More

    ಕಟ್ಟಡದಿಂದ ಬಿದ್ದ ಕಾರ್ಮಿಕನ ತೊಡೆಸಂದು ಸೀಳಿದ ಕಬ್ಬಿಣದ ರಾಡ್: ಸಾವನ್ನೇ ಜಯಿಸಿದ ಅದೃಷ್ಠಶಾಲಿ!

    ಬೀಜಿಂಗ್​: ಆಕಸ್ಮಿಕ ಘಟನೆಯೊಂದರಲ್ಲಿ ಮೂರು ಅಡಿ ಉದ್ದ ಕಬ್ಬಿಣದ ಸಲಾಕೆಯೊಂದು ಚೀನಾದ ಕಟ್ಟಡ ಕಾರ್ಮಿಕನ ತೊಡೆಸಂದುವಿನಲ್ಲಿ ನುಸುಳಿ ಕೆಳಹೊಟ್ಟೆಯವರೆಗೂ ಚಾಚಿಕೊಂಡರು ಪವಾಡಸದೃಶ ರೀತಿಯಲ್ಲಿ ಬದುಕುಳಿದಿರುವ ಘಟನೆ ನಡೆದಿದೆ.

    ಇದನ್ನೂ ಓದಿ: ಕರೊನಾ ಗುಟ್ಟು ಬಚ್ಚಿಡಲು ಚೀನಾದಿಂದ ಅಬ್ಬಾ ಇದೆಂಥ ಕೃತ್ಯ… ಇಲ್ಲಿದೆ ಸ್ಫೋಟಕ ಮಾಹಿತಿ

    ಸಂತ್ರಸ್ತನನ್ನು ಜೌ ಎಂದು ಗುರುತಿಸಲಾಗಿದೆ. ಚೀನಾದ ಪೂರ್ವ ಪ್ರಾಂತ್ಯ ಜಿಯಾಂಗ್ಸೂದಲ್ಲಿ ಘಟನೆ ನಡೆದಿದ್ದು, ನಿರ್ಮಾಣದ ಹಂತದ ಕಟ್ಟಡ ಕಾಮಗಾರಿ ವೇಳೆ ಸುಮಾರು 10 ಅಡಿ ಎತ್ತರದಿಂದ ಆಕಸ್ಮಿಕವಾಗಿ ಕೆಳಗೆ ಬಿದ್ದಿದ್ದರಿಂದ 3 ಅಡಿ ಉದ್ದದ ಕಬ್ಬಿಣದ ರಾಡ್​ ಜೌ ತೊಡೆಸಂದುವನ್ನು ಸೀಳಿಕೊಂಡು ಕೆಳಹೊಟ್ಟೆಯವರೆಗೂ ನಾಟಿಕೊಳ್ಳುತ್ತದೆ.

    ತಕ್ಷಣ ಸಹ ಕಾರ್ಮಿಕರು ಜೌನನ್ನು ಆಸ್ಪತ್ರೆಗೆ ಕರೆದೊಯುತ್ತಾರೆ. ಸುಮಾರು 3 ಗಂಟೆಗಳ ಕಾಲ ಆಪರೇಷನ್​ ಮಾಡಿ ಕಬ್ಬಿಣದ ರಾಡನ್ನು ವೈದ್ಯರು ಯಶಸ್ವಿಯಾಗಿ ತೆಗೆಯುತ್ತಾರೆ. ಘೋರ ದುರಂತದಲ್ಲಿ ಬದುಕುಳಿವ ಜೌ ನಿಜಕ್ಕೂ ಅದೃಷ್ಠಶಾಲಿ ಎಂದರೆ ತಪ್ಪಾಗಲಾರದು.

    ಅಂದಹಾಗೆ ಈ ಘಟನೆ ನಡೆದಿದ್ದು ಮಾರ್ಚ್​ ತಿಂಗಳಲ್ಲಿ. ಜಿಯಾಂಗ್ಸೂದ ನಾಂಟಾಂಗ್​ ನಗರದಲ್ಲಿ ನಡೆಯಿತು. ಆದರೆ, ಘಟನೆ ಬೆಳಕಿಗೆ ಬಂದಿದ್ದು ಮಾತ್ರ ಈ ವಾರದಲ್ಲಿ. ಯಾವಾಗ ಜೌ, ವೈದ್ಯರಿಗೆ ಧನ್ಯವಾದ ತಿಳಿಸಲು ಆಸ್ಪತ್ರೆಗೆ ಬಂದರೋ ಆಗ ಘಟನೆ ಬೆಳಕಿಗೆ ಬಂದಿದೆ.

    ಇದನ್ನೂ ಓದಿ: ಯದುವೀರ ಮಾನ ಮರ್ಯಾದೆ ಇಲ್ಲದೇ ಸಿಂಹಾಸನದ ಮೇಲೆ ಕೂರುತ್ತಾನೆ: ಪ್ರೋ ನಂಜರಾಜೇ ಅರಸ್ ಕಿಡಿ

    ಮಾರ್ಚ್​ 27ರಂದು ಆಕಸ್ಮಿಕವಾಗಿ ಜೌ ಕಟ್ಟಡದಿಂದ ಕೆಳಗೆ ಬಿದ್ದಿದ್ದ. ಆತನನ್ನು ನಾಂಟಾಂಗ್​ನ ಸೆಕೆಂಡ್​ ಪೀಪಲ್ಸ್​ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಪರೇಷನ್​ ನಡೆದ ಬಳಿಕ ಹಲವು ದಿನಗಳವರೆಗೆ ಆಸ್ಪತ್ರೆಯಲ್ಲೇ ಉಳಿದು ಜೌ ಚೇತರಿಸಿಕೊಂಡು ಇದೀಗ ಡಿಸ್ಚಾರ್ಜ್​ ಆಗಿದ್ದಾರೆ. ಸಾವನ್ನು ಗೆದ್ದು ಬಂದಿರುವ ಜೌ, ಪ್ರಾಣ ಉಳಿಸಿದ ವೈದ್ಯರಿಗೆ ಕತಜ್ಞತೆ ಸಲ್ಲಿಸಿದ್ದಾರೆ. (ಏಜೆನ್ಸೀಸ್​)

    ಅಶ್ಲೀಲ ಚಿತ್ರಗಳನ್ನು ಜಾಲತಾಣದಲ್ಲಿ ಹರಿಬಿಟ್ಟು ಕಠಿಣ ಶಿಕ್ಷೆಗೆ ಗುರಿಯಾದ ಯುವತಿ…!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts