More

    ಕಾಂಗ್ರೆಸ್ ‘ತೊಡಕು’ ದೋಸ್ತಿ ‘ಹೊಸ ತೊಡಕು’

    ಬೆಂಗಳೂರು: ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಗಳ ದಂಡು ಬುಧವಾರ ಒಗ್ಗಟ್ಟು ಪ್ರದರ್ಶಿಸಿತು. ವಿಜಯನಗರದಲ್ಲಿರುವ ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿ ಪೀಠಾಧಿಪತಿ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಅವರ ಆಶೀರ್ವಾದ ಪಡೆದರು.

    ಮೈಸೂರು ಭಾಗದ ಬಹಳಷ್ಟು ಲೋಕಸಭೆ ಕ್ಷೇತ್ರಗಳ ಮೇಲೆ ಒಕ್ಕಲಿಗರ ಪ್ರಾಬಲ್ಯವಿದೆ. ಇದನ್ನು ಗಮನದಲ್ಲುಟ್ಟುಕೊಂಡು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ನಾವು ಒಕ್ಕಲಿಗರಿಗೆ ಹೆಚ್ಚು ಟಿಕೆಟ್ ಕೊಟ್ಟಿದ್ದೇವೆಂಬ ಅಸ್ತ್ರ‌ ಪ್ರಯೋಗಿಸಿ ಸಮುದಾಯವನ್ನು ತಮ್ಮತ್ತ ಸೆಳೆಯುವ ತಂತ್ರ ಹೂಡಿದ್ದಾರೆ. ದೋಸ್ತಿ ನಾಯಕರು ಕೂಡ ಎರಡು ಪಕ್ಷಗಳ ಅಭ್ಯರ್ಥಿಗಳನ್ನು ಸೇರಿಸಿದರೆ ಅಷ್ಟೇ ಪ್ರಮಾಣದ ಆದ್ಯತೆ .ನೀಡಿದ್ದೇವೆ ಎನ್ನುವ ಪ್ರತ್ಯಸ್ತ್ರ ಪ್ರಯೋಗಿಸಿದ್ದಾರೆ.

    ಒಕ್ಕಲಿಗ ಸಮುದಾಯದ ಮೇಲೆ ಪ್ರಭಾವ ಬೀರಲು ಶಕ್ತವಾದ ಆದಿಚುಂಚನಗಿರಿ ಮಠಕ್ಕೆ ಒಂದಾಗಿ ಭೇಟಿ ನೀಡಿ ಒಗ್ಗಟ್ಟಿನ ಸಂದೇಶ ರವಾನಿಸಿದ್ದಾರೆ. ಕಾಂಗ್ರೆಸ್ ಪಕ್ಷದ ತಂತ್ರಕ್ಕೆ ಪ್ರತಿತಂತ್ರ ಹೆಣೆದಿದ್ದಾರೆ. ಒಕ್ಕಲಿಗರ ಭದ್ರಕೋಟೆಯಲ್ಲಿ ಮತದಾರರ ಓಲೈಕೆಗೆ ಎರಡೂ ಕಡೆಯಿಂದಲೂ ಪೈಪೋಟಿ ಭರ್ಜರಿಯಾಗಿದೆ.

    ಹೊಸ ತೊಡಕು

    ಕಾಂಗ್ರೆಸ್ ಒಕ್ಕಲಿಗ ಪ್ಲೇ ಕಾರ್ಡ್ ತೊಡಕು ನಿವಾರಣೆಗೆ ದೋಸ್ತಿ ನಾಯಕರು ಮತ್ತೊಂದು ಹೆಜ್ಜೆ ಮುಂದಿಟ್ಟಿದ್ದಾರೆ. ‘ ಹೊಸ ತೊಡಕು’ ನೆಪದಲ್ಲಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರ ಬಿಡದಿ ಸಮೀಪದ ಕೇತಗಾನಹಳ್ಳಿ ತೋಟದಲ್ಲಿ ಸ್ನೇಹಸಮ್ಮಿಲನ ಔತಣಕೂಟ‌ ಬುಧವಾರವೇ ಏರ್ಪಡಿಸಿದ್ದಾರೆ.

    ಹಾಸನ, ಮಂಡ್ಯ, ಭಾಗಶಃ ತುಮಕೂರು, ಮೈಸೂರು, ಬೆಂಗಳೂರು ಗ್ರಾಮಾಂತರ ಕ್ಷೇತ್ರಗಳಲ್ಲಿ ಯುಗಾದಿ ಹಬ್ಬದ ಮರು ದಿನ ಹೊಸ ತೊಡಕು ವಿಶೇಷವಾಗಿ ಆಚರಿಸಲಾಗುತ್ತದೆ. ಅದರದ್ದೇ ಖದರ್, ಬಾಡೂಟದ ಸೆಳೆತವಿದೆ. ಇದನ್ನು ಪರಿಗಣಿಸಿ ದೋಸ್ತಿ ನಾಯಕರು ಹೊಸ ತೊಡಕು ಮುಂದಿಟ್ಟುಕೊಂಡು ಔತಣಕೂಟದ ದಾಳ ಉರುಳಿಸಿದ್ದಾರೆ.
    ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿ ಸ್ವಾಮೀಜಿ ಆಶೀರ್ವಾದ ಪಡೆದವರಲ್ಲಿ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಮಾಜಿ ಸಿಎಂ ಮತ್ತು ಮಂಡ್ಯ ಲೋಕಸಭಾ ಅಭ್ಯರ್ಥಿ ಹೆಚ್.ಡಿ. ಕುಮಾರಸ್ವಾಮಿ, ಮಾಜಿ ಡಿಸಿಎಂ ಡಾ. ಸಿ.ಎನ್. ಅಶ್ವಥನಾರಾಯಣ್, ಕೇಂದ್ರ , ಜೆಡಿಎಸ್ ನಾಯಕ, ಮಾಜಿ ಸಚಿವ ಜಿ.ಟಿ. ದೇವೇಗೌಡ, ಬಿಜೆಪಿ ಮಾಜಿ ಸಚಿವ ಸಿ.ಟಿ. ರವಿ, ಮೊದಲ ಹಂತದ ಚುನಾವಣೆಯಲ್ಲಿ ಸ್ಪರ್ಧಿಸಿರುವ ಎನ್.ಡಿ.ಎ ಅಭ್ಯರ್ಥಿಗಳಾದ ಯದುವೀರ ಒಡೆಯರ್, ವಿ.ಸೋಮಣ್ಣ, ಶೋಭಾ‌ ಕರಂದ್ಲಾಜೆ, ಪಿ.ಸಿ.ಮೋಹನ್, ತೇಜಸ್ವಿ ಸೂರ್ಯ,‌ಡಾ.ಸಿ.ಎನ್.ಮಂಜುನಾಥ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts