More

    ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ: ಶಾಲಾ ಮಕ್ಕಳ ಬಳಕೆಗೆ ಆಕ್ರೋಶ

    ಬಳ್ಳಾರಿ: ಪೆಟ್ರೋಲ್ ಹಾಗೂ ಡಿಸೇಲ್ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್‌ನ ಮುಖಂಡರಿಂದ ಬಳ್ಳಾರಿಯಲ್ಲಿ ಬುಧವಾರ ಪ್ರತಿಭಟನೆ ನಡೆಯಿತು.

    ನಗರದ ಸುಧಾ ಸರ್ಕಲ್​ನಿಂದ ಸೈಕಲ್ ಜಾಥಾ ಮೂಲಕ ಗಾಂಧಿ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಿತು. ಪ್ರತಿಭಟನೆಯಲ್ಲಿ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಭಾಗಿಯಾಗಿದ್ದರು. ಆದರೆ, ಪ್ರತಿಭಟನೆ ನೆಪದಲ್ಲಿ ಸಾಮಾಜಿಕ ಅಂತರವನ್ನು ಕಾಂಗ್ರೆಸ್ ಕಾರ್ಯಕರ್ತರು ಮರೆತಿದ್ದರು. ಅಲ್ಲದೆ, ಸೈಕಲ್ ಜಾಥಾದಲ್ಲಿ ಮಕ್ಕಳನ್ನ ಬಳಕೆ ಮಾಡಿಕೊಂಡರುವ ಕ್ರಮಕ್ಕೆ ಆಕ್ರೋಶ ಕೂಡ ಕೇಳಿ ಬಂದಿದೆ.

    ಶಾಲೆಗೆ ಹೋಗುವ ಮಕ್ಕಳನ್ನ ಪ್ರತಿಭಟನೆಗೆ ಬಳಕೆ ಮಾಡಿಕೊಳ್ಳಲಾಗಿದೆ. ಈಗಾಗಲೇ ಅವಿಭಜಿತ ಜಿಲ್ಲೆಯಲ್ಲಿ 4500 ಕ್ಕೂ ಹೆಚ್ಚು ಮಕ್ಕಳಲ್ಲಿ ಕರೊನಾ ವೈರಸ್ ಕಾಣಿಸಿಕೊಂಡಿದೆ. ಸುಮಾರು 29 ಮಕ್ಕಳಲ್ಲಿ MIS-C ಕಾಯಿಲೆ ದೃಢಪಟ್ಟಿದೆ. ಈ ಹಿನ್ನಲೆ ಮಕ್ಕಳು ಜಾಗೃತವಾಗಿರಬೇಕು ಎಂದು ಜಿಲ್ಲಾಡಳಿತ ತಿಳಿಸಿದೆ. ಆದರೆ, ಕರೊನಾ ನಿಯಮಗಳನ್ನ ಗಾಳಿಗೆ ತೂರಿ 20ಕ್ಕೂ ಅಧಿಕ ಶಾಲಾ ಮಕ್ಕಳು ಸೈಕಲ್ ಜಾಥಾದಲ್ಲಿ ಭಾಗಿಯಾಗಿದ್ದಾರೆ.

    ಮಕ್ಕಳ ಆರೋಗ್ಯ ರಕ್ಷಣೆ ಮರೆತು, ಸೈಕಲ್ ಜಾಥಾದಲ್ಲಿ ಮಕ್ಕಳನ್ನು ಕಾಂಗ್ರೆಸ್ ಬಳಕೆ ಮಾಡಿಕೊಂಡಿದೆ. ಜಾಥಾ ವೇಳೆ ಸಾಮಾಜಿಕ ಅಂರತ ಕಾಯುಕೊಂಡಿಲ್ಲ ಮತ್ತು ಮಾಸ್ಕ್​ ಸಹ ಧರಿಸದೆ ಪ್ರತಿಭಟನೆಯಲ್ಲಿ ಮಕ್ಕಳು ಭಾಗಿಯಾಗಿದ್ದಾರೆ.

    ಪ್ರತಿಭಟನೆಯಲ್ಲಿ ಶಾಸಕ ನಾಗೇಂದ್ರ, ಕೆ.ಪಿ.ಸಿ.ಸಿ ಕಾರ್ಯ ಅದ್ಯಕ್ಷ ಈಶ್ವರ ಖಂಡ್ರೆ ಭಾಗಿಯಾಗಿದ್ದರೂ ಈ ಕುರಿತು ಚಕಾರ ಎತ್ತಿಲ್ಲ. ಅಲ್ಲದೆ, ಶಾಸಕನೊಂದಿಗೆ ಸಾಮಾಜಿಕ ಅಂತರ ಮರೆತು ಪೋಟೋಗೆ ಪೋಸ್ ಕೊಡಲು ಜನರು ಕೂಡ ಮುಂದಾದರು.

    ಇಂದು ಪ್ರಮಾಣ ವಚನ ಸ್ವೀಕರಿಸುವ ಸಚಿವರ ಪಟ್ಟಿ ಬಿಡುಗಡೆ; ಕರ್ನಾಟಕದ ನಾಲ್ವರಿಗೆ ಮಂತ್ರಿಗಿರಿ

    ಕೇಂದ್ರ ಸಚಿವ ಸಂಪುಟ ಪುನರಚನೆಗೆ ಕ್ಷಣಗಣನೆ: ಘಟಾನುಘಟಿ ಸಚಿವರುಗಳೇ ಸಂಪುಟದಿಂದ ಔಟ್​

    ಕೇಂದ್ರ ಸಚಿವ ಸಂಪುಟ ಪುನರ್​ರಚನೆ: ಇಂದು ಪ್ರಮಾಣವಚನ ಸ್ವೀಕರಿಸುವುದು 43 ಸಚಿವರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts