More

    ಗುತ್ತಿಗೆದಾರ ಅಂಬಿಕಾಪತಿ ಕಾಂಗ್ರೆಸ್ಸೆ? ಆತ ಜೆಡಿಎಸ್; ಸಚಿವ ಬೈರತಿ ಸುರೇಶ್

    ಬೆಂಗಳೂರು: ಗುತ್ತಿಗೆದಾರರ ಮನೆಯ ಮೇಲೆ ನಡೆದ ಐಟಿ ರೇಡ್ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ವಾಗ್ಯುದ್ಧಕ್ಕೆ ಅಸವಾಗಿದೆ.
    ಬಿಜೆಪಿ, ಜೆಡಿಎಸ್ ಈ ಪ್ರಕರಣವನ್ನು ಮುಂದಿಟ್ಟು ಆಡಳಿತ ಕಾಂಗ್ರೆಸ್‌ಗೆ ಹಿಗ್ಗಾ ಮುಗ್ಗಾ ತರಾಟೆ ತೆಗೆದುಕೊಳ್ಳುತ್ತಿವೆ.

    ಈ ನಡುವೆ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್, ಗುತ್ತಿಗೆದಾರ ಅಂಬಿಕಾಪತಿ ಕಾಂಗ್ರೆಸ್ ಪಕ್ಷದವನಾ? ಅವನು ಜೆಡಿಎಸ್ ಎಂದು ತಿರುಗೇಟು ನೀಡಿದ್ದಾರೆ.

    ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಐಟಿ ರೇಡ್ ಬಗ್ಗೆ ಬಿಜೆಪಿ ಆರೋಪ ಸತ್ಯಕ್ಕೆ ದೂರವಾಗಿದೆ. ಯಾರ ಮೇಲೆ ರೇಡ್ ಆಗಿದೆಯೋ ಅವರು ದುಡ್ಡು ತಮ್ಮದೇ ಎಂದು ಹೇಳಿದ್ದಾರೆ. ಅವರೇ ಅದನ್ನು ಸ್ಪಷ್ಟಪಡಿಸಿದ ಮೇಲೆ ರಾಜಕೀಯ ಏಕೆ ತರಬೇಕು ಎಂದು ಪ್ರಶ್ನಿಸಿದರು. ಬಿಜೆಪಿ ಮತ್ತು ಜೆಡಿಎಸ್‌ನವರು ಕಾಂಗ್ರೆಸ್ ಮೇಲೆ ಗೂಬೆ ಕುರಿಸುವ ಕೆಲಸ ಮಾಡುತ್ತಿದ್ದಾರೆ. ಇದು ತಪ್ಪು ಎಂದು ಹೇಳಿದರು.

    ಕಾಂಗ್ರೆಸ್ ಎಲ್ಲೂ ಇದು ಬಿಜೆಪಿ ದುಡ್ಡು ಜೆಡಿಎಸ್ ದುಡ್ಡು ಎಂದು ಹೇಳುತ್ತಿಲ್ಲ. ಗುತ್ತಿಗೆದಾರರ ಬಳಿ ಸಿಕ್ಕ ಹಣ ಅದರ ಬಗ್ಗೆ ಅವರೇ ಉತ್ತರ ಕೊಡುತ್ತಾರೆ. ಯಾರು ತಪ್ಪು ಮಾಡಿದ್ದಾರೆ ಅವರು ಅದರ ಫಲ ಉಣ್ಣುತ್ತಾರೆ. ವೈಎಸ್‌ಟಿ ಟ್ಯಾಕ್ಸ್, ಎಸ್‌ಎಸ್ ಟ್ಯಾಕ್ಸ್ ಎಂಬುದೆಲ್ಲ ಸುಳ್ಳು. ನನಗೆ ಗುತ್ತಿಗೆದಾರ ಸಂತೋಷ ಎನ್ನುವವರು ಯಾರು ಎಂಬುದು ಗೊತ್ತಿಲ್ಲ. ಅಂಬಿಕಾಪತಿ ಕಾಂಗ್ರೆಸ್ ಪಾರ್ಟಿನಾ? ಅವನು ಜೆಡಿಎಸ್ ಪಾರ್ಟಿ. ಅಂಬಿಕಾಪತಿಯನ್ನು ನಾನು ಜೀವನದಲ್ಲೇ ನೋಡಿಲ್ಲ. ಅಮೇಲೆ ಆತ ಅಖಂಡ ಶ್ರೀನಿವಾಸಮೂರ್ತಿ ಭಾವ ಎಂದು ಆಮೇಲೆ ನನಗೆ ಗೊತ್ತಾಯಿತು. ಜೆಡಿಎಸ್‌ನಿಂದ ಕಾರ್ಪೋರೇಟರ್ ಆಗಿದ್ದರು ಎಂದು ಇವತ್ತು ಬೆಳಗ್ಗೆ ಗೊತ್ತಾಯಿತು. ಅವರ ಮಗನೇ ಹೇಳಿದ್ದಾರೆ ಇದು ನಮ್ಮದೇ ದುಡ್ಡು. ಅದಕ್ಕೆ ತೆರಿಗೆ ಕಟ್ಟಿದ್ದೇನೆ ಎಂದು. ಅವರೇ ಹೇಳಬೆಕಾದರೆ ಅದಕ್ಕೆ ಬೇರೆಯವರು ಪ್ರತಿಕ್ರಿಯಿಸುವುದರಲ್ಲಿ ಅರ್ಥವೇ ಇಲ್ಲ ಎಂದು ಬೈರತಿ ಸುರೇಶ್ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts