More

    ಮಗುವಿನ ಸಾಕ್ಷಿ ಸರಿ ಇಲ್ಲದಿದ್ದರೇನು… ತಾಯಿಯ ಮಾತು ಕೇಳಿ ಎಂದ ಹೈಕೋರ್ಟ್

    ಮುಂಬೈ: ಸಂತ್ರಸ್ತ ಹೆಣ್ಣುಮಗು ತನ್ನ ವಿರುದ್ಧ ನಡೆದ ಅತ್ಯಾಚಾರದ ಬಗ್ಗೆ ಕೋರ್ಟಿನಲ್ಲಿ ಸರಿಯಾಗಿ ಸಾಕ್ಷಿ ಹೇಳಿಲ್ಲ ಎಂಬ ಕಾರಣಕ್ಕೆ ಆರೋಪಿಯನ್ನು ದೋಷಮುಕ್ತಗೊಳಿಸಲು ಸಾಧ್ಯವಿಲ್ಲ ಎಂದು ಬಾಂಬೆ ಹೈಕೋರ್ಟ್ ಹೇಳಿದೆ. ಬದಲಿಗೆ ಮಗುವಿನ ಭಾವನೆಗಳನ್ನು ಮಾತಿಲ್ಲದೆ ಅರ್ಥ ಮಾಡಿಕೊಳ್ಳುವ ದೈವಿಕ ಶಕ್ತಿ ಇರುವ ತಾಯಿಯ ಸಾಕ್ಷಿಗೆ ಹೆಚ್ಚಿನ ಮಹತ್ವ ನೀಡಬೇಕು ಎಂದಿರುವ ನ್ಯಾಯಾಲಯ, ನಾಲ್ಕೂವರೆ ವರ್ಷದ ಮಗುವಿನ ಮೇಲೆ ಬಲಾತ್ಕಾರ ಮಾಡಿದ ಯುವಕನ ವಿರುದ್ಧ ತೀರ್ಪು ನೀಡಿದ್ದ ಕೆಳನ್ಯಾಯಾಲಯದ ಆದೇಶವನ್ನು ಎತ್ತಿಹಿಡಿದಿದೆ.

    2017 ರ ಆಗಸ್ಟ್ 11 ರಂದು ಆಗ 17 ವರ್ಷದವನಾಗಿದ್ದ ಆರೋಪಿಯು ನಾಲ್ಕೂವರೆ ವರ್ಷದ ಮಗುವಿನ ಮೇಲೆ ಬಲಾತ್ಕಾರ ಮಾಡಿದ್ದಾಗಿ ತಾಯಿಯೊಬ್ಬಳು ದೂರು ನೀಡಿದ್ದಳು. ವಿಚಾರಣಾ ನ್ಯಾಯಾಲಯ ಅಪರಾಧ ಸಾಬೀತಾಗಿದೆ ಎಂದು ತೀರ್ಪಿತ್ತು, ಯುವಕನಿಗೆ 10 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿತ್ತು. ಈ ತೀರ್ಪಿನ ವಿರುದ್ಧ ಬಾಂಬೆ ಹೈಕೋರ್ಟಿನ ಔರಾಂಗಾಬಾದ್ ನ್ಯಾಯಪೀಠದಲ್ಲಿ ಯುವಕ ಮೇಲ್ಮನವಿ ಸಲ್ಲಿಸಿದ್ದ. ಯುವಕನ ಪರ ವಕೀಲರು, ವಿಚಾರಣಾ ನ್ಯಾಯಾಲಯದಲ್ಲಿ ಮಗುವು ತನ್ನೊಂದಿಗೆ ನಿರ್ದಿಷ್ಟವಾಗಿ ಏನು ನಡೆಯಿತು ಎಂದು ವಿವರಿಸಿಲ್ಲ ಎಂದು ವಾದಿಸಿದ್ದರು.

    ಇದನ್ನೂ ಓದಿ: ವೃದ್ಧರನ್ನು ಟ್ರಕ್​ನಿಂದ ತಳ್ಳುತ್ತಿರುವ ಅಧಿಕಾರಿ! ಭಯಾನಕ ವಿಡಿಯೋ ವೈರಲ್- ಉಪ ಆಯುಕ್ತ ಸಸ್ಪೆಂಡ್​ 

    “ನ್ಯಾಯಾಲಯದಲ್ಲಿ ಸಾಕ್ಷಿ ನೀಡುವ ಸಮಯದಲ್ಲಿ ಮಗುವು ಆರು ವರ್ಷದವಳಾಗಿದ್ದು ಎರಡು ವರ್ಷ ಮುಂಚೆ ಸಂಭವಿಸಿದ ಕೃತ್ಯದ ಬಗ್ಗೆ ಸರಿಯಾಗಿ ಉತ್ತರಿಸಬೇಕೆಂದು ಅಪೇಕ್ಷಿಸುವುದು ಸರಿಯಲ್ಲ. ಘಟನೆಯ ಬಗ್ಗೆ ಸಂತ್ರಸ್ತೆಯ ತಾಯಿ ನೀಡಿರುವ ಸಾಕ್ಷಿಯೂ ಸೇರಿದಂತೆ ಇತರ ಸಾಕ್ಷಿಗಳನ್ನು ಪರಿಗಣಿಸಬೇಕಾಗುತ್ತದೆ” ಎಂದು ಕೋರ್ಟ್ ಅಭಿಪ್ರಾಯಪಟ್ಟಿತು.

    “ತಾಯಿ ಮತ್ತು ಅಪ್ರಾಪ್ತವಯಸ್ಸಿನ ಮಗಳ ನಡುವಿನ ಸಂಬಂಧ ವಿಶ್ವಾಸದ್ದಾಗಿರುತ್ತದೆ. ಮಗುವು ಮಾತಲ್ಲಿ ವಿವರಿಸದಿದ್ದರೂ ಅದನ್ನು ಅರ್ಥ ಮಾಡಿಕೊಳ್ಳುವ ದೈವಿಕ ಶಕ್ತಿ ತಾಯಿಗೆ ಇರುತ್ತದೆ” ಎಂದು ನ್ಯಾಯಮೂರ್ತಿ ವಿಭಾ ವಿ.ಕಂಕನವಾಡಿ ಅಭಿಪ್ರಾಯಪಟ್ಟಿದ್ದಾರೆ. (ಏಜೆನ್ಸೀಸ್)

    ಪೊಕ್ಸೊ ಕಾಯ್ದೆ ಅಡಿ ವಿವಾದಾತ್ಮಕ ತೀರ್ಪು ನೀಡಿದ ಬಾಂಬೆ ಹೈಕೋರ್ಟ್​ ಜಡ್ಜ್​ಗೆ ಸುಪ್ರೀಂ ಶಾಕ್​!

    ಅಮೆರಿಕದಲ್ಲಿ ನೆಲಕ್ಕುರುಳಿತು ಗಾಂಧಿ ಪ್ರತಿಮೆ: ಮುಖ, ಪಾದ ತುಂಡರಿಸಿದ ದುಷ್ಕರ್ಮಿಗಳು

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts