More

    ಕಾಂಗ್ರೆಸ್​ನಿಂದ ಕೋಮುಶಕ್ತಿಗಳಿಗೆ ಬೆಂಬಲ

    ಕೋಲಾರ: ಜಿಲ್ಲೆಯಲ್ಲಿ ಕಾಂಗ್ರೆಸ್​ಗೆ ಬಂದಿರುವ ಕಾಯಿಲೆ ಬೇಗ ವಾಸಿಯಾಗುವ ಲಕ್ಷಣ ಕಾಣುತ್ತಿಲ್ಲ. ಪಕ್ಷದಲ್ಲಿನ ಆಂತರಿಕ ಭಿನ್ನಾಭಿಪ್ರಾಯಗಳಿಂದ ಕೋಮುಶಕ್ತಿಗಳಿಗೆ ಪರೋಕ್ಷ$ವಾಗಿ ಬೆಂಬಲ ನೀಡುತ್ತಿದ್ದಾರೆ ಎಂದು ಸಿಪಿಎಂ ರಾಜ್ಯ ಕಾರ್ಯದರ್ಶಿ ಜಿ.ಸಿ.ಬಯ್ಯಾರೆಡ್ಡಿ ಆರೋಪಿಸಿದರು.

    ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಜನರ ವಿಶ್ವಾಸ ಕಳೆದುಕೊಂಡಿದೆ. ಬಂಡವಾಳಶಾಹಿಗಳಿಗೆ ಬೆಂಬಲವಾಗಿ ನಿಂತಿದೆ. ಇದರ ವಿರುದ್ಧ ಧ್ವನಿ ಎತ್ತಬೇಕಾಗಿರುವ ಪ್ರತಿಪಕ್ಷದವರು ಶಕ್ತಿ ಕಳೆದುಕೊಂಡಂತೆ ಕಾಣುತ್ತಿವೆ ಎಂದು ದೂರಿದರು.

    ಹಿಂದೂ ಮುಸ್ಲಿಂರು ಸಾಮರಸ್ಯದಿಂದ ಬದುಕು ಸಾಗಿಸಿಕೊಂಡು ಹೋಗುತ್ತಿದ್ದಾರೆ. ಆದರೆ ಸಂಘಪರಿವಾರದವರು ಕೋಮುಗಲಭೆ ಉಂಟು ಮಾಡುತ್ತಿದ್ದಾರೆ. ಕಾಂಗ್ರೆಸ್​ಗೆ ಏನಾಗಿದಿಯೋ ಗೊತ್ತಿಲ್ಲ, ಎರಡು ಗುಂಪುಗಳ ಭಿನ್ನಾಭಿಪ್ರಾಯದಿಂದ ಕಳೆದ ಚುನಾವಣೆಯಲ್ಲಿ ಬಿಜೆಪಿ ಸಂಸದರನ್ನು ಗೆಲ್ಲಿಸಿಕೊಂಡರು. ಅವರು ಹೇಗೆ ನಡೆಸಿಕೊಂಡಿದ್ದಾರೆ ಎಂಬುದು ಜನತೆಗೆ ಮಾಹಿತಿ ಇದೆ. ಮತ್ತೆ ಕಾಂಗ್ರೆಸ್​ ಜಗಳ ಮುಂದುವರಿದಿದ್ದು ಮತ್ತೆ ಎನ್​ಡಿಎ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಲು ಮುಂದಾಗಿದ್ದಾರೆ. ಕೋಮುವಾದ ಬಲಿಷ್ಠಗೊಳಿಸಲು ಸಹಕಾರ ನೀಡುತ್ತಿದ್ದಾರೆ. ಇವರಿಗೆಲ್ಲ ಛೀಮಾರಿ ಹಾಕಬೇಕು ಎಂದು ಎಚ್ಚರಿಸಿದರು.

    ಇಂಡಿಯಾ ಕೂಟದಲ್ಲಿ ಸಿಪಿಎಂ ಗುರುತಿಸಿಕೊಂಡಿದೆ. ಬಿಜೆಪಿ ಸರ್ಕಾರ ಬೇರೆ ಬೇರೆ ಕಡೆ ತೊಂದರೆ ನೀಡುತ್ತಾ ಬರುತ್ತಿದ್ದರು ದೇಶದ ಹಿತಕ್ಕಾಗಿ ಹೋರಾಟ ಮುಂದುವರಿಸಿದ್ದೇವೆ. ಈ ಚುನಾವಣೆಯಲ್ಲಿ ಇಂಡಿಯಾ ಒಕ್ಕೂಟ ಒಗ್ಗ್ಗಟ್ಟಾಗದಿದ್ದರೆ ಮುಂದಿನ ದಿನಗಳಲ್ಲಿ ದೇಶದಲ್ಲಿ ಚುನಾವಣೆ ಎದುರಿಸುವುದು ಅಸಾಧ್ಯವಾಗುತ್ತದೆ ಎಂದು ಬೇಸರಿಸಿದರು.

    ರಾಜ್ಯದ 35 ಸಚಿವರ ಪೈಕಿ 4, 5 ಮಂದಿ ಸಚಿವರು ಕೆಲಸ ಮಾಡುತ್ತಿಲ್ಲ. ಜಿಲ್ಲೆಯಲ್ಲಿ 4 ಕಾಂಗ್ರೆಸ್​ ಶಾಸಕರು ಇದ್ದರು ಸಚಿವ ಸ್ಥಾನ ಬೇಕು ಎಂದು ಕೇಳಿಲ್ಲ. ಇದರಿಂದಾಗಿ ಬೆಂಗಳೂರಿನವರಿಗೆ ಸಚಿವ ಸ್ಥಾನ ನೀಡಿದ್ದಾರೆ. ಜೀವನದ ಮೇಲೆ ವಿರುಕ್ತಗೊಂಡು ಹಿರಿಯ ರಾಜಕಾರಣಿ ತೋಟ ಸೇರಿಕೊಂಡರು, ಶಾಸಕರು ಧ್ವನಿ ಎತ್ತುತ್ತಿಲ್ಲ. 50 ವರ್ಷಗಳಿಂದ ಸ್ವಾಧಿನದಲ್ಲಿ ಇದ್ದರೆ ರೈತರಿಗೆ ಮಂಜೂರು ಮಾಡಿದ್ದಾರೆ. ಬರಗಾಲ, ರೈತರ ಜಮೀನು ಕಸಿದುಕೊಳ್ಳುತ್ತಿರುವುದರ ವಿರುದ್ಧ ಧ್ವನಿ ಎತ್ತುವಲ್ಲಿ ವಿಫಲರಾಗಿದ್ದಾರೆ ಎಂದರು.

    ಕೇಂದ್ರದಿಂದ ಬರ ಅಧ್ಯಯನ ತಂಡಗಳು ರಾಜ್ಯಕ್ಕೆ ಬಂದು ಹೋದರು ಪರಿಹಾರ ಬಿಡುಗಡೆ ಮಾಡಿಲ್ಲ. ಆದರೆ ಹಣಕಾಸು ಸಚಿವರು ಸಂಪೂರ್ಣವಾಗಿ ಕೊಟ್ಟಿರುವುದಾಗಿ ಹೇಳುತ್ತಿದ್ದಾರೆ. 28 ಸಂಸದರ ಪೈಕಿ 3 ಮಂದಿ ಸಚಿವರು ಇದ್ದಾರೆ. ರಾಜ್ಯದ ಪರಿಸ್ಥಿತಿ ಬಗ್ಗೆ ಧ್ವನಿ ಎತ್ತುವಲ್ಲಿ ವಿಫಲರಾಗಿದ್ದಾರೆ ಎಂದು ಟೀಕಿಸಿದರು.
    ವಿಪತ್ತು ನಿರ್ವಹಣಾ ಪ್ರಾಧಿಕಾರದ ಪ್ರಕಾರ ರಾಜ್ಯದಕ್ಕೆ ಒಟ್ಟು 181.71 ಲಕ್ಷ ಪರಿಹಾರ ಕೊಡಬೇಕು ಎಂದು ಅಂದಾಜಿಸಲಾಗಿದೆ. ಆದರೆ ನಯಾ ಪೈಸೆ ಬಿಡುಗಡೆ ಮಾಡಿಲ್ಲ ಎಂದರು.
    ಸಿಪಿಎಂ ಜಿಲ್ಲಾ ಕಾರ್ಯದರ್ಶಿಗಳಾದ ಗಾಂಧಿನಗರ ನಾರಾಯಣಸ್ವಾಮಿ, ಟಿ.ಎಂ.ವೆಂಕಟೇಶ್​, ಪಿ.ಆರ್​.ಸೂರ್ಯನಾರಾಯಣ, ಪಿ.ಶ್ರೀನಿವಾಸ್​, ಎ.ಆರ್​.ಬಾಬು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts