More

    ಕೆ.ಸಾಲುಂಡಿ ಗ್ರಾಮದಲ್ಲಿ ಕಲುಷಿತ ನೀರು ಸೇವನೆ : ಮೃತರ ಕುಟುಂಬಕ್ಕೆ 2 ಲಕ್ಷ ರೂ.ಪರಿಹಾರ

    ಮೈಸೂರು: ಕಲುಷಿತ ನೀರು ಕುಡಿದು ಮೃತಪಟ್ಟ ಜವರೇಗೌಡರ ಪುತ್ರ ಕನಕರಾಜು (23) ಕುಟುಂಬಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಭೇಟಿ ನೀಡಿ ಸಾಂತ್ವನ ಹೇಳಿ ಸರ್ಕಾರದಿಂದ ಕುಟುಂಬಕ್ಕೆ 2ಲಕ್ಷ ರೂ. ಪರಿಹಾರ ನೀಡುವ ಭರವಸೆ ನೀಡಿದರು.
    ‘ನಮ್ಮ ಕುಟುಂಬಕ್ಕೆ ಕನಕರಾಜು ಆಧಾರವಾಗಿದ್ದ. ಆದರೆ, ಅವನ ನಿಧನದಿಂದ ಕಂಗಾಲಾಗಿದ್ದೇವೆ, ದಯವಿಟ್ಟು ಸರ್ಕಾರ ನಮಗೆ ನೆರವು ನೀಡಬೇಕು’ ಎಂದು ಮೃತರ ಕುಟುಂಬದವರು ಮನವಿ ಮಾಡಿಕೊಂಡರು.

    ‘ಸರ್ಕಾರ ನಿಮ್ಮೊಂದಿಗೆ ಇರಲಿದ್ದು, ಧೈರ್ಯವಾಗಿ ಇರಿ’ ಎಂದು ಸಚಿವ ಮಹದೇವಪ್ಪ ಧೈರ್ಯ ತುಂಬಿದರು. ಈ ಸಂದರ್ಭ ಶಾಸಕ ಕೆ. ಹರೀಶ್ ಗೌಡ, ಮುಡಾ ಅಧ್ಯಕ್ಷ ಕೆ. ಮರಿಗೌಡ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬೀರಿಹುಂಡಿ ಬಸವಣ್ಣ ಹಾಗೂ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts