More

    ನೃತ್ಯ, ಲಲಿತಕಲೆಗಳ ಬೆಳವಣಿಗೆಗೆ ಅನೇಕರ ಕೊಡುಗೆ: ಡಾ.ಕೆ.ಕುಮಾರ್ ಹೇಳಿಕೆ

    ಮೈಸೂರು: ನಮ್ಮ ಪೂರ್ವಿಕರ ಕಾಲದಿಂದಲೇ ನೃತ್ಯ, ಲಲಿತಕಲೆಗಳು ನಿರಂತರವಾಗಿ ನಡೆದು ಬಂದಿದ್ದು, ಅನೇಕರು ಪ್ರೋತ್ಸಾಹ ನೀಡಿದ್ದಾರೆ ಎಂದು ಮೈಸೂರು ವಿಶ್ವವಿದ್ಯಾಲಯದ ಲಲಿತಕಲಾ ಕಾಲೇಜಿನ ನೃತ್ಯ ವಿಭಾಗದ ಮುಖ್ಯಸ್ಥ ಡಾ.ಕೆ.ಕುಮಾರ್ ಹೇಳಿದರು.
    ನಗರದ ಶ್ರೀಜಯಚಾಮರಾಜ ಅರಸು ಎಜುಕೇಷನ್ ಟ್ರಸ್ಟ್, ಶ್ರೀಜಯಚಾಮರಾಜೇಂದ್ರ ಸ್ಕೂಲ್ ಫಾರ್ ಎಕ್ಸಲೆನ್ಸ್‌ನಿಂದ ಶಾಲೆಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ವಾರ್ಷಿಕೋತ್ಸವ ‘ಕಲಾಸೌರಭ’ ಹಾಗೂ 10ನೇ ಚಾಮರಾಜ ಒಡೆಯರ್ ಅವರ 161ನೇ ಜಯಂತಿಗೆ ಚಾಲನೆ ನೀಡಿ ಮಾತನಾಡಿದರು.
    ದೇಶದಲ್ಲಿ ಕಲೆ, ಸಾಹಿತ್ಯ, ಸಂಸ್ಕೃತಿ ಪುರಾತನ ಕಾಲದಿಂದಲೂ ನಡೆದು ಬಂದಿದೆ. ಮೈಸೂರು ಅರಸರು ಸೇರಿದಂತೆ ಅನೇಕರು ಪ್ರೋತ್ಸಾಹ ನೀಡುತ್ತಾ ಬಂದಿರುವುದರಿಂದ ಗಟ್ಟಿಯಾಗಿ ನೆಲೆಯೂರಿ ನಿಂತಿದೆ ಎಂದರು.
    ಅಧ್ಯಕ್ಷತೆ ವಹಿಸಿದ್ದ ಟ್ರಸ್ಟ್‌ನ ಉಪಾಧ್ಯಕ್ಷೆ ಡಾ. ಭಾರತಿ ಶ್ರೀಧರ್ ರಾಜೇ ಅರಸ್ ಮಾತನಾಡಿ, ಮೊದಲ ವರ್ಷದ ವಾರ್ಷಿಕೋತ್ಸವವಾದರೂ ಹಳೆಯ ವಿದ್ಯಾರ್ಥಿ, ಮಕ್ಕಳು ಹಾಗೂ ಶಿಕ್ಷಕರೊಳಗೊಂಡ ಸಾಂಸ್ಕೃತಿಕ ಕಾರ್ಯಕ್ರಮ ಅದ್ಭುತವಾಗಿತ್ತು. ಮಕ್ಕಳು ತಮ್ಮ ಪ್ರತಿಭೆ ಪ್ರದರ್ಶಿಸುವ ಮೂಲಕ ಭವಿಷ್ಯದ ಕಲಾವಿದರು ಎನ್ನುವುದನ್ನು ಸಾಬೀತುಪಡಿಸಿದರು ಎಂದರು.
    ಶಾಲೆಯ ಕಾರ್ಯದರ್ಶಿ ಮಹೇಶ್ ಎನ್.ಅರಸ್ ಮಾತನಾಡಿ, ಚಾಮರಾಜ ಒಡೆಯರ್ ಮೈಸೂರಿನ ಜನತೆಗೆ ಕೊಟ್ಟ ಕೊಡುಗೆಯನ್ನು ಸ್ಮರಿಸಿದರಲ್ಲದೇ, ಶಾಲೆಯ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಯನ್ನು ಮೆಚ್ಚಿ ಅವರ ಮುಂದಿನ ವಿದ್ಯಾರ್ಥಿ ಜೀವನವು ಸಾಧನೆಯ ಪ್ರಗತಿಯತ್ತ ಮುಂದುವರಿಯುವುದರಲ್ಲಿ ಸಂಶಯವಿಲ್ಲ ಎಂದರು.
    ಕಾರ್ಯಕ್ರಮದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ ವಿದ್ಯಾರ್ಥಿ ಹಾಗೂ ಶಿಕ್ಷಕರಿಗೆ ಬಹುಮಾನ ವಿತರಿಸಲಾಯಿತು. ಬಳಿಕ ಮಕ್ಕಳಿಂದ ಅತ್ಯಾಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಶಾಲೆಯ ಹಳೆಯ ವಿದ್ಯಾರ್ಥಿಗಳು ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಿಕೊಟ್ಟಿದ್ದು ವಿಶೇಷವಾಗಿತ್ತು.
    ಶ್ರೀಜಯಚಾಮರಾಜ ಅರಸು ಎಜುಕೇಶನ್ ಟ್ರಸ್ಟ್ ಸದಸ್ಯರು, ಶಿಕ್ಷಕರು, ಶಿಕ್ಷಕೇತರ ವೃಂದದವರು, ಪೋಷಕರು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts