More

    ನಿಯಂತ್ರಣಗೊಳ್ಳದ ಕರೊನಾ, ಕೊಪ್ಪಳ ಜಿಲ್ಲೆ ಮತ್ತೆ 7 ದಿನ ಸಂಪೂರ್ಣ ಲಾಕ್ ಎಂದ ಡಿಸಿ ಎಸ್.ವಿಕಾಸ್ ಕಿಶೋರ್

    ಕೊಪ್ಪಳ: ಜಿಲ್ಲೆಯಲ್ಲಿ ಕರೊನಾ ಸೋಂಕು ಹರಡುವುದನ್ನು ನಿಯಂತ್ರಿಸಲು ಘೋಷಿಸಿದ್ದ ಮೊದಲ ಹಂತದ ಸಂಪೂರ್ಣ ಲಾಕ್‌ಡೌನ್ ಶುಕ್ರವಾರಕ್ಕೆ ಮುಗಿದಿದೆ. ಮೇ 24ರಿಂದ 30ವರೆಗೆ ಮತ್ತೆ 7 ದಿನಗಳವರೆಗೆ ಎರಡನೇ ಹಂತದ ಸಂಪೂರ್ಣ ಲಾಕ್‌ಡೌನ್ ವಿಧಿಸಲಾಗುವುದೆಂದು ಜಿಲ್ಲಾಧಿಕಾರಿ ಎಸ್.ವಿಕಾಸ್ ಕಿಶೋರ್ ತಿಳಿಸಿದ್ದಾರೆ.

    ಐದು ದಿನ ಸಂಪೂರ್ಣ ಲಾಕ್‌ಡೌನ್ ವಿಧಿಸಿದರೂ, ಸೋಂಕು ನಿಯಂತ್ರಣ ಸಾಧ್ಯವಾಗಿಲ್ಲ. ಮೊದಲಿಗಿಂತ ಹೆಚ್ಚು ಪ್ರಕರಣಗಳು ವರದಿಯಾಗುತ್ತಿದ್ದು, ಸಾವಿನ ಪ್ರಮಾಣವೂ ಏರಿಕೆ ಹಂತದಲ್ಲಿದೆ. ಶನಿವಾರ ಮತ್ತು ಭಾನುವಾರ ಲಾಕ್‌ಡೌನ್ ಮುಂದುವರಿಯಲಿದ್ದು, ರಾಜ್ಯ ಸರ್ಕಾರ ವಿಧಿಸಿದ ಮಾರ್ಗಸೂಚಿಗಳು ಅನ್ವಯಯವಾಗಲಿವೆ. ಪುನಃ ಮೇ 24ರಿಂದ 30ವರೆಗೆ ಸಂಪೂರ್ಣ ಲಾಕ್‌ಡೌನ್ ಮುಂದುವರಿಯಲಿದ್ದು, ವಿನಾಯಿತಿ ಕೆಲಸಗಳಿಗೆ ಹೊರತು ಪಡಿಸಿ ಜನ ಸಂಚಾರ ಬಂದ್ ಆಗಲಿದೆ. ಲಾಕ್‌ಡೌನ್ ಅವಧಿಯಲ್ಲಿ ಅಗತ್ಯ ವಸ್ತುಗಳನ್ನು ಮನೆ ಮನೆಗೆ ಪೂರೈಸಲು ಕ್ರಮ ಕೈಗೊಳ್ಳಲಾಗುವುದು. ಹೀಗಾಗಿ ಮೇ 22 ಮತ್ತು 23ರಂದು ಜನರು ಅಗತ್ಯ ವಸ್ತುಗಳನ್ನು ಕೊಳ್ಳುವ ನೆಪದಲ್ಲಿ ನಿಯಮಗಳನ್ನು ಉಲ್ಲಂಘಿಸಬಾರದು. ಗುಂಪು ಗುಂಪಾಗಿ ಸೇರದೆ, ಪರಸ್ಪರ ಅಂತರ ಕಾಯ್ದುಕೊಂಡು, ಮಾಸ್ಕ್ ಧರಿಸಿ ವ್ಯವಹರಿಸಬೇಕೆಂದು ಮನವಿ ಮಾಡಿದ್ದಾರೆ.

    ಮೇ 21ಕ್ಕೆ ಮೊದಲ ಹಂತದ ಸಂಪೂರ್ಣ ಲಾಕ್‌ಡೌನ್ ಮುಗಿದಿದೆ. ಜನರ ಆರೋಗ್ಯ ದೃಷ್ಟಿಯಿಂದ ಮೇ 24ರಿಂದ 30ವರೆಗೆ ಲಾಕ್‌ಡೌನ್ ಮುಂದುವರಿಸಲಾಗುವುದು. ಜನರು ನಿಯಮ ಮೀರದೆ ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕು. ಕರೊನಾ ವಿರುದ್ಧದ ಹೋರಾಟಕ್ಕೆ ನಮ್ಮೊಡನೆ ಕೈ ಜೋಡಿಸಬೇಕು.
    | ಎಸ್.ವಿಕಾಸ್ ಕಿಶೋರ್, ಕೊಪ್ಪಳ ಜಿಲ್ಲಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts