More

    ಪರಮೇಶ್ವರ ಪರ ದೊಡ್ಡ ಅಲೆ

    ಕೊರಟಗೆರೆ: ಕಾಂಗ್ರೆಸ್ ಅಭ್ಯರ್ಥಿ ಡಾ.ಜಿ.ಪರಮೇಶ್ವರ ಪರವಾಗಿ ಕ್ಷೇತ್ರದಲ್ಲಿ ದೊಡ್ಡ ಅಲೆಯೇ ನಿರ್ಮಾಣವಾಗಿದ್ದು, ಬಹಿರಂಗ ಪ್ರಚಾರ ಅಂತ್ಯದ ದಿನವಾದ ಸೋಮವಾರ ಕ್ಷೇತ್ರದ ಆರು ಹೋಬಳಿ ಕೇಂದ್ರಗಳಲ್ಲಿ ಮಿಂಚಿನ ಸಂಚಾರ ನಡೆಸಿದರು.

    ನಟ ಎಸ್.ನಾರಾಯಣ ಕೂಡ ಭಾಗವಹಿಸಿ ಡಾ.ಪರಮೇಶ್ವರ ಪರವಾಗಿ ಮತಪ್ರಚಾರ ನಡೆಸಿದರು. ಪರಮೇಶ್ವರ ಅವರಿಗೆ ಮತ ನೀಡಿ. ಕ್ಷೇತ್ರದಲ್ಲಿ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಇನ್ನಷ್ಟು ಸುಧಾರಣೆ ತರಲು ಶ್ರಮಿಸಬೇಕು ಎಂದರು.
    ಡಾ.ಜಿ.ಪರಮೇಶ್ವರ ರಾಜ್ಯ ಕಂಡಂತಹ ಸಜ್ಜನ ರಾಜಕಾರಣಿ, ತಮ್ಮದೇ ಆದ ರಾಜಕೀಯ ಉತ್ತಮ ಚಾರಿತ್ರೆ ಹೊಂದಿದವರು ಕಾಂಗ್ರೆಸ್ ಪಕ್ಷದ ಪ್ರಬಲ ನಾಯಕರಾದ ಅವರ ಗುಣಕ್ಕೆ ಮನಸೋತು ಸ್ವಯಂ ಇಚ್ಚೆಯಿಂದ ಅವರ ಪರ ಪ್ರಚಾರ ಮಾಡಲು ಬಂದಿದ್ದೇನೆ ಎಂದರು.

    ಪಟ್ಟಣದ ಸಂತೆಮೈದಾನದಲ್ಲಿ ಸೋಮವಾರದ ಸಂತೆಯಲ್ಲಿ ನೆರೆದಿದ್ದ ವ್ಯಾಪಾರಸ್ಥರು ಮತ್ತು ವರ್ತಕರಿಗೆ ಡಾ.ಜಿ.ಪರಮೇಶ್ವರ ಪರವಾಗಿ ಮತ ಯಾಚಿಸಿದರು.

    ಪಪಂ ಸದಸ್ಯ ಕೆ.ಆರ್.ಓಬಳರಾಜು, ಮಾಜಿ ಉಪಾಧ್ಯಕ್ಷ ಕೆ.ವಿ.ಮಂಜುನಾಥ್, ಮಾಜಿ ಸದಸ್ಯ ಕೆ.ಬಿ.ಲೋಕೇಶ್, ಮುಖಂಡರಾದ ರಾಘವೇಂದ್ರ, ದೊಡ್ಡಯ್ಯ, ಚನ್ನಕೇಶವ ಮತ್ತಿತರರು ಇದ್ದರು.

    ಪ್ರಚಾರದ ಸಂದರ್ಭದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಡಾ.ಜಿ.ಪರಮೇಶ್ವರ, 400 ರೂಪಾಯಿ ಇದ್ದ ಗ್ಯಾಸ್ ಈಗ 1200 ರೂ.ಗೆ ಏರಿಕೆಯಾಗಿದೆ. ಪೆಟ್ರೋಲ್ ಮತ್ತು ಗ್ಯಾಸ್ ಬೆಲೆ ದುಬಾರಿಯಾಗಿದೆ. ರಸಗೊಬ್ಬರ ಬೆಲೆ ಗಗನಕ್ಕೇರಿದೆ. ಈ ರೀತಿ ಬೆಲೆ ಏರಿಕೆ ಮಾಡುವ ಸರ್ಕಾರವನ್ನು ಜನಪರ ಸರ್ಕಾರದ ಎಂದು ಕರೆಯಲು ಸಾಧ್ಯವೇ ಎಂದು ತರಾಟೆಗೆ ತೆಗೆದುಕೊಂಡರು.

    ಕಾಂಗ್ರೆಸ್ 5 ಗ್ಯಾರಂಟಿಗಳನ್ನು ರಾಜ್ಯದ ಜನರಿಗೆ ನೀಡಿದ್ದು, ಗ್ಯಾರಂಟಿ ಕಾರ್ಡ್‌ಗಳನ್ನು ಕೊರಟಗೆರೆ ಕ್ಷೇತ್ರದ ಮನೆಮನೆಗೆ ತಲುಪಿಸಿದ್ದೇವೆ. ಮಾಧ್ಯಮ ಸಮೀಕ್ಷೆಗಳ ಸೂಚನೆ ಮತ್ತು ಸದ್ಯದ ವಾತಾವರಣ ನೋಡಿದರೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದೆ, ಬಡವರಿಗೆ 10 ಕೆಜಿ ಅಕ್ಕಿ ಕೊಡುತ್ತೇವೆ, ರೈತರ ಸಾಲಮನ್ನಾ ಮಾಡುತ್ತೇವೆ ಎಂದು ಹೇಳಿದರು.

    ಪ್ರಚಾರದಲ್ಲಿ ಕೆಪಿಸಿಸಿ ಸದಸ್ಯ ಪ್ರಸನ್ನಕುಮಾರ, ಕೊರಟಗೆರೆ ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಆದ್ಯಕ್ಷ ಅರಕೆರೆ ಶಂಕರ, ಎ.ಡಿ.ಬಲರಾಮಯ್ಯ, ದಲಿತ ಮುಖಂಡ ವಾಲೆ ಚಂದ್ರಯ್ಯ, ಇದ್ದರು.

    ಪಟ್ಟಣದಲ್ಲಿ ಬೃಹತ್ ಬೈಕ್ ರ್ಯಾಲಿ: ಕೊರಟಗೆರೆಯಲ್ಲಿ 1000ಕ್ಕೂ ಹೆಚ್ಚು ಮಂದಿ ಕಾಂಗ್ರೆಸ್ ಕಾರ್ಯಕರ್ತರ ಪಡೆ ಭರ್ಜರಿ ಬೈಕ್ ರ್ಯಾಲಿ ನಡೆಸಿತು. ಪರಮೇಶ್ವಗೆ ಮತ ನೀಡುವಂತೆ ಘೋಷಣೆ ಕೂಗುತ್ತಾ ಸಾವಿರಾರು ಜನರು ಘೋಷಣೆಗಳನ್ನು ಕೂಗಿ ಸಾರ್ವಜನಿಕರ ಗಮನ ಸೆಳೆದರು.

    ಆದಿಜಾಂಬವ ಸ್ವಾಮೀಜಿ ಮತಯಾಚನೆ: ಕೊರಟಗೆರೆಯ ಗ್ರಾಮಾಂತರ ಪ್ರದೇಶದಲ್ಲಿ ಆದಿಜಾಂಬವ ಸಮಾಜದ ಕುಲ ಗುರುಗಳಾದ ಓಂಕಾರ ಮುನಿಸ್ವಾಮಿ, ತಾಪಂ ಮಾಜಿ ಸದಸ್ಯ ಮಂಜುನಾಥ್ ನೇತೃತ್ವದಲ್ಲಿ ಕಾಲನಿಗಳಿಗೆ ಭೇಟಿ ನೀಡಿ ಡಾ.ಪರಮೇಶ್ವರಗೆ ಮತ ನೀಡುವಂತೆ ಮನವಿ ಮಾಡಲಾಯಿತು.

    ಕ್ಷೇತ್ರದ 6 ಹೋಬಳಿ ವ್ಯಾಪ್ತಿಯ ಪ್ರಮಖ ಹಳ್ಳಿಗಳು, ಕಾಲನಿ ಮತ್ತು ಹಟ್ಟಿಗಳಿಗೆ ಭೇಟಿ ನೀಡಿದ ಡಾ.ಜಿ.ಪರಮೇಶ್ವರ ಅವರು ಹಲವು ಗ್ರಾಮಗಳಲ್ಲಿನ ಮುಖಂಡರೊಂದಿಗೆ ಮಾತುಕತೆ ನಡೆಸಿ ನಡೆಸಿ, ಅಧಿಕಾರ ಅವಧಿಯಲ್ಲಿ ಕೈಗೊಂಡ ಕೆಲಸಗಳಿಗೆ ಮನ್ನಣೆ ನೀಡಿ ಎಂದು ಮನವಿ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts