More

    ಮಧ್ಯಪ್ರದೇಶ “ಕೈ”ಪ್ರಣಾಳಿಕೆ: ಮಹಿಳೆಯರಿಗೆ ಮಾಸಿಕ 1500ರೂ., ಎಲ್ಲರಿಗೂ 25 ರೂ.ಲಕ್ಷ ಆರೋಗ್ಯ ವಿಮೆ

    ಭೋಪಾಲ್: ಮಧ್ಯಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಕಮಲ್ ನಾಥ್ ಅವರು ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಗೆ ಪಕ್ಷದ ಪ್ರಣಾಳಿಕೆಯನ್ನು ಮಂಗಳವಾರ ಬಿಡುಗಡೆ ಮಾಡಿದ್ದು, ರಾಜ್ಯದ ಎಲ್ಲಾ ನಾಗರಿಕರಿಗೆ 25 ಲಕ್ಷ ರೂ.ಆರೋಗ್ಯ ವಿಮೆ, ಒಬಿಸಿಗಳಿಗೆ 27 ರಷ್ಟು ಮೀಸಲಾತಿ ಸೇರಿದಂತೆ ಹಲವಾರು ಭರವಸೆಗಳನ್ನು ನೀಡಿದ್ದಾರೆ.

    ಇದನ್ನೂ ಓದಿ: ರಾಷ್ಟ್ರ ಪ್ರಶಸ್ತಿ ಸ್ವೀಕಾರಕ್ಕೂ ಮುನ್ನ “ತಗ್ಗೇದೆ ಲೇ” ಎಂದ ಅಲ್ಲುಅರ್ಜುನ್

    ಪ್ರತಿಪಕ್ಷ ಕಾಂಗ್ರೆಸ್ ತನ್ನ 106 ಪುಟಗಳ ಪ್ರಣಾಳಿಕೆಯಲ್ಲಿ 59 ಭರವಸೆಗಳನ್ನು ಪಟ್ಟಿ ಮಾಡಿದ್ದು, ರೈತರು, ಮಹಿಳೆಯರು, ಸರ್ಕಾರಿ ನೌಕರರು ಸೇರಿದಂತೆ ಸಮಾಜದ ಎಲ್ಲಾ ವರ್ಗಗಳಿಗೆ ಭರವಸೆಗಳ ಮಹಾಪೂರ ಹರಿಸಿದ್ದಾರೆ.

    ‘ನಾವು 25 ಲಕ್ಷ ರೂ. ಆರೋಗ್ಯ ವಿಮೆಯನ್ನು ಒದಗಿಸುತ್ತೇವೆ, ಇದು 10 ಲಕ್ಷ ರೂ.ನ ಆಕಸ್ಮಿಕ ರಕ್ಷಣೆಯನ್ನು ಹೊಂದಿದೆ, ಇದು ರಾಜ್ಯದ ಪ್ರತಿಯೊಬ್ಬ ನಾಗರಿಕನಿಗೂ ಅನ್ವಯವಾಗುತ್ತದೆ ಎಂದು ಕಮಲ್ ನಾಥ್ ಪ್ರಣಾಳಿಕೆಯನ್ನು ಬಿಡುಗಡೆ ತಿಳಿಸಿದರು.

    ಇನ್ನು 2 ಲಕ್ಷ ರೂ.ವರೆಗಿನ ಕೃಷಿ ಸಾಲ ಮನ್ನಾ ಮತ್ತು ಮಹಿಳೆಯರಿಗೆ ತಿಂಗಳಿಗೆ 1,500 ಸಹಾಯ ಧನವನ್ನು ಘೋಷಿಸಿದರು. 500ಕ್ಕೆ ಎಲ್‌ಪಿಜಿ ಸಿಲಿಂಡರ್‌, ಶಾಲಾ ಶಿಕ್ಷಣವನ್ನು ಉಚಿತವಾಗಿ ನೀಡಲಾಗುವುದು. ಹಳೆಯ ಪಿಂಚಣಿ ಯೋಜನೆ ಜಾರಿ ಮತ್ತು ಯುವಕರಿಗೆ ಎರಡು ವರ್ಷಗಳವರೆಗೆ ತಿಂಗಳಿಗೆ 1,500 ರಿಂದ 3,000 ವರೆಗೆ ನಿರುದ್ಯೋಗ ಭತ್ಯೆ ನೀಡುವುದಾಗಿ ಭರವಸೆ ನೀಡಿದರು.
    230 ಸದಸ್ಯ ಬಲದ ರಾಜ್ಯ ವಿಧಾನಸಭೆಗೆ ನವೆಂಬರ್ 17 ರಂದು ಚುನಾವಣೆ ನಿಗದಿಯಾಗಿದೆ.

    ಐಟಿ ದಾಳಿ ಬಗ್ಗೆ ಪ್ರಚಾರ, ಲೋಕಾಯುಕ್ತ ಮೆಟ್ಟಿಲೇರಿದ ಕಾಂಗ್ರೆಸ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts