More

    ಕರಾವಳಿಯಲ್ಲಿ ಗೆಲುವಿಗೆ ಕಾಂಗ್ರೆಸ್ ಸಂಘಟಿಸಿ -ಸಚಿವ ಬೈರತಿ ಸುರೇಶ್ ಸೂಚನೆ


    ಮಂಗಳೂರು : ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಶುಕ್ರವಾರ ನಗರದ ಮಲ್ಲಿಕಟ್ಟೆಯ ಕಾಂಗ್ರೆಸ್ ಭವನಕ್ಕೆ ಭೇಟಿ ನೀಡಿದರು.
    ಈ ಸಂದರ್ಭ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅವರು ಕಾಂಗ್ರೆಸ್ ಪಕ್ಷ ನುಡಿದಂತೆ ನಡೆಯುವ ಸರ್ಕಾರ ನೀಡಿದ್ದು, ಜನಪರವಾದ ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ಪಕ್ಷವನ್ನು ಕರಾವಳಿ ಪ್ರದೇಶದಲ್ಲೂ ಸಂಘಟಿಸಿ ಮುಂಬರುವ ಚುನಾವಣೆಗಳನ್ನು ಗೆದ್ದು ಜನರ ಸೇವೆ ಮಾಡುವ ಅವಕಾಶ ಪಡೆದುಕೊಳ್ಳಬೇಕು ಎಂದರು.
    ಮಾಜಿ ಸಚಿವ ಬಿ.ರಮಾನಾಥ ರೈ, ಮಾಜಿ ಎಂಎಲ್‌ಸಿ ಐವನ್ ಡಿಸೋಜಾ, ಜಿ.ಕೃಷ್ಣಪ್ಪ, ರಕ್ಷಿತ್ ಶಿವರಾಂ, ಪದ್ಮರಾಜ್.ಆರ್, ಶಶಿಧರ್ ಹೆಗ್ಡೆ, ಸುರೇಶ್ ಬಳ್ಳಾಲ್, ಪ್ರವೀಣ್ಚಂದ್ರ ಆಳ್ವ, ಶಾಲೆಟ್ ಪಿಂಟೊ, ಸುರೇಂದ್ರ ಕಂಬಳಿ, ಬೇಬಿ ಕುಂದರ್, ವಿಶ್ವಾಸ್‌ಕುಮಾರ್ ದಾಸ್ ಉಪಸ್ಥಿತರಿದ್ದರು. ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಸದಾಶಿವ ಉಳ್ಳಾಲ್ ಸ್ವಾಗತಿಸಿ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts