More

    Delhi Pollution: ಹೊಗೆ ಮಂಜು ಸೇರಿಕೊಂಡು ಕಲುಷಿತವಾಗುತ್ತಿರುವ ರಾಷ್ಟ್ರ ರಾಜಧಾನಿ, ಮಾಲಿನ್ಯ ನಿಯಂತ್ರಿಸಲು ಯೋಜನೆ

    ವಿಶ್ವದ ಅತ್ಯಂತ ಕಲುಷಿತ ನಗರಗಳಲ್ಲಿ ಒಂದಾಗಿರುವ ದೆಹಲಿಯಲ್ಲಿ ಗಾಳಿಯ ಗುಣಮಟ್ಟ ಮತ್ತಷ್ಟು ಕಳಪೆ ಸ್ಥಿತಿಗೆ ತಲುಪಿದೆ. ಪ್ರತಿ ವರ್ಷ ಮಾಲಿನ್ಯದ ಮೂಲಕ ಸದ್ದು ಮಾಡುವ ದೆಹಲಿಗೆ ದೇಶದಲ್ಲೇ ಅತ್ಯಂತ ಕಲುಷಿತ ನಗರ ಎಂಬ ಹಣೆಪಟ್ಟಿ ಸಿಕ್ಕಿದೆ.


    ದೆಹಲಿಯ ಕೆಲವು ಭಾಗಗಳಲ್ಲಿ AQI(ಏರ್​​ ಕ್ವಾಲಿಟಿ ಇಂಡೆಕ್ಸ್​) 300 ಕ್ಕಿಂತ ಹೆಚ್ಚು ದಾಖಲಾಗಿದೆ. ಇದನ್ನು ತೀವ್ರ ಕಳಪೆ ಎಂದು ಪರಿಗಣಿಸಲಾಗುತ್ತೆ. ಅದೆಷ್ಟೋ ನಗರಗಳು ಮಾಲಿನ್ಯದಲ್ಲಿ ಮುಳುಗಿ ಹೋಗಿವೆ. ಆದರೂ ರಾಜಧಾನಿ ದೆಹಲಿ ಎಲ್ಲಾ ನಗರಗಳನ್ನೂ ಮೀರಿಸಿ ಮುನ್ನುಗ್ಗುತ್ತಿದೆ. ಅಲ್ಲಿ ವಾಸ ಮಾಡುವ ಜನಗಳಿಗೆ ಉಸಿರು ಬಿಗಿಹಿಡಿದು ಬದುಕುವ ಪರಿಸ್ಥಿತಿ ಇದೆ.


    ಹಾಗಾಗಿ ಹೆಚ್ಚುತ್ತಿರುವ ವಾಯುಮಾಲಿನ್ಯವನ್ನು ತಡೆಗಟ್ಟಲು ಸರ್ಕಾರ ಹೊಸ ಯೋಜನೆಗಳನ್ನ ಜಾರಿಗೆ ತರೋಕೆ ಮುಂದಾಗಿದೆ. ಖಾಲಿ ಜಾಗದಲ್ಲಿ ಏನನ್ನೂ ಸುಡಬಾರದು ಎಂದು ಆದೇಶ ಹೊರಡಿಸಲಾಗಿದೆ.


    ವಾಯು ಮಾಲಿನ್ಯವನ್ನು ಅಂದಾಜು ಮಾಡುವ ಪಿಎಂ 2.5 ಸಾಂದ್ರತೆಯು, ಪ್ರತಿ ಘನ ಮೀಟರ್‌ಗೆ 100 ಮೈಕ್ರೋಗ್ರಾಂ ಇದೆ. ಸರ್ಕಾರ ನಿಗದಿ ಮಾಡಿದ ಸುರಕ್ಷಿತ ಮಟ್ಟಕ್ಕಿಂತಲೂ ಇದು 3 ಪಟ್ಟು ಹೆಚ್ಚು. ಹೀಗಾಗಿ ಆತಂಕ ಮತ್ತಷ್ಟು ಹೆಚ್ಚಾಗಿದೆ.


    ಕಳೆದ 24 ಗಂಟೆಗಳಲ್ಲಿ ದೆಹಲಿಯು 212 AQI ಅನ್ನು ದಾಖಲಿಸಲಾಗಿದ್ದು, ಇದನ್ನು ಕಳಪೆ ಮಟ್ಟವೆಂದು ಪರಿಗಣಿಸಲಾಗುತ್ತೆ. ಪ್ರತಿ ವರ್ಷ, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕಣ್ಣು ಕುಟುಕುವ ಹೊಗೆ ಮತ್ತು ತೀವ್ರ ವಿಷಕಾರಿ ಗಾಳಿಯೊಂದಿಗೆ ಕೂಡಿರುತ್ತದೆ.


    ದೀಪಾವಳಿಯ ಸಮಯದಲ್ಲಿ ಪಟಾಕಿಗಳ ಹೊರಸೂಸುವಿಕೆಯು ಪರಿಸ್ಥಿತಿ ಮತ್ತಷ್ಟು ಹದಗೆಡುವ ಸಾಧ್ಯತೆಯೂ ಇದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts