More

    ಕಾಂಗ್ರೆಸ್‌ಗೆ ಒಲಿಯುತ್ತಾ ಹುಲಿಹೈದರ ಗ್ರಾಪಂ ?

    ಕನಕಗಿರಿ: ತೀವ್ರ ಕುತೂಹಲ ಮೂಡಿಸಿರುವ ಹಾಗೂ ಹಲವು ವರ್ಷಗಳ ಬಳಿಕ ಮೊದಲ ಅವಧಿಯಲ್ಲಿ ಬಿಜೆಪಿ ಪಾಲಾಗಿದ್ದ ತಾಲೂಕಿನ ಹುಲಿಹೈದರ ಗ್ರಾಪಂನ ಅಧಿಕಾರವು, ಎರಡನೇ ಅವಧಿಗೆ ಕಾಂಗ್ರೆಸ್ ಪಾಲಾಗುವ ಸಾಧ್ಯತೆಗಳು ಹೆಚ್ಚಾಗಿವೆ.

    23 ಸದಸ್ಯ ಬಲದ ಗ್ರಾಪಂನಲ್ಲಿ ಬಿಜೆಪಿಯ ಬೆಂಬಲಿತ 14 ಸದಸ್ಯರು ಹಾಗೂ ಕಾಂಗ್ರೇಸ್ ಬೆಂಬಲಿತ 9 ಸದಸ್ಯರಿದ್ದರು. ಮೊದಲ ಅವಧಿಗೆ ಎಸ್ಸಿ ಮಹಿಳೆ ಅಧ್ಯಕ್ಷೆ, ಉಪಾಧ್ಯಕ್ಷ ಸ್ಥಾನವು ಸಾಮಾನ್ಯಕ್ಕೆ ಮೀಸಲಿದ್ದಾಗ ಅವಿರೋಧವಾಗಿ ಸದಸ್ಯೆಯಾಗಿದ್ದ ಹನುಮನಾಳ ಗ್ರಾಮದ ಬಿಜೆಪಿ ಬೆಂಬಲಿತ ಏಕೈಕ ಎಸ್ಸಿ ಮಹಿಳಾ ಸದಸ್ಯೆ ಮಾಳಮ್ಮ ಅಧ್ಯಕ್ಷೆಯಾಗಿ, ಕಾಂಗ್ರೆಸ್‌ನಿಂದ ಬಿಜೆಪಿಗೆ ಸೇರಿದ್ದ ಶಿವಶಂಕ್ರಪ್ಪ ಚನ್ನದಾಸರ ಉಪಾಧ್ಯಕ್ಷರಾಗಿ ಆಯ್ಕೆಗೊಂಡಿದ್ದರು. ಈ ಮೂಲಕ ಬಹು ವರ್ಷಗಳ ಬಳಿಕ ಕಾಂಗ್ರೆಸ್‌ನ್ನು ಅಧಿಕಾರದಿಂದ ದೂರ ಇಟ್ಟಿದ್ದರು.

    ಶಿವಶಂಕ್ರಪ್ಪ ಚನ್ನದಾಸರ ಉಪಾಧ್ಯಕ್ಷರಾಗಿದ್ದರಿಂದ ಜಗದೀಶ ಗದ್ದಿ ಮುನಿಸಿಕೊಂಡು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡಿದ್ದು, ಆಗಿನಿಂದಲೇ ಬಿಜೆಪಿ ಸದಸ್ಯರ ಸಂಖ್ಯೆ ಕುಸಿತ ಆರಂಭವಾಗಿತ್ತು. ಇತ್ತೀಚಿನ ರಾಜಕೀಯ ಬೆಳವಣಿಗೆಯಲ್ಲಿ ಬಿಜೆಪಿ ಬೆಂಬಲಿತ ಇನ್ನೂ ಮೂವರು ಸದಸ್ಯರು ಕಾಂಗ್ರೆಸ್ ಕಡೆಗೆ ವಾಲಿದ್ದು, ಈ ಮೂವರು ಸದಸ್ಯರು ಪ್ರವಾಸಕ್ಕೆ ತೆರಳಿದ್ದಾರೆ ಎನ್ನಲಾಗಿದೆ.

    ಇದನ್ನೂ ಓದಿ: ಜೋಗದ ಸೌಂದರ್ಯ ಸವಿದ ಪ್ರವಾಸಿಗರ ದಂಡು

    ಇದರಿಂದ ಕಾಂಗ್ರೆಸ್ ಸದಸ್ಯರ ಸಂಖ್ಯೆ 13ಕ್ಕೆ ಏರಿಕೆಯಾಗಲಿದ್ದು, ಬಿಜೆಪಿ ಸಂಖ್ಯೆ 10ಕ್ಕೆ ಕುಸಿದಂತಾಗಿದೆ. ಇದರಿಂದ ಮೊದಲ ಅವಧಿಯಲ್ಲಿ ಅಧಿಕಾರದಿಂದ ವಂಚಿತವಾಗಿದ್ದ ಕಾಂಗ್ರೆಸ್ ಮುಖಂಡರಲ್ಲಿ ಎರಡನೇ ಅವಧಿಯಲ್ಲಿ ಮತ್ತೇ ಕಾಂಗ್ರೆಸ್ ಬಾವುಟ ಹಾರಿಸುವ ಭರವಸೆ ಹೊಂದಿದ್ದಾರೆ. ಇನ್ನುಳಿದ ಎರಡೂವರೆ ವರ್ಷದ ಅಧಿಕಾರಾವಧಿಯಲ್ಲಿ ಇಬ್ಬರು ಸದಸ್ಯೆಯರಿಗೆ ತಲಾ 15 ತಿಂಗಳು ಅಧಿಕಾರ ಹಂಚಿಕೆ ಮಾಡುವ ಯೋಚನೆಯಲ್ಲಿದ್ದಾರೆ.

    ಇತ್ತ ಬಿಜೆಪಿಯ ಮುಖಂಡರು ಬಿಜೆಪಿಯಿಂದ ಆಯ್ಕೆಯಾದವರು ಕಾಂಗ್ರೆಸ್‌ಗೆ ಬೆಂಬಲಿಸದೇ ಬಿಜೆಪಿಯವರನ್ನೇ ಬೆಂಬಲಿಸುತ್ತಾರೆ ಎನ್ನುವ ವಿಶ್ವಾಸದಲ್ಲಿದ್ದಾರೆ. ಜು.19ಕ್ಕೆ ಚುನಾವಣೆ ನಡೆಯಲಿದ್ದು, ಯಾರು ಅಧಿಕಾರ ಹಿಡಿಯಲಿದ್ದಾರೆ ಎನ್ನುವುದು ತಿಳಿಯಲಿದೆ.

    ಕಾಂಗ್ರೆಸ್ ಕಾರ್ ಹತ್ತಿದ ಹಾಲಿ ಅಧ್ಯಕ್ಷೆ

    ಹುಲಿಹೈದರ ಗ್ರಾಪಂ ವ್ಯಾಪ್ತಿಯ ಹನುಮನಾಳ ಗ್ರಾಮದಿಂದ ಎಸ್ಸಿ ಮಹಿಳಾ ಮೀಸಲು ಸ್ಥಾನಕ್ಕೆ ಬಿಜೆಪಿ ಬೆಂಬಲಿತೆಯಾಗಿ ಅವಿರೋಧವಾಗಿ ಆಯ್ಕೆಯಾಗಿದ್ದ ಉಡುಚಮ್ಮಳಿಗೆ ಅನಾಯಾಸವಾಗಿ ಅಧ್ಯಕ್ಷೆ ಸ್ಥಾನವು ಒಲಿದು ಬಂದಿತ್ತು. ಎರಡೂವರೆ ವರ್ಷ ಅಧಿಕಾರವನ್ನು ಅನುಭವಿಸಿರುವ ಅವರು, ಇದೀಗ ಕಾಂಗ್ರೆಸ್ ಬೆಂಬಲಿಸಲು ಮುಂದಾಗಿದ್ದು, ಪ್ರವಾಸಕ್ಕೆ ಬುಕ್ ಮಾಡಿದ್ದ ಕಾರ್ ಹತ್ತಿ ದೇವಸ್ಥಾನಗಳಿಗೆ ಓಡಾಡುತ್ತಿದ್ದಾರೆ. ಇನ್ನು ಮೊದಲ ಬಾರಿ ಸಾಮಾನ್ಯಕ್ಕೆ ಮೀಸಲಾಗಿದ್ದ ಉಪಾಧ್ಯಕ್ಷ ಸ್ಥಾನದಿಂದ ವಂಚಿತರಾಗಿದ್ದ ಜಗದೀಶ ಗದ್ದಿ ಕಾಂಗ್ರೆಸ್‌ಗೆ ಬೆಂಬಲಿಸಿದ್ದರಿಂದ ಉಪಾಧ್ಯಕ್ಷರಾಗುವ ಸಾಧ್ಯತೆಗಳಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts