More

    ಕರಾವಳಿಯಾಧ್ಯಂತ ಮುಂದುವರಿದ ಬಿಸಿಲು

    ಮಂಗಳೂರು: ಕರಾವಳಿಯಾಧ್ಯಂತ ಶುಕ್ರವಾರ ಪ್ರಖರ ಬಿಸಿಲು ಸಹಿತ ಒಣಹವೆ ಮುಂದುವರಿದಿದೆ. ಬೆಳಗ್ಗೆ ಕೆಲವು ಹೊತ್ತು ಮೋದ ಕವಿದಿದ್ದರೂ ನಂತರ ಪ್ರಖರ ಬಿಸಿಲಿನೊಂದಿಗೆ ಒಣಹವೆ ಇತ್ತು. ಸಂಜೆ ಗ್ರಾಮೀಣ ಭಾಗದಲ್ಲಿ ಮೋಡ ಕವಿದ ವಾತಾವರಣ ಮುಂದುವರಿದಿತ್ತು.

    ದ.ಕ ಜಿಲ್ಲೆಯಲ್ಲಿ ಶುಕ್ರವಾರ ಸರಾಸರಿ 33.4 ಡಿಗ್ರಿ ಗರಿಷ್ಟ, 27 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದ್ದು, ರಾತ್ರಿ 25 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಠಾಂಶ ದಾಖಲಾಗಿರುವುದರಿಂದ ರಾತ್ರಿ ಪೂರಾ ಒಣ ಚಳಿ ಮುಂದುವರಿದಿತ್ತು. ದ.ಕ, ಉಡುಪಿ ಹಾಗೂ ಉತ್ತರ ಕನ್ನಡ ಭಾಗದಲ್ಲಿ ಸರಾಸರಿ 36.7 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ರಾತ್ರಿ ಮಳೆ ಕಾಡು ಹಾಗು ಪಶ್ಚಿಮಘಟ್ಟದ ಹಲವಡೆ ಹೆಚ್ಚಿನ ಪ್ರಮಾಣದ ಮೋಡಕವಿದ ವಾತಾವರಣ ಕಂಡುಬಂದಿದೆ. ಕಾಸರಗೋಡು, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಅಲ್ಲಲ್ಲಿ ಮೋಡದ ವಾತಾವರಣದ ಮುನ್ಸೂಚನೆ ಕಂಡುಬಂದಿದೆ. ದಕ್ಷಿಣ ಒಳನಾಡು ಭಾಗಗಳಲ್ಲಿ ಅಲ್ಲಲ್ಲಿ ಮೋಡದ ವಾತಾವರಣದ ಮುನ್ಸೂಚನೆಯಿದ್ದು, ಉಳಿದ ಕರ್ನಾಟಕದ ಭಾಗಗಳಲ್ಲಿ ಬಿಸಿಲು ಹಾಗೂ ಒಣ ಹವೆ ಮುಂದುವರಿಯಲಿದೆ. ಮುಂದಿನ 1-2 ದಿನ ರಾತ್ರಿ ವೇಳೆ ಚಳಿಯ ತೀವ್ರತೆ ಸಾಧಾರಣಕ್ಕಿಂತ ತುಸು ಹೆಚ್ಚಾಗಲಿದೆ. ಹಗಲು ಮೋಡ ಕವಿದ ವಾತಾವರಣ ಸಹಿತ ಒಣ ಹವೆ ಮುಂದುವರಿಯಲಿದೆ ಎಂದು ರಾಷ್ಟ್ರೀಯ ಹವಾಮಾನ ಮನ್ಸೂಚನಾ ಕೇಂದ್ರ ಮಾಹಿತಿ ನೀಡಿದೆ.

    *ಬಿಸಿಲಿಗೂ ಅಲರ್ಟ್ ಘೋಷಣೆ-ಆತಂಕ

    ರಾಜ್ಯದ ಹತ್ತಕ್ಕೂ ಅಕ ಜಿಲ್ಲೆಯಲ್ಲಿ ತೀವ್ರವಾದ ಉಷ್ಣ ಅಲೆಗಳು ಮುಂದಿನ ಐದು ದಿನಗಳ ಕಾಲ ಇರಲಿದೆ ಎನ್ನುವ ಮಾಹಿತಿಯನ್ನು ಐಎಂಡಿ ಬಹಿರಂಗ ಪಡಿಸಿದೆ. ಈ ಜಿಲ್ಲೆಗಳಿಗೆ ರೆಡ್ ಅಲರ್ಟ್ ನೀಡಲಾಗಿದೆ. ಆದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದರ ಪ್ರಭಾವ ಕಡಿಮೆಯಾಗಿದ್ದು, ಉಷ್ಣ ಅಲೆಯ ಬದಲು ತೇವಾಂಶದಲ್ಲಿ ಗಣನೀಯ ಏರಿಕೆ ಕಾಣಿಸಿಕೊಳ್ಳಲಿದೆ. ದ.ಕ.ಜಿಲ್ಲೆಗೆ ಇದೇ ಮೊದಲ ಬಾರಿಗೆ ಯೆಲ್ಲೋ ಜತೆಗೆ ಆರೆಂಜ್ ಅಲರ್ಟ್ ಬಿಸಿಲಿಗೆ ನೀಡಲಾಗಿತ್ತು. ಈ ಹಿಂದೆ ಮಳೆಗಾಲದಲ್ಲಿ ಮಾತ್ರವೇ ಅಲರ್ಟ್‌ಗಳನ್ನು ನೀಡುವ ಕೆಲಸವಾಗುತ್ತಿದ್ದು ಈಗ ಬಿಸಿಲಿಗೂ ಅಲರ್ಟ್ ಘೋಷಣೆಯಾಗುತ್ತಿರುವುದು ಆತಂಕವನ್ನು ಹೆಚ್ಚಳ ಮಾಡಿದೆ.

    ತಾಪಮಾನ ಹೆಚ್ಚಾದರೆ ಬೇಸಗೆ ಮಳೆ ಸಾಧ್ಯತೆ ಹೆಚ್ಚು

    1986-87ರಲ್ಲಿ ಅತೀ ಕಡಿಮೆ ಮಳೆ ಶೇ.49 ಮಾತ್ರ ಮಳೆ ಜಿಲ್ಲೆಯಲ್ಲಿ ಕಾಣಿಸಿಕೊಂಡ ಪರಿಣಾಮ ತಾಪಮಾನ ವಿಪರೀತವಾಗಿ ಏರಿಕೆಯಾಗಿತ್ತು. ತಾಪಮಾನ ದಾಟಿದಂತೆ ಮಳೆ ಬರುವುದು ಸಾಮಾನ್ಯ ಲೆಕ್ಕಾಚಾರ. ಇದೇ ಕಾರಣದಿಂದ ಅಂದು ತಾಪಮಾನ 40 ದಾಟಿದ್ದರಿಂದ ಬೇಸಗೆಯಲ್ಲೂ ಆಗಾಗ ಸಾದಾರಣ ಮಳೆಯಾಗಿತ್ತು. 2024ರ ಏ.13ರಂದು ಜಿಲ್ಲೆಯಲ್ಲಿ ತಾಪಮಾನ 42 ಡಿಗ್ರಿಗೆ ತಲುಪಿದಾಗ ಎಲ್ಲೆಡೆ ಸಾಧಾರಣ ಮಳೆಯಾಗಿತ್ತು. ಆದರೆ ಈ ಬಾರಿ ಕರಾವಳಿಯ ತಾಪಮಾನ 40ರ ಆಸುಪಾಸಿನಲ್ಲಿದೆ. ಮೇ.6ರಿಂದ ಪೂರ್ವ ಮುಂಗಾರಿನ ಸಾಧ್ಯತೆ ಈಗ ಮತ್ತೆ ಮಂಕಾಗಿದೆ. ಮೇ ಮಧ್ಯ ಭಾಗದಲ್ಲೇ ಕೆಲವು ಭಾಗದಲ್ಲಿ ಮಳೆ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts