More

    ನಿರಂತರ ವಿದ್ಯುತ್ ಪೂರೈಕೆಗಾಗಿ ಹೋರಾಟ ಖಚಿತ

    ಅಳವಂಡಿ: ಮಳೆಯಿಲ್ಲಾದೆ ಖುಷ್ಕಿ ಜಮೀನಿನ ಬೆಳೆ ಒಣಗಿದ್ದು, ಈಗ ವಿದ್ಯುತ್ ಇಲಾಖೆ ರೈತರಿಗೆ ಸರಿಯಾಗಿ ವಿದ್ಯುತ್ ನೀಡದೇ ಇರುವುದರಿಂದ ಬೋರ್ವೆಲ್ ಮೂಲಕ ಬೆಳೆದ ಬೆಳೆ ನಾಶವಾಗುತ್ತಿದೆ ಅದ್ದರಿಂದ ನಿರಂತರ ವಿದ್ಯುತ್ ಪೂರೈಕೆಗಾಗಿ ಒತ್ತಾಯಿಸಿಬೇಕೆಂದು ಪಂಪ್‌ಸೆಟ್ ನೀರಾವರಿ ಹೋರಾಟ ಸಮಿತಿಯ ಸಂಚಾಲಕ ಶರಣಪ್ಪ ಜಡಿ ತಿಳಿಸಿದರು.

    ಇದನ್ನೂ ಓದಿ: ವಾರಿಯರ್ಸ್‌-ಯೋಧಾಸ್ ಪಂದ್ಯ ರೋಚಕ ಟೈ: ಸುರೇಂದರ್ ಗಿಲ್ ಹೋರಾಟ ವ್ಯರ್ಥ

    ಗ್ರಾಮದ ಶ್ರೀಸಿದ್ದೇಶ್ವರ ಮಠದಲ್ಲಿ ಅಳವಂಡಿ ಭಾಗದ ಪಂಪ್‌ಸೆಟ್ ನೀರಾವರಿ ಹೋರಾಟ ಸಮಿತಿ ಸದಸ್ಯರ ಸಭೆಯಲ್ಲಿ ಬುಧವಾರ ಮಾತನಾಡಿದರು.
    ಮಾಜಿ ಜಿಲ್ಲಾ ಪರಿಷತ್ ವಿರೋಧ ಪಕ್ಷದ ನಾಯಕ ಗುರುಮೂರ್ತಿಸ್ವಾಮಿ ಇನಾಮದಾರ ಮಾತನಾಡಿ, ಹೋರಾಟ, ಸಂಘಟನೆಯಿಂದ ಮಾತ್ರ ಏನನ್ನಾದರು ಪಡೆಯಲು ಸಾಧ್ಯ.

    ಕಾರಣ ಎಲ್ಲರೂ ಹೋರಾಟ ಮನೋಭಾವ ಬೆಳೆಸಿಕೊಳ್ಳಬೇಕು. ಬೇಕಾದುದನ್ನು ಪಡೆಯಲು ಸಂಘಟಿತರಾಗಿ ಹೋರಾಟ ಮಾಡಿದರೆ ಪ್ರತಿಫಲ ಪಡೆಯಬಹುದು. ರೈತರ ಸಮಸ್ಯೆಗಳನ್ನು ಅಧಿಕಾರಿಗಳ ಗಮನಕ್ಕೆ ತರಲು ಹೋರಾಟ ಮಾಡೋಣ ಎಂದರು.

    ರೈತರಿಗೆ ಹಗಲು ವೇಳೆಯಲ್ಲಿ ಸಮರ್ಪಕ ವಿದ್ಯುತ್ ಪೂರೈಕೆ ಸಲುವಾಗಿ ಹಿರಿಯ ಅಧಿಕಾರಿಗಳಿಗೆ ಮನವಿ ಸಲ್ಲಿಸಲು ಯೋಚಿಸಿದರು. ಮನವಿ ಸಲ್ಲಿಸಿ ವಾರದೊಳಗೆ ಸಮಸ್ಯೆ ಪರಿಹರಿಸದಿದ್ದರೆ ಹೋರಾಟ ಮಾಡುವ ಬಗ್ಗೆ ನಿರ್ಧರಿಸಲಾಯಿತು.

    ಶ್ರೀಸಿದ್ದೇಶ್ವರ ಮಠದ ಶ್ರೀಮರುಳಾರಾದ್ಯ ಶಿವಾಚಾರ್ಯ ಸ್ವಾಮಿಜಿ, ಪ್ರಮುಖರಾದ ದೇವಪ್ಪ ಕಟ್ಟಿಮನಿ, ರಮೇಶ ಭಾವಿಹಳ್ಳಿ, ಭೀಮರಡ್ಡಿ ಗದ್ದಿಕೇರಿ, ಚಂದ್ರಪ್ಪ ಜಂತ್ಲಿ, ಚನ್ನಪ್ಪ ಮುತ್ತಾಳ, ಹನುಮಂತಪ್ಪ ಉಂಕಿ, ಕಾಶಯ್ಯ, ಅರವಿಂದಪ್ಪ, ಗೂಳರಡ್ಡಿ, ಪರಮೇಶಪ್ಪ, ನಾಗರಾಜ,

    ಯಲ್ಲಪ್ಪ, ವಿರುಪಣ್ಣ, ರಾಮಣ್ಣ, ಹನುಮರಡ್ಡಿ, ಶಿವಪ್ಪ, ಶ್ರೀನಿವಾಸ, ಶಂಕ್ರಯ್ಯ, ರಾಮಪ್ಪ, ಮಲ್ಲಪ್ಪ, ದೇವಪ್ಪ, ಬಿದರಳ್ಳೆಪ್ಪ, ಮುದಕಪ್ಪ, ಶಿವಾನಂದಯ್ಯ, ತಿಮ್ಮಪ್ಪ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts