More

    ಮೂರು ಪಾಲಿಕೆ ‘ಕೈ’ವಶ ಮಾಡಿಕೊಳ್ಳುವ ಸಿದ್ಧತೆ ಶುರು

    ಬೆಂಗಳೂರು: ಬೆಳಗಾವಿ, ಕಲಬುರಗಿ, ಹುಬ್ಬಳ್ಳಿ-ಧಾರವಾಡ ನಗರ ಸ್ಥಳೀಯ ಸಂಸ್ಥೆಗಳ ಸಾರ್ವತ್ರಿಕ ಚುನಾವಣೆ ಘೋಷಣೆ ಬೆನ್ನಲ್ಲೇ, ಕಾಂಗ್ರೆಸ್ ಸಕ್ರಿಯವಾಗಿದೆ. ಈ ಮೂರು ಪಾಲಿಕೆ ‘ಕೈ’ವಶ ಮಾಡಿಕೊಳ್ಳುವ ಹೊಣೆಯನ್ನು ಪಕ್ಷವು ಹಿರಿಯ ನಾಯಕರ ಹೆಗಲಿಗೆ ಹೊರಿಸಿದೆ.

    ಪಾಲಿಕೆಗಳ ಎಲ್ಲಾ ಕ್ಷೇತ್ರಗಳಿಗೂ ಪಕ್ಷದ ಅಭ್ಯರ್ಥಿಗಳನ್ನೇ ಕಣಕ್ಕಿಳಿಸಲು ನಿರ್ಧರಿಸಿದ್ದು, ಅಭ್ಯರ್ಥಿ ಆಯ್ಕೆ, ಚುನಾವಣಾ ಪೂರ್ವ ಸಿದ್ಧತೆಗಾಗಿ ಉಸ್ತುವಾರಿ ಸಮಿತಿ ರಚಿಸಲಾಗಿದೆ. ಹುಬ್ಬಳ್ಳಿ-ಧಾರವಾಡಕ್ಕೆ ಆರ್.ವಿ.ದೇಶಪಾಂಡೆ ಅಧ್ಯಕ್ಷತೆಯಲ್ಲಿ ಶಿವಾನಂದ ಪಾಟೀಲ್, ತನ್ವೀರ್ ಸೇಠ್ ಸದಸ್ಯರಾಗಿರುವ ಸಮಿತಿ ರಚಿಸಲಾಗಿದೆ. ಕಲಬುರಗಿಗೆ ಎಸ್.ಆರ್.ಪಾಟೀಲ್ ಅಧ್ಯಕ್ಷತೆಯ ಜಿ.ಸಿ.ಚಂದ್ರಶೇಖರ್, ಯು.ಟಿ.ಖಾದರ್ ಸದ್ಯರಾಗಿರುವ ಸಮಿತಿ ಮತ್ತು ಬೆಳಗಾವಿಗೆ ಎಂ.ಬಿ.ಪಾಟೀಲ್ ಅಧ್ಯಕ್ಷತೆಯ ಎಲ್.ಹನುಮಂತಪ್ಪ, ನಾಸೀರ್ ಅಹ್ಮದ್ ಸದಸ್ಯರಾಗಿರುವ ಸಮಿತಿ ಕಾರ್ಯನಿರ್ವಹಿಸಲಿದೆ.

    ಅದೇ ರೀತಿ ಈಶ್ವರ ಖಂಡ್ರೆ, ಸತೀಶ್ ಜಾರಕಿಹೊಳಿ ಹಾಗೂ ಧ್ರುವನಾರಾಯಣ್ ಅವರು ಒಂದೊಂದು ಪಾಲಿಕೆ ಸಂಯೋಜಕರಾಗಿರುತ್ತಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

    ರಾಹುಲ್​ ಗಾಂಧಿ ಇನ್​ಸ್ಟಾಗ್ರಾಂ ವಿಡಿಯೋ: ಫೇಸ್​​ಬುಕ್​ ಅಧಿಕಾರಿಗಳಿಗೆ ಮಕ್ಕಳ ಆಯೋಗದ ಬುಲಾವ್!

    ಧ್ವಜಾರೋಹಣಕ್ಕೆ ವಿರೋಧ! ನಿವಾಸಿಗಳಿಗೆ ಖಡಕ್​ ಎಚ್ಚರಿಕೆ ನೀಡಿದ ಸಿಎಂ

     

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts