More

    ಸಾಂಪ್ರದಾಯಿಕ ಕಲೆಗಳನ್ನು ಮುಂದುವರಿಸಿ

    ಎನ್.ಆರ್.ಪುರ: ಮಹಿಳೆಯರು ಸಾಂಪ್ರದಾಯಿಕ ಹಾಡುಗಳನ್ನು ಮುಂದುವರಿಸಿಕೊಂಡು ಹೋಗಬೇಕು ಎಂದು ತರಬೇತುದಾರರಾದ ಗೋಳಿಗುಂಡಿ ಅನಿತಾ ಜಯಕುಮಾರ್ ತಿಳಿಸಿದರು.

    ಕುದುರೆಗುಂಡಿ ಅಶ್ವಗುಂಡೇಶ್ವರ ಸಭಾ ಭವನದಲ್ಲಿ ಸೋಮವಾರ ಗಾಯತ್ರಿ ವಿಪ್ರ ಮಹಿಳಾ ಬಳಗದಿಂದ ಆಯೋಜಿಸಿದ್ದ ಹಸೆ ಹಾಡು ಹಾಗೂ ರಂಗೋಲಿ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
    ಸಾಂಪ್ರದಾಯದ ಹಾಡುಗಳು ನಮ್ಮ ಸಂಸ್ಕೃತಿಯ ತಾಯಿಬೇರು. ನಮ್ಮ ಅಜ್ಜಿ, ಅಮ್ಮ ಹೇಳುತ್ತಿದ್ದ ಸಾಂಪ್ರದಾಯದ ಹಾಡುಗಳನ್ನು ನಾವು ಮುಂದುವರಿಸಿ, ಮುಂದಿನ ಪೀಳಿಗೆಗೂ ಹಸ್ತಾಂತರಿಸಬೇಕಿದೆ. ಮದುವೆ ಮನೆಗಳಲ್ಲಿ ಹಸೆ ಹಾಡು ಸೇರಿ ಶಾಸ್ತ್ರದ ಹಾಡುಗಳನ್ನು ಮಹಿಳೆಯರು ಕಲಿಯಬೇಕು. ಸಾಂಪ್ರದಾಯದ, ಹಸೆ, ಜನಪದ ಹಾಡುಗಳು ಬಾಯಿಂದ ಬಾಯಿಗೆ ಹರಡಿವೆ ಎಂದರು.
    ರಂಗೋಲಿ ತರಬೇತುದಾರರಾದ ಬೆಂಡೆಹಕ್ಕಲು ಸುಧಾ ನಾರಾಯಣ್ ಮಾತನಾಡಿ, ಹಸೆ ಎಂದರೆ ರಂಗೋಲಿ. ರಂಗೋಲಿ ಹಾಕಿ ನಂತರ ಅದರ ಮೇಲೆ ಮಣೆ ಹಾಕುತ್ತಾರೆ. ಹಿಂದು ಧರ್ಮದ ಪ್ರತಿಯೊಂದು ಸಾಂಪ್ರದಾಯಕ್ಕೂ ಅರ್ಥ ಇದೆ. ರಂಗೋಲಿ ಹಾಕುವುದು ಸಹ ವಿಶೇಷ ಕಲೆ. ಅದನ್ನು ಶ್ರದ್ಧೆಯಿಂದ ಕಲಿಯಬೇಕು. ಹಿಂದು ಮಹಿಳೆಯರು ಪ್ರತಿದಿನ ದ್ವಾರಬಾಗಿಲಿನ ಹೊಸಿಲು ತೊಳೆದು ರಂಗೋಲಿ ಹಾಕಬೇಕು ಎಂದರು.
    ವಿಪ್ರ ಮಹಿಳಾ ಬಳಗದ ಅಧ್ಯಕ್ಷೆ ಮಮತಾ ಪ್ರಭಾಕರ್, ಪ್ರಧಾನ ಕಾರ್ಯದರ್ಶಿ ಸುಮಾ ನಾರಾಯಣಮೂರ್ತಿ, ನಿರ್ಮಲಾ ನಟರಾಜ್, ಗೀತಾ ಸುದರ್ಶನ್, ವಿದ್ಯಾ ವಿಘ್ನೇಶ್ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts