More

    ಗುತ್ತಿಗೆ ಕಾರ್ಮಿಕರ ಉದ್ಯೋಗ ಭದ್ರತೆಗೆ ಹೋರಾಟ

    ಗಂಗಾವತಿ: ವಿವಿಧ ಇಲಾಖೆಗಳಲ್ಲಿ ದುಡಿಯುತ್ತಿರುವ ಗುತ್ತಿಗೆ ಕಾರ್ಮಿಕರಿಗೆ ಉದ್ಯೋಗ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಹೋರಾಟ ಹಮ್ಮಿಕೊಳ್ಳಲಾಗುತ್ತಿದ್ದು, ಮಾರ್ಚ್ ಅಂತ್ಯದೊಳಗೆ ತಾತ್ವಿಕ ನಿರ್ಧಾರಕ್ಕೆ ಬರಲಾಗುವುದು ಎಂದು ಮಾಜಿ ಶಾಸಕ ಹಾಗೂ ಜೆಡಿಎಸ್ ವಕ್ತಾರ ವೈ.ಎಸ್.ವಿ.ದತ್ತಾ ಹೇಳಿದರು.

    ನಗರದ ಮಧುರ ಗಾರ್ಡ್‌ನ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಜೆಸ್ಕಾಂ ಗುತ್ತಿಗೆ ನೌಕರರ ಸಂಘದ ಸಭೆಯಲ್ಲಿ ಮಾತನಾಡಿದರು. ರಾಜ್ಯ ಮತ್ತು ಕೇಂದ್ರ ಸರ್ಕಾರ ಖಾಸಗೀಕರಣಕ್ಕೆ ಆದ್ಯತೆ ನೀಡುತ್ತಿದ್ದು, ಮುಂಬರುವ ದಿನಗಳಲ್ಲಿ ನಿರುದ್ಯೋಗಿ ಸಮಸ್ಯೆ ಹೆಚ್ಚಾಗಲಿದೆ. ಬಹುತೇಕ ಇಲಾಖೆಗಳಲ್ಲಿ ದುಡಿಯುತ್ತಿರುವ ಗುತ್ತಿಗೆ ನೌಕರರಿಗೆ ನೆಲೆ ಇಲ್ಲದಂತಾಗಿದೆ. ತೆಲಂಗಾಣ ಮಾದರಿಯಲ್ಲಿ ಕಾಯಂ ಮಾಡುವ ನಿಟ್ಟಿನಲ್ಲಿ ಹೋರಾಟ ನಡೆಯುತ್ತಿದ್ದು, ಇತರ ರಾಜ್ಯಗಳಲ್ಲಿನ ಗುತ್ತಿಗೆ ಕಾರ್ಮಿಕರ ಸ್ಥಿತಿಗತಿ ಅಧ್ಯಯನ ಮಾಡಲಾಗುವುದು. ಉದ್ಯೋಗ ಭದ್ರತೆ ಒದಗಿಸುವುದರ ಜತೆಗೆ ಕನಿಷ್ಠ ವೇತನ ಜಾರಿಗೆ ಸರ್ಕಾರಕ್ಕೆ ಒತ್ತಾಯಿಸಲಾಗುವುದು ಎಂದರು.

    ಖಂಡನೀಯ
    ಕನ್ನಡ ವಿವಿಗೆ ಅನುದಾನ ಕಡಿತಗೊಳಿಸುವ ಮೂಲಕ ರಾಜ್ಯ ಸರ್ಕಾರ ಕನ್ನಡ ವಿರೋಧಿ ನೀತಿ ಅನುಸರಿಸುತ್ತಿದೆ. ಸಂಸ್ಕೃತ ವಿವಿಗೆ ಹೆಚ್ಚಿನ ಅನುದಾನ ೋಷಿಸುವ ಸರ್ಕಾರ, ಕನ್ನಡ ವಿವಿ ನಿರ್ಲಕ್ಷಿಸುತ್ತಿರುವುದು ಖಂಡನೀಯ. 1980ರಲ್ಲಿದ್ದ ಗೋಕಾಕ್ ಚಳವಳಿ ಮತ್ತೆ ಆರಂಭವಾಗುವ ಕಾಲ ದೂರವಿಲ್ಲ. ಶಾಸೀಯ ಸ್ಥಾನಮಾನಕ್ಕೆ ಹೋರಾಟ ನಡೆಸಿದ ರಾಜ್ಯದಲ್ಲಿ ಕನ್ನಡ ಅಭಿವೃದ್ಧಿಗೆ ಅನುದಾನ ಕಡಿತಗೊಳಿಸುವುದು ಸರಿಯಲ್ಲ. ಈ ಬಗ್ಗೆ ಸಮಾನಮನಸ್ಕ ಸಾಹಿತಿಗಳು ಮತ್ತು ಹೋರಾಟಗಾರರೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು. ಎಪಿಎಂಸಿ, ಭೂಸುಧಾರಣೆ ತಿದ್ದುಪಡಿ ಕಾಯ್ದೆ ವಿರೋಧಿಸಬೇಕಿದ್ದು, ರೈತರ ಹೋರಾಟಕ್ಕೆ ನೈತಿಕ ಬೆಂಬಲ ಸೂಚಿಸಲಾಗಿದೆ ಎಂದರು.

    ವಿಲೀನಕ್ಕೆ ವಿರೋಧ
    ಜಾತ್ಯತೀತ ಸಿದ್ಧಾಂತದ ಜೆಡಿಎಸ್ ಯಾವುದೇ ಕಾರಣಕ್ಕೂ ಬಿಜೆಪಿಯಲ್ಲಿ ವಿಲೀನ ಆಗಲ್ಲ. ವರಿಷ್ಠರು ತೀರ್ಮಾನ ಕೈಗೊಂಡರೂ ನಮ್ಮ ವಿರೋಧವಿದೆ. ಮೈತ್ರಿಕೂಟದ ಅಧಿಕಾರ ಪಡೆದ ಸಂದರ್ಭದಲ್ಲಿ ಕಾರ್ಯಕರ್ತರನ್ನು ನಿರ್ಲಕ್ಷಿಸಿದ್ದಕ್ಕೆ ಅಂದಿನ ಸ್ಥಿತಿಯಲ್ಲಿನ ಒತ್ತಡ ಕಾರಣ. ಪಕ್ಷ ಉಪೇಕ್ಷೆ ಮಾಡುತ್ತಿದೆ ಎಂಬ ಕಾರ್ಯಕರ್ತರ ಅಭಿಪ್ರಾಯ ಸಹಜವಾಗಿದ್ದು, ಸರಿಪಡಿಸುವ ಕಾರ್ಯ ಪಕ್ಷದ ಹೈಕಮಾಂಡ್ ಮಾಡಿದೆ ಎಂದರು. ನಂತರ ವಿದ್ಯುತ್ ಇಲಾಖೆ ಗುತ್ತಿಗೆದಾರರ ಸಂಘ, ಅತಿಥಿ ಉಪನ್ಯಾಸಕರ ಸಂಘ, ವಕೀಲ ಸದಸ್ಯರೊಂದಿಗೆ ಚರ್ಚಿಸಿದರು. ನಗರಸಭೆ ಜೆಡಿಎಸ್ ಸದಸ್ಯ ಎಂ.ಡಿ.ಉಸ್ಮಾನ್, ಕಾರ್ಯಕರ್ತರಾದ ವೆಂಕಟೇಶ ಛಲವಾದಿ ನೇತೃತ್ವದಲ್ಲಿ ಮತ್ತು ನಗರದ ಯಾಜ್ಞವಲ್ಕ ದೇವಾಲಯದಲ್ಲಿ ಆಯೋಜಿಸಿದ್ದ ಅಭಿನಂದನೆ ಸಮಾರಂಭದಲ್ಲಿ ವಿಪ್ರ ಸಮುದಾಯದಿಂದ ಸನ್ಮಾನಿಸಲಾಯಿತು. ಮುಖಂಡರಾದ ಪವನಕುಮಾರ ಗುಂಡೂರು, ಶರದ್ ದಂಡಿನ್, ಗುರುರಾಜ್ ಚಿರ್ಚನಗುಡ್ಡ, ಎ.ಕೆ.ಮಹೇಶ, ಪಂಚಾರಕ್ಷರಯ್ಯ, ಮುರಳೀಧರ, ಸತೀಶ ಕುಲ್ಕರ್ಣಿ, ಶ್ಯಾಮಸುಂದರ್, ವಿ.ಪಿ.ಜೋಶಿ ಇತರರಿದ್ದರು.

    ಪಾಠ ಮಾಡಿದ ಮೇಷ್ಟ್ರು
    ಸಭೆಗೂ ಮುನ್ನ ನಗರದ ಜನಾದ್ರಿ ಶ್ರೀನಿವಾಸ ಪದವಿ ಕಾಲೇಜಿಗೆ ತೆರಳಿ ಬಿಕಾಂ ವಿದ್ಯಾರ್ಥಿಗಳಿಗೆ ಕೆಲಕಾಲ ಪಾಠ ಮಾಡಿದರು. ಗಣಿತದಲ್ಲಿನ ಕೆಲ ಕೌಶಲಗಳನ್ನು ತಿಳಿಸಿದರಲ್ಲದೆ, ಶೂನ್ಯದ ವಿಶಿಷ್ಟತೆ ಬಗ್ಗೆ ಭಾಗಕಾರ, ಭಾಗಲಬ್ಧದ ಬಗ್ಗೆ ಉದಾಹರಣೆ ನೀಡಿದರು. ಸರ್ಕಾರಿ ಶಾಲೆ ಎಸ್ಸೆಸ್ಸೆಲ್ಸಿ ಮಕ್ಕಳಿಗೆ ಆನ್‌ಲೈನ್ ಮೂಲಕ ಗಣಿತದ ಬಗ್ಗೆ ಪಾಠ ಮಾಡುತ್ತಿರುವ ಬಗ್ಗೆ ಮಾಹಿತಿ ನೀಡಿದರು. ಇದೇ ಸಂದರ್ಭದಲ್ಲಿ ಕಾಲೇಜು ಆಡಳಿತ ಮಂಡಳಿಯಿಂದ ಸನ್ಮಾನಿಸಲಾಯಿತು.

    ಗುತ್ತಿಗೆ ಕಾರ್ಮಿಕರ ಉದ್ಯೋಗ ಭದ್ರತೆಗೆ ಹೋರಾಟ
    ಗಂಗಾವತಿಯ ಜೆಎಸ್ ಡಿಗ್ರಿ ಕಾಲೇಜಿನಲ್ಲಿ ಬಿಕಾಂ ವಿದ್ಯಾರ್ಥಿಗಳಿಗೆ ಗಣಿತ ಬೋಧನೆ ಮಾಡುತ್ತಿರುವ ಮಾಜಿ ಶಾಸಕ, ಜೆಡಿಎಸ್ ವಕ್ತಾರ ವೈ.ಎಸ್.ವಿ.ದತ್ತಾ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts