More

    ಕಾಂಗ್ರೆಸ್ ಸಭೆಯಲ್ಲಿ ಜಟಾಪಟಿ: ಹಿರಿಯ ನಾಯಕರ ವಿರುದ್ಧ ಯುವ ಸಂಸದರ ಆಕ್ರೋಶ

    ನವದೆಹಲಿ: ಕಾಂಗ್ರೆಸ್ ಸಂಸದರ ಜೊತೆ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಗುರುವಾರ ನಡೆಸಿದ್ದ ವರ್ಚುವಲ್ ಸಭೆ ಆಂತರಿಕ ಕಚ್ಚಾಟವನ್ನು ಮತ್ತೊಮ್ಮೆ ಬಯಲಿಗೆ ಬರುವಂತೆ ಮಾಡಿದೆ. ಯುವ ತಲೆಮಾರಿನ ನಾಯಕರು ಪಕ್ಷದ ನಾಯಕತ್ವದ ನಿಷ್ಕ್ರಿಯತೆಯನ್ನು ತರಾಟೆಗೆ ತೆಗೆದುಕೊಂಡರು. ಪಕ್ಷ ಇಂದು ಅಧೋಗತಿಗಿಳಿಯಲು ಮನಮೋಹನ್ ಸಿಂಗ್ ನೇತೃತ್ವದ ಎರಡನೆ ಅವಧಿಯ ಯುಪಿಎ ಸರ್ಕಾರದಲ್ಲಿದ್ದ ಪ್ರಮುಖರೇ ಕಾರಣ ಎಂದು ಕೆಲ ಯುವ ಸಂಸದರು ದೂರಿದರು. ಸಿಂಗ್ ಸರ್ಕಾರದಲ್ಲಿ ಸಚಿವರಾಗಿದ್ದವರು ಹಾಗೂ ರಾಹುಲ್ ಗಾಂಧಿ ತಂಡದಲ್ಲಿ ಗುರುತಿಸಿಕೊಂಡಿರುವ ನಾಯಕರ ಮಧ್ಯೆ ವಾಕ್ಸಮರವೇ ನಡೆಯಿತು ಎಂದು ಮೂಲಗಳು ತಿಳಿಸಿವೆ.

    ಎರಡನೇ ಅವಧಿಯ ಯುಪಿಎ ಸರ್ಕಾರದಲ್ಲಿದ್ದವರೇ ಕಾಂಗ್ರೆಸ್​ನ ಕ್ಷಿಪ್ರ ಅವನತಿಗೆ ಹೊಣೆಗಾರರು ಎಂದು ಯುವ ನಾಯಕರು ಆಪಾದಿಸಿದರು. ರಾಹುಲ್ ಗಾಂಧಿ ಮತ್ತೆ ಪಕ್ಷದ ಸಾರಥ್ಯ ವಹಿಸಬೇಕೆಂದು ಅವರಲ್ಲಿ ಕೆಲವರು ಪ್ರತಿಪಾದಿಸಿದರು. ಬೇರೆ ಯಾವುದೇ ವ್ಯಕ್ತಿ ಬಗ್ಗೆ ಸಹಮತ ಮೂಡದಿರುವುದರಿಂದ ರಾಹುಲ್ ಅವರೇ ಅಧ್ಯಕ್ಷರಾಗ ಬೇಕೆನ್ನುವುದು ಅವರ ನಿಲುವಾಗಿದೆ. ಎರಡು ಬಾರಿ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಸಭೆಯಲ್ಲಿ ಸಂಪೂರ್ಣ ಮೌನಕ್ಕೆ ಶರಣಾಗಿದ್ದರು.

    ಇದನ್ನೂ ಓದಿ: ಈ ಗ್ರಾಮದಲ್ಲಿ ಆನ್​ಲೈನ್ ಕ್ಲಾಸ್​ ಫೇಲಾಯಿತು- ಶಾಲೆಯೇ ಮೊಬೈಲ್ ಆಯಿತು ನೋಡಿ!

    ಬಿಜೆಪಿ ಸರ್ಕಾರದ ನಿರ್ವಹಣೆ ತುಂಬಾ ಕೆಟ್ಟದಾಗಿದೆ. ಹಾಗೂ ಅದರ ವಿರುಧ ದಾಳಿ ಮಾಡಬೇಕಾಗಿದೆ. ಆದರೆ ನಾವು ಕೂಡ ನಮ್ಮ ಬಗ್ಗೆ ವಿಮಶಿಸಿಕೊಳ್ಳಬೇಕಾಗಿದೆ.
    -ಕಪಿಲ್ ಸಿಬಲ್, ಹಿರಿಯ ಕಾಂಗ್ರೆಸ್ ನಾಯಕ

    ಅತೃಪ್ತಿಗೆ ಕಾರಣ: ಮಂದಗತಿಯ ಆರ್ಥಿಕ ಬೆಳವಣಿಗೆ, ಕರೊನಾ ವೈರಸ್ ಪರಿಸ್ಥಿತಿ, ಚೀನಾ ವಿವಾದದ ಕುರಿತು ಸರ್ಕಾರದ ಪ್ರತಿಕ್ರಿಯೆ ಮೊದಲಾದ ವಿಚಾರಗಳನ್ನು ಸರಿಯಾಗಿ ಬಳಸಿಕೊಳ್ಳುವಲ್ಲಿ ಪಕ್ಷದ ನಾಯಕತ್ವ ವಿಫಲವಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ ಬೆಂಬಲದ ಕೋಟೆ ಭೇದಿಸುವಲ್ಲಿ ಪಕ್ಷ ನಾಯಕತ್ವ ತೀರಾ ದುರ್ಬಲವಾಗಿದೆ ಎಂದು ಹಲವರು ಕುಟುಕಿದರು. ಪಕ್ಷದಲ್ಲಿ ಆತ್ಮಾವಲೋಕನ ಅಗತ್ಯ ಎಂಬ ರಾಜೀವ್ ಸತಾವ್ ಅಭಿಪ್ರಾಯಕ್ಕೆ ಹಿರಿಯ ನಾಯಕ ಕಪಿಲ್ ಸಿಬಲ್ ದನಿಗೂಡಿಸಿದರು. ಮೋದಿ ಸರ್ಕಾರದ ವಿರುದ್ಧ ರಾಹುಲ್ ಗಾಂಧಿ ಪ್ರತಿದಿನ ಟ್ವೀಟ್ ಮೂಲಕ ವಾಗ್ದಾಳಿ ಮಾಡಿದರಷ್ಟೆ ಸಾಲದು ಎಂದು ಸತಾವ್ ಅಭಿಪ್ರಾಯಪಟ್ಟರು. ಒಂದೆಡೆ ಯುವ ನಾಯಕರು ಪಕ್ಷ ತೊರೆಯುತ್ತಿರುವಾಗಲೇ ರಾಹುಲ್ ಗಾಂಧಿ ಮತ್ತೆ ಅಧ್ಯಕ್ಷರಾಗಬೇಕೆಂಬ ಕೂಗು ಎದ್ದಿರುವುದು ಕುತೂಹಲ ಮೂಡಿಸಿದೆ.

    ಫಾರಿನ್ ಕಲರ್ ಟಿವಿ ಆಸೆ ಬಿಟ್ಟುಬಿಡಿ: ಇನ್ನೇನಿದ್ರೂ ಮೇಡ್ ಇನ್ ಇಂಡಿಯಾ ಜಮಾನಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts