More

    ಲೋಕಸಭೆ ಚುನಾವಣೆಯಲ್ಲಿ ಮುಸ್ಲಿಂ ಮತದಾರರು ಕಾಂಗ್ರೆಸ್ ಜೊತೆ ಹೋಗಬಾರದು: ಪ್ರಕಾಶ್​ ಅಂಬೇಡ್ಕರ್

    ಮುಂಬೈ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮಹಾರಾಷ್ಟ್ಟದಲ್ಲಿ ಕಾಂಗ್ರೆಸ್​ ಪಕ್ಷ ಏನಾದರೂ ಒಂಟಿಯಾಗಿ ಸ್ಫರ್ಧಿಸಿದರೆ ಶೇ 50ರಷ್ಟು ಸ್ಥಾನಗಳಲ್ಲಿ ಠೇವಣಿ ಕಳೆದುಕೊಳ್ಳಲಿದೆ ಎಂದು ವಂಚಿತ್ ಬಹುಜನ ಅಘಾಡಿ (VBA) ಅಧ್ಯಕ್ಷ ಪ್ರಕಾಶ್​ ಅಂಬೇಡ್ಕರ್​ ಭವಿಷ್ಯ ನುಡಿದಿದ್ದಾರೆ.

    ವಾಶಿಮ್ ಜಿಲ್ಲೆಯ ರಿಸೋಡ್​ನಲ್ಲಿ ಮಾತನಾಡುದ ಪ್ರಕಾಶ್​ ಅಂಬೇಡ್ಕರ್, ಮಿತ್ರಪಕ್ಷಗಳ ಬೆಂಬಲವಿಲ್ಲದೇ ಹೋದರೆ ಕಾಂಗ್ರೆಸ್‌ಗೆ ಸಂಕಷ್ಟ ಎದುರಾಗಲಿದೆ. ಹೀಗಾಗಿ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್​ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಳ್ಳುವುದು ಸೂಕ್ತ ಎಂದು ಅಭಿಪ್ರಾಯಪಟ್ಟಿದ್ದಾರೆ.

    ಕಳೆದ ಒಂದು ವರ್ಷದಿಂದ ವಂಚಿತ್ ಬಹುಜನ ಅಘಾಡಿ (VBA) ಮಹಾ ವಿಕಾಸ್​ ಅಘಾಡಿಯನ್ನು ಸೇರಲು  ತಯಾರಿ ನಡೆಸುತ್ತಿತ್ತು. ಆ ನಿಟ್ಟಿನಲ್ಲಿ ಹಲವು ಮಾತುಕತೆಗಳು ನಡೆದವು. ಆದರೆ, ಯಶಸ್ಸು ಸಿಗಲಿಲ್ಲ. ಉದ್ಧವ್ ಠಾಕ್ರೆ ಗುಂಪು ವಿಬಿಎಯನ್ನು ಸಂಪರ್ಕಿಸಿತು, ಆದರೆ ಕಾಂಗ್ರೆಸ್ ಮತ್ತು ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ ಅದಕ್ಕೆ ಅವಕಾಶ ನೀಡಲಿಲ್ಲ. ಆದರೆ ಇಂದು ನಾವು ಮಹಾ ವಿಕಾಸ್​ ಆಘಾಡಿ ಸೇರುತ್ತಿರುವುದು ಖುಷಿಯಾಗಿದೆ.

    MVA VBA

    ಇದನ್ನೂ ಓದಿ: ಗನ್​ ಪಾಯಿಂಟ್​ ಇಟ್ಟು ಲವ್​ ಪ್ರಪೋಸ್​ ಮಾಡಿದ ಪಾಗಲ್​ ಪ್ರೇಮಿ

    ಕಾಂಗ್ರೆಸ್‌ನ ಏಕಾಭಿಪ್ರಾಯದಿಂದಾಗಿ ಇಂಡಿಯಾ ಬಣ ಹೇಗೆ ವಿಭಜನೆ ಆಯಿತು ಎಂಬುದು ನಾವು ನೋಡಿದ್ದೇವೆ. ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಅದೇ ರೀತಿ ಮಾಡಿದರೆ, ಅದು ಎಂವಿಎ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಕಾಂಗ್ರೆಸ್ ಕೊಟ್ಟಿದ್ದನ್ನು ಕೊಟ್ಟಿದ್ದೇವೆ ಎಂಬ ಕಾರಣಕ್ಕೆ ಮುಸ್ಲಿಂ ಮತದಾರರು ಕಾಂಗ್ರೆಸ್ ಜೊತೆ ಹೋಗಬಾರದು, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ರಾಜ್ಯದ 48 ಸೀಟುಗಳ ಪೈಕಿ ಅರ್ಧದಷ್ಟು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಏಕಾಂಗಿಯಾಗಿ ಸ್ಪರ್ಧಿಸಿದರೆ ಹೆಚ್ಚಿನ ಸಂಖ್ಯೆಯಲ್ಲಿ ಠೇವಣಿ ಕೈತಪ್ಪಲಿದೆ.

    ಮುಂದಿನ 15 ದಿನಗಳಲ್ಲಿ ಸೀಟು ಹಂಚಿಕೆ ಮಾಡಲು ನಿರ್ಧರಿಸಿದರೆ ಸರಿ ಇಲ್ಲದೇ ಹೋದರೆ ಅವರ ಸ್ಥಿತಿ ಇಂಡಿಯಾ ಮೈತ್ರಿಕೂಟದಂತಾಗುತ್ತದೆ. ನರೇಂದ್ರ ಮೋದಿ ವಿರುದ್ಧ ಇಂಡಿಯಾ ಒಕ್ಕೂಟ ರಚನೆಯಾಯಿತು. ಆದರೆ, ಅದನ್ನು ತಯಾರಿಸಿದಾಗ ಅದು ಮುರಿಯುವುದು ಖಚಿತ, ಏಕೆಂದರೆ ರಿಂಗ್ ಮಾಸ್ಟರ್ ಪ್ರಧಾನಿ ನರೇಂದ್ರ ಮೋದಿ ಎಂದು ಪ್ರಕಾಶ್​ ಆಂಬೇಡ್ಕರ್​ ಆರೋಪಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts