More

    ‘ಗೆಹ್ಲೋಟ್​ -ಪೈಲಟ್​ ನಡುವಿನ ಸಂಘರ್ಷವನ್ನು ಸೋನಿಯಾ ಗಾಂಧಿ ಒಂದು ಕಪ್​ ಚಹಾದೊಂದಿಗೆ ಬಗೆಹರಿಸಲಿ’

    ನವದೆಹಲಿ: ರಾಜಸ್ಥಾನದಲ್ಲಿ ಮುಖ್ಯಮಂತ್ರಿ ಅಶೋಕ್​ ಗೆಹ್ಲೋಟ್​ ಮತ್ತು ಮಾಜಿ ಡಿಸಿಎಂ ಸಚಿನ್​ ಪೈಲಟ್​ ಬಣಗಳ ನಡುವೆ ನಡೆಯುತ್ತಿರುವ ಸಂಘರ್ಷದ ಬಗ್ಗೆ ಹಿರಿಯ ನಾಯಕಿ ಮಾರ್ಗರೆಟ್ ಆಳ್ವಾ ಪ್ರತಿಕ್ರಿಯೆ ನೀಡಿದ್ದಾರೆ.

    ರಾಷ್ಟ್ರೀಯ ಮಾಧ್ಯಮವೊಂದು ನಡೆಸಿದ ಸಂದರ್ಶನದಲ್ಲಿ ಮಾತನಾಡಿದ ಮಾರ್ಗರೆಟ್​ ಆಳ್ವಾ, ಇದು ಕಾಂಗ್ರೆಸ್​ನ ಆಂತರಿಕ ವಿಚಾರ. ಇದನ್ನು ಸೋನಿಯಾ ಗಾಂಧಿಯವರೇ ಬಗೆಹರಿಸಬೇಕು ಎಂದು ಹೇಳಿದ್ದಾರೆ.

    ತಾನು ಯಾವ ಕಾರಣಕ್ಕೂ ಪಕ್ಷವನ್ನು ಬಿಡುವುದಿಲ್ಲ ಎಂದು ಸಚಿನ್​ ಪೈಲಟ್​ ಸ್ಪಷ್ಟವಾಗಿ ಹೇಳಿದ್ದಾರೆ. ಅಲ್ಲದೆ, ಕಾಂಗ್ರಸ್​ ಸರ್ಕಾರವನ್ನು ಉರುಳಿಸುವ ಇರಾದೆಯೂ ನನಗಿಲ್ಲ ಹಾಗೂ ನಾನು ಬಿಜೆಪಿ ಸೇರುವುದಿಲ್ಲ ಎಂದವರು ತಿಳಿಸಿದ್ದಾರೆ. ಹಾಗಾಗಿ ಇದು ಕಾಂಗ್ರೆಸ್​ನ ಆಂತರಿಕ ವಿಚಾರ ಎಂದೇ ಪರಿಗಣಿಸಲ್ಪಡುತ್ತದೆ. ಇಲ್ಲಿ ರಾಜ್ಯಪಾಲರಾಗಲೀ, ಕೋರ್ಟ್ ಆಗಲಿ ಮಧ್ಯಪ್ರವೇಶ ಮಾಡುವ ಅಗತ್ಯವೂ ಕಾಣುವುದಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಐಸಿಸ್​ ಉಗ್ರರು ನಮ್ಮ ನಡುವೆಯೇ ಹೆಚ್ಚಾಗಿದ್ದಾರೆ…! ವಿಶ್ವ ಸಂಸ್ಥೆ ನೀಡಿದೆ ಆಘಾತಕಾರಿ ಮಾಹಿತಿ

    ಹಾಗೇ ಈ ಜಗಳವನ್ನು ಕಾಂಗ್ರೆಸ್​ ಮಧ್ಯಂತರ ಅಧ್ಯಕ್ಷೆ ಸೋನಿಯಾ ಗಾಂಧಿಯವರೇ ಬಗೆಹರಿಸಬೇಕು. ಅವರು ಅಶೋಕ್​ ಗೆಹ್ಲೋಟ್​ ಮತ್ತು ಸಚಿನ್​ ಪೈಲಟ್​ ಅವರಿಬ್ಬರನ್ನೂ ಒಟ್ಟಿಗೇ ಚಹಾ ಕುಡಿಯಲು ಬನ್ನಿ ಎಂದು ಆಹ್ವಾನಿಸಬೇಕು. ಇಬ್ಬರನ್ನೂ ಮುಖಾಮುಖಿ ಕೂರಿಸಿಕೊಂಡು, ಟೀ ಕುಡಿಯುತ್ತ ಚರ್ಚಿಸಬೇಕು. ಒಂದು ಕಪ್​ ಚಹಾ ಮುಗಿಯುವುದರೊಳಗೆ ಎಲ್ಲ ಭಿನ್ನಾಭಿಪ್ರಾಯಗಳೂ ಮುಗಿದಿರುತ್ತವೆ ಎಂದು ಮಾರ್ಗರೆಟ್​ ಆಳ್ವಾ ಹೇಳಿದ್ದಾರೆ. (ಏಜೆನ್ಸೀಸ್)

    ‘ಒಂದು ಗ್ಯಾಂಗ್​ ನನ್ನ ವಿರುದ್ಧ ಕೆಲಸ ಮಾಡುತ್ತಿದೆ..ಇರಲಿ, ದೇವರಿದ್ದಾನೆ’: ಎ.ಆರ್​.ರೆಹಮಾನ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts