More

    ಮುಂದುವರಿದ ರೈತರ ಪ್ರತಿಭಟನೆ

    ಹುನಗುಂದ: ತಾಲೂಕಿನ ಮರೋಳ-ಹಾವರಗಿ ಮಧ್ಯದಲ್ಲಿರುವ ಜಿಂದಾಲ್ ಕಂಪನಿಗೆ ನೀರು ಹರಿಸುವ ಜಾಕ್ ವೆಲ್‌ಗೆ ಮಂಗಳವಾರ ಸಂಜೆಯಿಂದ ಮುತ್ತಿಗೆ ಹಾಕಿ ಅಹೋರಾತ್ರಿ ಧರಣಿ ನಡೆಸಿದ ರೈತರ ಹೋರಾಟ ಬುಧವಾರವೂ ಮುಂದುವರಿಯಿತು.

    ರೈತ ಮುಖಂಡ ರಸುಲಸಾಬ ತಹಸೀಲ್ದಾರ ಮಾತನಾಡಿ, ಕೃಷ್ಣಾ ನದಿಯಿಂದ ಜಿಂದಾಲ್ ಕಂಪನಿಗೆ ಪ್ರತಿ ದಿನ ನೀರು ಪೂರೈಸಲಾಗುತ್ತಿದೆ. ಆದರೆ ತಾಲೂಕಿನಲ್ಲಿ ಮಳೆ ಇಲ್ಲದೆ ಜನ-ಜಾನುವಾರಿಗೆ ಕುಡಿಯಲು ನೀರಿಲ್ಲ. ರೈತರ ಬೆಳೆಗಳು ಸಂಪೂರ್ಣ ಒಣಗುತ್ತಿವೆ. ಜಿಂದಾಲ್ ಕಂಪನಿಗೆ ನೀರು ಪೂರೈಸುವುದನ್ನು ಸಂಪೂರ್ಣ ನಿಲ್ಲಿಸಿ ರೈತರ ಜಮೀನುಗಳಿಗೆ ನೀರು ಒದಗಿಸಬೇಕು. ಆದರೆ, ನಮ್ಮ ಹೋರಾಟಕ್ಕೆ ಸ್ಪಂದಿಸುತ್ತಿಲ್ಲ. ಮುಂದಿನ ದಿನಗಳಲ್ಲಿ ಹೋರಾಟ ತೀವ್ರ ಸ್ವರೂಪ ಪಡೆಯುತ್ತದೆ ಎಂದು ತಿಳಿಸಿದರು.

    ರೈತ ಮುಖಂಡ ಗುರು ಗಾಣಿಗೇರ ಮಾತನಾಡಿ, ಜಿಂದಾಲ್ ಕಂಪನಿಯ ಜಾಕ್‌ವೆಲ್‌ನಿಂದ ಪೂರೈಕೆ ಆಗುತ್ತಿದ್ದ ನೀರು ಬಂದ್ ಮಾಡಿಸಿ ಜಾಕ್‌ವೆಲ್ ಕೊಠಡಿಯ ಬಾಗಿಲಿಗೆ ಬೀಗ ಜಡಿಯಲಾಗಿದೆ. ಇಲ್ಲಿವರೆಗೆ ಒಳಗಡೆ ಪ್ರತಿಭಟನೆ ನಡೆದಿತ್ತು. ಈಗ ಹೊರಗಡೆ ಗೇಟ್ ಮುಂದೆ ಅಹೋರಾತ್ರಿ ಹೋರಾಟ ನಡೆಸುತ್ತಿದ್ದೇವೆ. ರೈತರ ಜಮೀನುಗಳಿಗೆ ನೀರು ಹರಿಸುವವರೆಗೆ ಈ ಹೋರಾಟ ನಿಲ್ಲುವುದಿಲ್ಲ ಎಂದು ಹೇಳಿದರು.

    ತಾಲೂಕು ರೈತ ಸಂಘದ ಅಧ್ಯಕ್ಷ ಬಸವನಗೌಡ ಪೈಲ, ರಾಜು ಬಡಿಗೇರ, ಮುತ್ತಣ್ಣ ನಂದವಾಡಗಿ, ಬಸವರಾಜ ನಾಡಗೌಡರ, ನಾಗಪ್ಪ ಗೊರಬಾಳ, ಗೋವಿಂದಗೌಡ ಗೌಡರ, ಪ್ರದೀಪ ಸೂಡಿ, ಅಮರೇಶ ನಾಡಗೌಡರ, ಬಸವರಾಜ ಮನಗೂಳಿ, ಮಲಿಕಸಾಬ ಕಡಿವಾಳ, ಬಸವರಾಜ ದೇಸಾಯಿ ಹಾಗೂ ಮರೋಳ, ಹಾವರಗಿ, ಹುಲ್ಲಳ್ಳಿ, ಇದ್ದಲಗಿ, ಬೆಳಗಲ್ಲ, ಕಡಿವಾಲ, ಧನ್ನೂರ ಗ್ರಾಮಗಳ ನೂರಾರು ರೈತರು ಹೋರಾಟದಲ್ಲಿ ಭಾಗಿಯಾಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts