More

    ಕಟ್ಟಡ ಕಾರ್ಮಿಕರು ಸೌಲಭ್ಯ ವಂಚಿತರಾಗಬಾರದು

    ಸಿಂದಗಿ, ಕಾನೂನು, ಅರಿವು, ನೆರವು, ಕಾರ್ಯಕ್ರಮ, SINDAGI, LAW, AWARENESS, AID, PROGRAM,

    ಸಿಂದಗಿ: ಸರ್ಕಾರ ಕಟ್ಟಡ ಕಾರ್ಮಿಕರ ಅನುಕೂಲತೆಗಳಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು, ಅವುಗಳ ಸದುಪಯೋಗ ಪಡೆಯಬೇಕು ಎಂದು ನ್ಯಾಯಾವಾದಿ ಎಸ್.ಬಿ. ಪಾಟೀಲ ಹೇಳಿದರು.
    ತಾಲೂಕಿನ ಹಂದಿಗನೂರ ಗ್ರಾಮದಲ್ಲಿ ಶನಿವಾರ ಸಂಗಮ ಸಂಸ್ಥೆಯ ವತಿಯಿಂದ ಕಟ್ಟಡ ಕಾರ್ಮಿಕರಿಗೆ ಹಮ್ಮಿಕೊಂಡ ಕಾನೂನು ಅರಿವು, ನೆರವು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
    ಕಟ್ಟಡ ಕಾರ್ಮಿಕರಾಗಿರುವ ಬಡಗಿ, ಎಲೆಕ್ಟ್ರಿಷಿಯನ್, ನೀರು ಹೊಡೆಯುವವ, ಇಟ್ಟಂಗಿ ತಯಾರಿಸುವ, ಸೆಂಟ್ರಿಂಗ್, ವೆಲ್ಡರ್, ಟೈಲ್ಸ್ ಹಾಕುವ, ಪೇಂಟ್ ಮಾಡುವವರು ಸೇರಿದಂತೆ ಕಟ್ಟಡ ನಿರ್ಮಾಣ ಕಾರ್ಯದಲ್ಲಿ ತೊಡಗಿರುವವರನ್ನು ಕಟ್ಟಡ ಕಾರ್ಮಿಕರು ಎಂದು ಗುರುತಿಸಲಾಗುತ್ತದೆ. ಇವರಿಗೆ ಹಾಗೂ ಇವರ ಕುಟುಂಬದವರಿಗೆ ಆರೋಗ್ಯ, ಸಹಾಯಧನ, ಅವರ ಮಕ್ಕಳಿಗೆ ಸ್ಕಾಲರ್‌ಶಿಫ್ ಸೇರಿದಂತೆ ಇತರ ಸೌಲಭ್ಯಗಳಿದ್ದು, ಅವುಗಳನ್ನು ಪಡೆಯಬೇಕು. ಅಗತ್ಯವಾದರೆ ಉಚಿತ ಕಾನೂನು ನೆರವನ್ನು ಪಡೆಯಬೇಕು ಎಂದರು.
    ಸಂಗಮ ಸಂಸ್ಥೆಯ ಸಹ ನಿರ್ದೇಶಕಿ ಸಿಂಥಿಯಾ ಡಿ ಮೆಲ್ಲೋ ಮಾತನಾಡಿ, ಇಲಾಖೆಯಿಂದ ಕಟ್ಟಡ ಕಾರ್ಮಿಕರನ್ನು ಗುರುತಿಸಿ, ಕಾರ್ಮಿಕ ಕಾರ್ಡ್‌ಗಳನ್ನು ವಿತರಿಸಲಾಗುತ್ತದೆ. ಪ್ರತಿ ಮೂರು ವರ್ಷಕ್ಕೊಮ್ಮೆ ಕಾರ್ಮಿಕ ಕಾರ್ಡ್‌ನ್ನು ಮರು ನವೀಕರಣಗೊಳಿಸಿಕೊಳ್ಳಬೇಕು ಎಂದರು.
    ಗ್ರಾಮದ ಕಟ್ಟಡ ಕಾರ್ಮಿಕರು ಹಾಗೂ ಮಹಿಳಾ ಸಂಘದ ಸದಸ್ಯರಿದ್ದರು. ಸಂಗಮ ಸಂಸ್ಥೆಯ ಸಿಬ್ಬಂದಿ ವಿಜಯ ಬಂಟನೂರ, ಗುರು ಚೋರಗಸ್ತಿ, ತೇಜಸ್ವಿನಿ ಹಳ್ಳದಕೇರಿ ಇದ್ದರು.

    ಫೊಟೋ ಎಸ್.ಎನ್.ಡಿ-15-1
    ಸಿಂದಗಿ ತಾಲೂಕು ಹಂದಿಗನೂರ ಗ್ರಾಮದಲ್ಲಿ ನಡೆದ ಕಾನೂನು ಅರಿವು ನೆರವು ಕಾರ್ಯಕ್ರಮಕ್ಕೆ ನ್ಯಾಯವಾದಿ ಎಸ್.ಬಿ. ಪಾಟೀಲ ಚಾಲನೆ ನೀಡಿದರು. ಸಂಗಮ ಸಂಸ್ಥೆಯ ಸಹ ನಿರ್ದೇಶಕಿ ಸಿಂಥಿಯಾ ಡಿ. ಮೆಲ್ಲೋ ಹಾಗೂ ಕಟ್ಟಡ ಕಾರ್ಮಿಕರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts