More

    ರಾಹುಲ್​ ಗಾಂಧಿ ಭೇಟಿ ನೀಡಿದ ಬೆನ್ನಲ್ಲೇ ಪುದುಚೇರಿ ಕಾಂಗ್ರೆಸ್​ ಸರ್ಕಾರ ಪತನ!

    ಪುದುಚೇರಿ: ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಭೇಟಿ ನೀಡಿದ ಐದು ದಿನಗಳ ಬೆನ್ನಲ್ಲೇ ಪುದುಚೇರಿ ಕಾಂಗ್ರೆಸ್​ ಸರ್ಕಾರ ಅಧಿಕಾರ ಕಳೆದುಕೊಂಡಿದ್ದು, ಬಹುಮತ ಸಾಬೀತು ಮಾಡಲಾಗದೇ ವಿ. ನಾರಾಯಣಸಾಮಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

    ಭಾನುವಾರ ಇಬ್ಬರು​ ಶಾಸಕರು ಕಾಂಗ್ರೆಸ್​ನಿಂದ ಹೊರ ನಡೆದರು. ಇದರಿಂದಾಗಿ ಕಾಂಗ್ರೆಸ್​ ಪಕ್ಷದ ಬಹುಮತ 12ಕ್ಕೆ ಕುಸಿಯಿತು. ಬಹುಮತ ಸಾಬೀತಿಗೆ 14 ಸ್ಥಾನಗಳ ಅವಶ್ಯಕತೆ ಇದ್ದುದ್ದರಿಂದ ಇಂದು ನಡೆದ ವಿಶ್ವಾಸ ಮತಯಾಚನೆಯಲ್ಲಿ ಬಹುಮತ ಸಾಬೀತು ಮಾಡುವಲ್ಲಿ ನಾರಾಯಣಸಾಮಿ ವಿಫಲರಾದರು. ಬಳಿಕ ತಮ್ಮ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದರು.

    ಇದಕ್ಕೂ ಮುನ್ನ ಮಾತನಾಡಿದ ನಾರಾಯಣಸಾಮಿ ಶಾಸಕರು ಪಕ್ಷ ನಿಷ್ಠೆಯನ್ನು ತೋರಬೇಕು. ರಾಜೀನಾಮೆ ನೀಡಿದ ಶಾಸಕರು ಜನರನ್ನು ಎದುರಿಸಲು ಸಾಧ್ಯವಿಲ್ಲ. ಇನ್ನು ಮುಂದೆ ಅವರನ್ನು ಅವಕಾಶವಾದಿಗಳು ಎಂದು ಕರೆಯುತ್ತಾರೆ ಆಕ್ರೋಶ ಹೊರಹಾಕಿದ್ದರು.

    ಮಾಜಿ ಲೆಫ್ಟಿನೆಂಟ್​ ಗವರ್ನರ್​ ಕಿರಣ್​ ಬೇಡಿ ವಿರುದ್ಧ ಕಿಡಿಕಾರಿದ ನಾರಾಯಣಸಾಮಿ, ಪ್ರತಿಪಕ್ಷಗಳೊಂದಿಗೆ ಒಡನಾಟ ಹೊಂದಿರುವ ಕಿರಣ್​ ಬೇಡಿ ಅವರು ಸರ್ಕಾರವನ್ನು ಉರುಳಿಸಲು ಪ್ರತಿಪಕ್ಷಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆಂದು ಆರೋಪಿಸಿದ್ದರು.

    ಭಾನುವಾರ ಆಡಳಿತಾರೂಢ ಒಕ್ಕೂಟವು ಇಬ್ಬರು ಶಾಸಕರುಗಳನ್ನ ಕಳೆದುಕೊಂಡಿರು. ಕಾಂಗ್ರೆಸ್​ ಶಾಸಕ ಲಕ್ಷ್ಮಿನಾರಾಯಣನ್​ ಮತ್ತು ಮೈತ್ರಿ ಪಕ್ಷ ಡಿಎಂಕೆಯ ಕೆ. ವೆಂಕಟೇಶನ್​ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಪಾರ್ಟಿಯಲ್ಲಿ ನನ್ನನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲವೆಂಬ ಬೇಸರದಿಂದ ರಾಜೀನಾಮೆ ನೀಡುತ್ತಿರುವುದಾಗ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಲಕ್ಷ್ಮೀನಾರಾಯಣ್​ ಆರೋಪಿಸಿ ರಾಜೀನಾಮೆ ನೀಡಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts