More

    ವಿದ್ಯುತ್ ಪ್ರಸರಣಾ ಘಟಕ ನಿರ್ಮಾಣಕ್ಕೆ ಚಾಲನೆ

    ಕಿಕ್ಕೇರಿ: ಹೋಬಳಿಯ ಗಡಿಭಾಗದ ಗಾಣದಹಳ್ಳಿ ಬಳಿ 5 ಕೋಟಿ ರೂ. ವೆಚ್ಚದಲ್ಲಿ 66/11 ಕೆ.ವಿ. ವಿದ್ಯುತ್ ಪ್ರಸರಣಾ ಕೇಂದ್ರ ಘಟಕ ನಿರ್ಮಾಣಕ್ಕೆ ಭಾನುವಾರ ಶಾಸಕ ಎಚ್.ಟಿ. ಮಂಜು ಭೂಮಿಪೂಜೆ ನೆರವೇರಿಸಿದರು.

    ಮಾದಾಪುರ, ಗಾಣದಹಳ್ಳಿ, ಗೊಂದಿಹಳ್ಳಿ, ಈಚಲಗುಡ್ಡೆಕಾವಲು, ಊಗಿನಹಳ್ಳಿ, ಕೋಟಹಳ್ಳಿ, ಚಿನ್ನೇನಹಳ್ಳಿಯಂತಹ ಹಲವಾರು ಗ್ರಾಮಗಳಲ್ಲಿ ವಿದ್ಯುತ್ ಸಮಸ್ಯೆ ಎದುರಾಗಿತ್ತು. ಹಗಲು-ರಾತ್ರಿ ಎನ್ನದೆ ಜಮೀನಿನಲ್ಲಿ ಬೆಳೆಗೆ ನೀರು ಹಾಯಿಸಲು ರೈತರು ಸಂಕಷ್ಟ ಅನುಭವಿಸುತ್ತಿದ್ದರು. ಘಟಕ ಆರಂಭಕ್ಕೆ ಸ್ಥಳದ ತಾಂತ್ರಿಕ ಸಮಸ್ಯೆ ಕಾಡುತ್ತಿತ್ತು. ಇದೀಗ ಎಲ್ಲವೂ ಬಗೆಹರಿದಿದ್ದು, ಘಟಕ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ ಎಂದರು.

    ರಾಜ್ಯ ಸಹಕಾರ ಮಾರಾಟ ಮಹಾಮಂಡಲ ನಿರ್ದೇಶಕ ಸಿ.ಎನ್. ಪುಟ್ಟಸ್ವಾಮಿಗೌಡ ಮಾತನಾಡಿ, ರಸ್ತೆಗಳು ಹಾಳಾಗಿದ್ದು, ಓಡಾಡಲು ಕಷ್ಟವಾಗಿದೆ. ಕೂಡಲೇ ರಸ್ತೆ ದುರಸ್ತಿ ಮಾಡಿಸಿ ಎಂದು ಒತ್ತಾಯಿಸಿದರು.

    ಮುಖಂಡರಾದ ಯೋಗೇಶ್, ಸ್ವಾಮಿ, ಸೋಮೇಶ್, ಸ್ವಾಮಣ್ಣ, ಐಕನಹಳ್ಳಿ ಕೃಷ್ಣೇಗೌಡ, ದ್ಯಾವೇಗೌಡ, ಶೇಖರ್, ಮಂಜೇಗೌಡ, ಚಿನ್ನೇನಹಳ್ಳಿ ಕಾಂತರಾಜು, ಶಾಂತವೀರೇಗೌಡ, ಜವರಪ್ಪ, ಸೆಸ್ಕ್ ಎಇ ಕಿಶೋರ್, ಪಿಡಿಒ ವಿಜಯಕುಮಾರ್ ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts