More

    ಪರಿಸರ, ವನ್ಯಜೀವಿ ಸಂರಕ್ಷಣೆ ಎಲ್ಲರ ಜವಾಬ್ದಾರಿ

    ಕಾರ್ಗಲ್: ತಾಪಮಾನ, ಹವಾಮಾನ ವೈಪರೀತ್ಯದಂತಹ ಜಾಗತಿಕ ಸಮಸ್ಯೆಗಳನ್ನು ಎದುರಿಸಲು ಮುಂದಿನ ಪೀಳಿಗೆ ಸಜ್ಜಾಗಬೇಕಿದೆ. ಹಾಗಾಗಿ ಪ್ರತಿಯೊಬ್ಬರೂ ಪರಿಸರ ಮತ್ತು ವನ್ಯಜೀವಿ ಸಂರಕ್ಷಣೆಯಲ್ಲಿ ಜವಾಬ್ದಾರಿ ತೋರಬೇಕಿದೆ ಎಂದು ಕಾರ್ಗಲ್ ವನ್ಯಜೀವಿ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಽಕಾರಿ ಸಿ.ಕೆ.ಯೋಗೀಶ್ ಹೇಳಿದರು.

    ಸಮೀಪದ ಭಾನುಕುಳಿ ಮತ್ತು ಅರಳಗೋಡು ಗ್ರಾಪಂ ವ್ಯಾಪ್ತಿಯ ಸರ್ಕಾರಿ ಪ್ರೌಢಶಾಲೆ ಬಿಳಿಗಾರು ಹಾಗೂ ನಂದೋಡಿ ಪ್ರಾಥಮಿಕ ಶಾಲೆಯಲ್ಲಿ ಶರಾವತಿ ಕಣಿವೆ ಸಿಂಗಳೀಕ ಅಭಯಾರಣ್ಯ ಮತ್ತು ಕಾರ್ಗಲ್ ವನ್ಯಜೀವಿ ವಲಯದ ಸಹಯೋಗದಲ್ಲಿ ಗುರುವಾರ ಏರ್ಪಡಿಸಿದ್ದ ವನಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ನಮ್ಮ ಪರಿಸರ ಹಾಗೂ ವನ್ಯಜೀವಿ ಸಂರಕ್ಷಣೆಯ ಕುರಿತು ಪ್ರತಿಯೊಬ್ಬರಲ್ಲೂ ಪ್ರಜ್ಞೆ ಇರಬೇಕು. ವಿದ್ಯಾರ್ಥಿಗಳು ಈ ನಿಟ್ಟಿನಲ್ಲಿ ಸಂಕಲ್ಪ ತೊಟ್ಟು ಕಾರ್ಯಪ್ರವೃತ್ತರಾಗಬೇಕು ಎಂದು ತಿಳಿಸಿದರು.
    ಇಲ್ಲಿನ ಶಾಲಾ ಆವರಣ ಹಾಗೂ ಸುತ್ತಲಿನ ಪ್ರದೇಶದಲ್ಲಿ ಹಲಸು, ಮಾವು, ನೆಲ್ಲಿ ಮುಂತಾದ ವಿವಿಧ ಜಾತಿಯ ಗಿಡಗಳನ್ನು ನೆಡುವ ಮೂಲಕ ಮಕ್ಕಳಲ್ಲಿ ಜಾಗೃತಿ ಮೂಡಿಸಲಾಯಿತು. ಕಾರ್ಗಲ್ ವನ್ಯಜೀವಿ ವಲಯ ಅರಣ್ಯಾಽಕಾರಿ ಸಂಧ್ಯಾ, ಭಾನುಕುಳಿ ಗ್ರಾಪಂ ಅಧ್ಯಕ್ಷ ಸೋಮರಾಜ್ ಕೋಮನಕುರಿ, ಅರಳಗೋಡು ಗ್ರಾಪಂ ಅಧ್ಯಕ್ಷೆ ಲಕ್ಷಿ÷್ಮÃ ದಿನೇಶ್, ಸದಸ್ಯರಾದ ರಾಜೇಶ್ ಯಲಕೋಡ್, ಬಿಳಿಗಾರು ಪ್ರೌಢಶಾಲೆ ಮುಖ್ಯಶಿಕ್ಷಕ ಕೆ.ಪಿ.ಶ್ರೀಧರ್, ಉಪ ವಲಯ ಅರಣ್ಯಾಽಕಾರಿಗಳಾದ ಜಿ.ಕೆ.ಸುಧಾಕರ್, ಪರಮೇಶ್ವರ್ ಬಳಗಲಿ, ಗ್ರಾಪಂ ಅಽಕಾರಿ ಮುಕ್ತ ಮೊಗೇರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts