿ ಅಂತರದಲ್ಲಿ ಅಳವಡಿಸಿಕೊಳ್ಳುವುದು.

    ರೋಗಬಾಧಿತ ಗಿಡಗಳಿಗೆ ಮೊದಲನೇ ಡ್ರೆಂಚಿಂಗ್ ಮೆಟಾಲಾಕ್ಸಿಲ್+ ಮ್ಯಾಂಕೋಜಬ 2ಗ್ರಾಂ. ಪ್ರತಿ ಲೀಟರ್ ನೀರಿಗೆ ಬೆರೆಸಿ ಡ್ರೆಂಚಿಂಗ್ ಕೈಗೊಳ್ಳಬೇಕು. 7ದಿನಗಳ ನಂತರದಲ್ಲಿ ಎರಡನೇ ಡ್ರೆಂಚಿಂಗ್ ಕೊಸೈಡ್-2000 2ಗ್ರಾಂ.+ಕ್ಯಾಸು-ಬಿ 2 ಎಂಎಲ್, ಪ್ರತಿ ಲೀಟರ್ ನೀರಿಗೆ ಬೆರೆಸಿ ಡ್ರೆಂಚಿಂಗ್ ಕೈಗೊಳ್ಳುವದು. ಟೈಕೋಡ್ರಮಾ 5ಗ್ರಾಂ. ಪ್ರತಿ ಲೀಟರ್ ನೀರಿಗೆ ಬೆರಸಿ ಡ್ರೆಂಚಿಂಗ್ ಕೈಗೊಳ್ಳುವುದು ಹಾಗೂ ಟೈಕೋಡ್ರಮಾದಿಂದ ಪೇಸ್ಟ್ ತಯಾರಿಸಿಕೊಂಡು ಗಿಡದ ಬುಡಕ್ಕೆ ಲೇಪನ ಮಾಡಿಕೊಳ್ಳುವ ಮೂಲಕ ರೋಗವನ್ನು ಹತೋಟಿಗೆ ತರಬೇಕು ಎಂದು ರೈತರಿಗೆ ಮಾಹಿತಿ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts