More

    ಕೇರಳದಲ್ಲಿ ಪೊಲೀಸ್​ ಠಾಣೆ ಎದುರು ಗೋಮಾಂಸದ ಕರ್ರಿ, ರೊಟ್ಟಿ ವಿತರಣೆ ಮಾಡಿದ ಕಾಂಗ್ರೆಸ್ ಕಾರ್ಯಕರ್ತರು; ಮುಖ್ಯಮಂತ್ರಿ ವಿರುದ್ಧ ಕಿಡಿ

    ಕೋಳಿಕ್ಕೋಡ್​: ಕೇರಳದಲ್ಲಿ ಪೊಲೀಸ್​ ಪ್ರಶಿಕ್ಷಣಾರ್ಥಿಗಳಿಗೆ (ತರಬೇತಿಪಡೆಯುತ್ತಿರುವವರು) ನೀಡುವ ಊಟದ ಮೆನುವಿನಿಂದ ಗೋಮಾಂಸವನ್ನು ತೆಗೆಯಲಾಗಿದೆ ಎಂದು ವಾರದ ಹಿಂದೆ ಸುದ್ದಿಯಾಗಿತ್ತು. ಊಟದಲ್ಲಿ ಗೋಮಾಂಸ ನೀಡಲಾಗುವುದಿಲ್ಲ ಎಂದು ಹೇಳಲಾಗಿತ್ತು.

    ಆದರೆ ಕಾಂಗ್ರೆಸ್​ ಈಗ ಇದೇ ವಿಚಾರದಲ್ಲಿ ಒಂದು ಹೆಜ್ಜೆ ಮುಂದಿಟ್ಟಿದೆ. ಕೋಳಿಕ್ಕೋಡ್​​​ನ ಮುಕ್ಕಂ ಪೊಲೀಸ್ ಠಾಣೆಯೆದರು ಕಾಂಗ್ರೆಸ್ ಕಾರ್ಯಕರ್ತರು ಮಂಗಳವಾರ ಜನರಿಗೆ ಗೋಮಾಂಸದ ಕರ್ರಿ ಮತ್ತು ರೊಟ್ಟಿಯನ್ನು ಹಂಚಿದ್ದಾರೆ.

    ಕೇರಳ ಪ್ರದೇಶ ಕಾಂಗ್ರೆಸ್​ ಸಮಿತಿ ಪ್ರಧಾನ ಕಾರ್ಯದರ್ಶಿ, ವಕೀಲ ಕೆ.ಪ್ರವೀಣ್​ ಕುಮಾರ್ ಅವರು ಇದನ್ನು ಪ್ರಾರಂಭಿಸಿದ್ದಾರೆ. ಹಾಗೇ ಪೊಲೀಸ್ ಪ್ರಶಿಕ್ಷಣಾರ್ಥಿಗಳಿಗೆ ನೀಡಲಾಗುವ ಊಟದಿಂದ ಗೋಮಾಂಸವನ್ನು ಕೈಬಿಟ್ಟಿದ್ದಕ್ಕೆ ಕಿಡಿಕಾರಿದ್ದಾರೆ.

    ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್​ ಅವರಿಗೆ ಸಂಘಪರಿವಾರದ ಬಗ್ಗೆ ಒಲವು ಎಷ್ಟಿದೆ ಎಂಬುದಕ್ಕೆ ಇದೊಂದು ಘಟನೆಯೇ ಸಾಕ್ಷಿ. ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ತಕ್ಷಣ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾದವರು. ಗುಜರಾತ್​ ಧಂಗೆ ಪ್ರಕರಣದಲ್ಲಿ ನರೇಂದ್ರ ಮೋದಿ ಹಾಗೂ ಅಮಿತ್​ ಷಾ ಅವರಿಗೆ ಕ್ಲೀನ್​ ಚಿಟ್​ ಕೊಟ್ಟಿದ್ದ ಲೋಕನಾಥ್​ ಬೆಹ್ರಾ ಅವರನ್ನೇ ಡಿಜಿಪಿಯನ್ನಾಗಿ ನೇಮಕ ಮಾಡಿದರು.

    ಈಗ ಬೆಹ್ರಾ ಅವರು ಪಿಣರಾಯಿ ವಿಜಯನ್​ ಅವರ ಅನುಮತಿ ಪಡೆದೇ ಸಂಘಪರಿವಾರದ ಸಿದ್ಧಾಂತಗಳನ್ನು ಅನುಷ್ಠಾನಕ್ಕೆ ತರುತ್ತಿದ್ದಾರೆ. ರಾಜ್ಯದ ಬಗ್ಗೆ ಪಿಣರಾಯಿ ವಿಜಯನ್​ ತಳೆದಿರುವ ದ್ವಂದ್ವ ನಿಲುವನ್ನು ಕಾಂಗ್ರೆಸ್ ಬಹಿರಂಗ ಪಡಿಸುತ್ತದೆ ಎಂದು ಕುಮಾರ್​ ಹೇಳಿದರು.

    ಪೊಲೀಸ್​ ತರಬೇತಿ ಪಡೆಯುವವರಿಗೆ ಊಟದಲ್ಲಿ ಗೋಮಾಂಸ ಕೊಡಬಾರದು ಎಂಬ ವರದಿಯ ಬಗ್ಗೆ ಪೊಲೀಸರೇ ಸ್ಪಷ್ಟನೆ ನೀಡಿದ್ದರು. ಈ ವರದಿ ಸತ್ಯಕ್ಕೆ ದೂರವಾದ್ದು ಎಂದು ಹೇಳಿದ್ದಾರೆ.

    ಪ್ರಶಿಕ್ಷಣಾರ್ಥಿಗಳಿಗೆ ಆರೋಗ್ಯಕರ ಊಟ ಕೊಡಬೇಕು. ಅವರು ತಿನ್ನುವ ಆಹಾರದ ಮೂಲಕ ಶಕ್ತಿ ಸಿಗುವಂತಿರಬೇಕು. ಹಾಗಾಗಿ ಆಯಾ ಪ್ರದೇಶಗಳಲ್ಲಿ ಸಿಗುವ ಪೌಷ್ಟಿಕ, ಶಕ್ತಿ ಬರುವ ಆಹಾರಗಳನ್ನೊಳಗೊಂಡ ಊಟ ತಯಾರಿಸಬೇಕು ಎಂಬುದು ಪೊಲೀಸ್ ಪ್ರಶಿಕ್ಷಣಾರ್ಥಿಗಳ ಪ್ರತಿನಿಧಿ, ಪೊಲೀಸ್ ಅಧಿಕಾರಿಗಳನ್ನೊಳಗೊಂಡ ಮೆಸ್​ ಕಮಿಟಿ ನಿರ್ಧಾರ ತೆಗೆದುಕೊಂಡಿದೆ ಎಂದು ತಿಳಿಸಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts