More

    ಬಿಜೆಪಿ ಸರ್ಕಾರ ಅಭಿವೃದ್ಧಿ ಕೆಲಸ ಮಾಡದೆ ದುರಾಸೆ, ಲೂಟಿಯಲ್ಲಿ ತೊಡಗಿದೆ: ಪ್ರಿಯಾಂಕಾ ಗಾಂಧಿ

    ಮಂಡ್ಯ: ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಮಂಡ್ಯ ಪಟ್ಟಣಕ್ಕೆ ಇಂದು ಬಹಿರಂಗ ಸಭೆಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಆಗಮಿಸಿದ್ದಾರೆ. ಕಳೆದ 3 ವರ್ಷದಿಂದ ಬಿಜೆಪಿ ಸರ್ಕಾರಕ್ಕೆ 40 ಪರ್ಸೆಂಟ್ ಸರ್ಕಾರ ಎಂಬ ಕಳಂಕ ಇದೆ. ನಮ್ಮ ಜನರನ್ನ ಈ ಸರ್ಕಾರ ಲೂಟಿ ಮಾಡುತ್ತಿದೆ. ಈ ಸರ್ಕಾರ ನ್ಯಾಯದಿಂದ ರಚನೆ ಆಗಲಿಲ್ಲ. ಶಾಸಕರನ್ನ ಖರೀದಿಸಿ ರಚನೆಯಾದ ಸರ್ಕಾರ. ಹೀಗಾಗಿ ಇದು ಲೂಟಿ ಮಾಡ್ತಿದೆ ಎಂದು ಕಾಂಗ್ರೆಸ್​​ ನಾಯಕಿ ಪ್ರಿಯಾಂಕಾ ಗಾಂಧಿ ಬಿಜೆಪಿ ಸರ್ಕಾರ ವಿರುದ್ಧವಾಗಿ ಲೇವಡಿ ಮಾಡಿದರು.

    ಮಂಡ್ಯದ ಕಾಂಗ್ರೆಸ್​​​ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಎಲ್ಲರಿಗೂ ನಮಸ್ಕಾರ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಿಯಾಂಕ ಗಾಂಧಿ, ರಮ್ಯಾ ಅವರನ್ನ ಬಹಳ ದಿನಗಳ ನಂತರ ನೋಡಿ ಖುಷಿ ಆಗ್ತಿದೆ.ನಾನು ಪ್ರಯಾಣ ಮಾಡುತ್ತಿದ್ದ ಹೆಲಿಕಾಪ್ಟರ್ ಟೇಕಾಫ್ ಆಗೋದು ತಡವಾಯ್ತು. ಹೀಗಾಗಿ ತಡವಾಗಿ ಬಂದಿದ್ದಕ್ಕೆ ಕ್ಷಮೆಯಾಚಿಸ್ತೀನಿ. ಸಕ್ಕರೆನಾಡು ಮಂಡ್ಯಕ್ಕೆ ಮೊದಲ ಬಾರಿಗೆ ಬರ್ತಿರೋದು ಖುಷಿ ಆಗ್ತಿದೆ ಎಂದಿದ್ದಾರೆ.

    ಇದನ್ನೂ ಓದಿ: ಪಾಕ್​​ನಲ್ಲಿ ಲೈಂಗಿಕ ಸಾಮರ್ಥ್ಯ ಹೆಚ್ಚಳಕ್ಕೆ ಹಲ್ಲಿ ತೈಲ ಬಳಕೆ!

    ಕರ್ನಾಟಕದ ರೈತರು ತುಂಬಾ ಕಷ್ಟ ಪಡುತ್ತಿದ್ದಾರೆ. ನಮ್ಮ ಶ್ರಮದಿಂದ ಮಾತ್ರ ನಾಡು ಕಟ್ಟಲು ಸಾಧ್ಯ.ಇಡೀ ದೇಶದಲ್ಲಿ ಕರ್ನಾಟಕದ ಪ್ರಸಿದ್ಧಿಗೆ ನಿಮ್ಮ ಶ್ರಮ ಕಾರಣ. ಬಸವಣ್ಣ, ನಾರಾಯಣ ಗುರು ಅವರನ್ನ ಸ್ಮರಿಸಿದ ಪ್ರಿಯಾಂಕ.ಅವರ ಸಂಸ್ಕೃತಿ ಪಾಲನೆ ಆಗ್ತಿರೋದಕ್ಕೆ ಕರ್ನಾಟಕ ಪ್ರಸಿದ್ಧಿಯಾಗಿದೆ ಎಂದು ಮಂಡ್ಯವನ್ನು ಹಾಡಿ ಹೊಗಳಿದ್ದಾರೆ.

    ಇದನ್ನೂ ಓದಿ: Congress Manifesto 2023: ಬಿಜೆಪಿ ಜಾರಿಗೆ ತಂದ ಕಾನೂನುಗಳು ಒಂದು ವರ್ಷದೊಳಗೆ ರದ್ದು , ಭಜರಂಗದಳ ನಿಷೇಧ!

    ಕರ್ನಾಟಕದ ಜನ ಬಹಳ ವಿದ್ಯಾವಂತರು, ಶ್ರಮಜೀವಿಗಳು. ಐದು ವರ್ಷದಿಂದ ಇಲ್ಲಿನ ಜನ ಸಂಕಷ್ಟದಲ್ಲಿದ್ದಾರೆ. ಕಳೆದ 3 ವರ್ಷದಿಂದ ಇರುವ ಸರ್ಕಾರಕ್ಕೆ 40 ಪರ್ಸೆಂಟ್ ಸರ್ಕಾರ ಎಂಬ ಕಳಂಕ ಇದೆ. ನಮ್ಮ ಜನರನ್ನ ಈ ಸರ್ಕಾರ ಲೂಟಿ ಮಾಡುತ್ತಿದೆ. ಈ ಸರ್ಕಾರ ನ್ಯಾಯದಿಂದ ರಚನೆ ಆಗಲಿಲ್ಲ. ಶಾಸಕರನ್ನ ಖರೀದಿಸಿ ರಚನೆಯಾದ ಸರ್ಕಾರ. ಹೀಗಾಗಿ ಇದು ಲೂಟಿ ಮಾಡ್ತಿದೆ. ಈ ಲೂಟಿಯಿಂದ ನಿಮ್ಮ ಮೇಲೆ ದುಷ್ಪರಿಣಾಮ ಬೀರುತ್ತದೆ.ಸರ್ಕಾರ ಬಂದಾಗಿನಿಂದ ಲೂಟಿ, ದುರಾಸೆಯಲ್ಲೆ ತೊಡಗಿದೆ. ಈ ಸರ್ಕಾರ ಅಭಿವೃದ್ಧಿ ಕೆಲಸ ಮಾಡದೆ ಲೂಟಿಯಲ್ಲಿ ತೊಡಗಿದೆ.ಎಲ್ಲಾ ಬೆಲೆ ಗಗನಕ್ಕೇರಿದೆ. ನೀವು ಸಂಪಾದಿಸಿದ ಹಣವೆಲ್ಲವೂ ಪೋಲಾಗುತ್ತಿದೆ ಎಂದು ಆಢಳಿತ ಸರ್ಕಾ ಬಿಜೆಪಿ ವಿರುದ್ಧವಾಗಿ ವಾಗ್ದಾಳಿ ಮಾಡಿದ್ದಾರೆ.

    ಬೆಲೆ ಏರಿಕೆ ಮಾಡಿ ಜನರನ್ನ ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ. ಮಪ್ರತಿಯೊಂದರಲ್ಲೂ ಹಗರಣ ಮಾಡುತ್ತಾ ಲೂಟಿ ಮಾಡ ತೊಡಗಿದೆ. PSI ನೇಮಕಾತಿ ಹಗರಣ. ಗುತ್ತಿಗೆದಾರರ ಸಂಘ ಪ್ರಧಾನಿಗೆ ಪತ್ರ ಬರೆಯುತ್ತಾರೆ.ಅದಕ್ಕೆ ಪ್ರಧಾನಿ ಉತ್ತರ ಕೊಡಲಿಲ್ಲ ಎಂದು ಆರೋಪ ಮಾಡಿದ್ದಾರೆ.

    ಇದನ್ನೂ ಓದಿ: VIDEO| RCB vs LSG; ರೋಚಕ ಪಂದ್ಯ ಮುಗಿದ ಬಳಿಕ ಗಂಭೀರ್​​ ಮಾಡಿದ್ದಾದರೂ ಏನು?

    ಕರ್ನಾಟಕದ ರೈತರ ರಕ್ತ ಹೀರುತ್ತಿದೆ ಸರ್ಕಾರ:  ಓರ್ವ ಬಿಜೆಪಿ ಶಾಸಕನ ಮನೆಯಲ್ಲೇ ಕೋಟಿ ಹಣ ಸಿಗುತ್ತೆ. ಆತನ ಮೇಲೆ ಯಾವುದೇ ತನಿಖೆ ಮಾಡಲಿಲ್ಲ. ನಿರುದ್ಯೋಗಿಗಳಿಗೆ ಉದ್ಯೋಗ ಭತ್ಯೆ ಮಾಡಲಿಲ್ಲ. ಎಲ್ಲಾ ಹುದ್ದೆಗಳಿಗೂ ರೇಟ್ ಫಿಕ್ಸ್ ಮಾಡಿದ್ದಾರೆ.ಲಂಚ ಕೊಡದೇ ಯಾವುದೇ ಹುದ್ದೆ ಸಿಗೋದಿಲ್ಲ. ರೈತ ರಸಗೊಬ್ಬರ ಖರೀದಿಗೂ ಲಂಚ.ರೈತರ ನಾಡು ಈ ಕರ್ನಾಟಕ.ಈ ಕರ್ನಾಟಕದ ರೈತರ ರಕ್ತ ಹೀರುತ್ತಿದೆ ಸರ್ಕಾರ. ರೈತರಿಂದಲೂ GST ವಸೂಲಿ ಮಾಡುತ್ತಿದೆ. ರಸಗೊಬ್ಬರ ದರ ಕೂಡ ದುಬಾರಿಯಾಗಿದೆ ಎಂದು ಕಿಡಿಕಾರಿದ್ದಾರೆ.

    ರೈತರಿಗೆ ಕೊಟ್ಟ ಭರವಸೆ ಒಂದೂ ಈಡೇರಿಲ್ಲ. ಕೊಟ್ಟ ಭರವಸೆಗಿಂತ ದರ ಹೆಚ್ಚಳ ದುಬಾರಿಯಾಗಿದೆ. ರೈತರ ಬೆಳೆಗೆ ಬೆಂಬಲ ಬೆಲೆ ಇಲ್ಲ. ಸಕ್ಕರೆ ಕಾರ್ಖಾನೆಯನ್ನ ಖಾಸಗೀಕರಣ ಮಾಡಲು ಯತ್ನ. ಕಾಂಗ್ರೆಸ್‌ ಸರ್ಕಾರ ಇದೆಲ್ಲದಕ್ಕೂ ಕಡಿವಾಣ ಹಾಕುತ್ತೆದೆ ಎನ್ನುವ ಭರವಸೆ ನೀಡಿದ್ದಾರೆ.

    ಪ್ರೈವೇಟ್ ಸೆಕ್ಟರ್ ಗಳನ್ನ ಪ್ರಧಾನಿ ತಮ್ಮ ಆಪ್ತರಿಗೆ ಮಾರಿದ್ದಾರೆ: ಭ್ರಷ್ಟಾಚಾರ ತಡೆದು ರೈತರು, ಸರ್ವ ಜರ ಹಿತ ಕಾಯಲಿದೆ. ಈ ಹಿಂದೆ ಎಲ್ಲಾ ವರ್ಗದಲ್ಲೂ ಕರ್ನಾಟಕ ಮೊದಲಿತ್ತು. ಸೂಪರ್ ಮಾಡಲ್ ಸ್ಟೇಟ್ ಅಂತಾ ಕರ್ನಾಟಕವನ್ನ ಕೂಗುತ್ತಿದ್ದರು. ಐಟಿ, ಉದ್ಯೋಗ ಸೃಷ್ಟಿಯಲ್ಲಿ ನಂಬರ್ ಒನ್ ಇತ್ತು.ಈ ಸರ್ಕಾರ ಬಂದು ಎಲ್ಲವನ್ನೂ ಕಡೆಗಣಿಸಿದೆ. ಸಾಕಷ್ಟು ಕಂಪನಿಗಳು ಕರ್ನಾಟಕ ಬಿಟ್ಟು ಹೋಗಿವೆ, ಮುಚ್ಚಿ ಹೋಗಿವೆ.ದೊಡ್ಡ ದೊಡ್ಡ ಪ್ರೈವೇಟ್ ಸೆಕ್ಟರ್ ಗಳನ್ನ ಪ್ರಧಾನಿ ತಮ್ಮ ಆಪ್ತರಿಗೆ ಮಾರಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

    ನಾವು 100 ಪರ್ಸೆಂಟ್ ಭರವಸೆಯನ್ನ ಹೊತ್ತು ತಂದಿದ್ದೇವೆ: ಕರ್ನಾಟಕದ ನಂದಿಯನ್ನ ಕಷ್ಟಪಟ್ಟು ಕಟ್ಟಿದ್ರಿ. ಆದರೆ ಸುಳ್ಳು ಹೇಳಿ ಗುಜರಾತ್ ಗೆ ವಿಲೀನ ಮಾಡಲು ಯತ್ನ ನಡೆದಿದೆ.ಹಿಂಗಾದ್ರೆ ಕರ್ನಾಟಕದ ಅಭಿವೃದ್ಧಿ ಹೇಗೆ ಸಾಧ್ಯ.ಇದು ನಿಮ್ಮ, ನಿಮ್ಮ ಮಕ್ಕಳ ಭವಿಷ್ಯದ ಪ್ರಶ್ನೆ.ಕಾಂಗ್ರೆಸ್‌ ಅನ್ನಭಾಗ್ಯ, ಕ್ಷೀರಭಾಗ್ಯ, ಇಂದಿರಾ ಕ್ಯಾಂಟೀನ್ ಸೇರಿ ಎಲ್ಲವನ್ನೂ ಕೊಟ್ಟಿತ್ತು. ನಾವು 100 ಪರ್ಸೆಂಟ್ ಭರವಸೆಯನ್ನ ಹೊತ್ತು ತಂದಿದ್ದೇವೆ.ಸಾಕಷ್ಟು ಭರವಸಗಳನ್ನ ಈಗಾಗಲೇ ಘೋಷಿಸಿದ್ದೇವೆ. ನಮ್ಮ ಸರ್ಕಾರ ಕೊಟ್ಟ ಎಲ್ಲಾ ಭರವಸೆ ಈಡೇರಿಸುತ್ತೆ. ನಂದಿನಿಯನ್ನ ಕರ್ನಾಟಕದಲ್ಲೇ ಉಳಿಸುತ್ತೇವೆ.ಕೆಎಂಎಫ್ ಅನ್ನು ಸದೃಢಗೊಳಿಸುತ್ತೇವೆ ಎಂದು ಮತದಾರರಿ ಕೆಲವು ಭರವಸೆ ನೀಡಿದ್ದಾರೆ.

    ಅಂಗನವಾಡಿ ಕಾರ್ಯಕರ್ತೆಯರಿಗೆ ನಿವೃತ್ತಿ ವೇತನ ಘೋಷಣೆ.ದೊಡ್ಡ ಅಂಗವಾಡಿಗಳಿಗೆ 3 ಲಕ್ಷ.ಸಣ್ಣಪುಟ್ಟ ಅಂಗನವಾಡಿ ಕಾರ್ಯಕರ್ತೆಯರಿಗೆ 2 ಲಕ್ಷ.ರೈತರಿಗಾಗಿ ಪ್ರತ್ಯೇಕ ಸಹಕಾರಿ ಸಂಘ ಸ್ಥಾಪಿಸಿ 500 ಕೋಟಿ ಮೀಸಲು. ರಾಜ್ಯದ ನೀರಾವರಿ ಯೋಜನೆಗಳ ಅನುಷ್ಠಾನ.ಒಂದು ಲೀಟರ್ ಹಾಲಿಗೆ 7 ರೂ. ಪ್ರೋತ್ಸಾಹ ಧನ.ಹಾಲು ಉತ್ಪಾದಕರಿಗೆ 50 ಸಾವಿರ ಸಬ್ಸಿಡಿ ಸಾಲ.ಬಡವರು, ಪೌರಕಾರ್ಮಿಕರಿಗೆ 3 ಸಾವಿರ ಕೋಟಿ ಅನುದಾನ ಮೀಸಲು ಎಂದು ಸಾಲು ಸಾಲು ಭರವಸೆಗಳನ್ನು ನೀಡಿದ್ದಾರೆ.

    ಮೈದಾನದಲ್ಲೇ ಜಗಳಕ್ಕಿಳಿದ ಗಂಭೀರ್​-ಕೊಹ್ಲಿ; ವಾಗ್ವಾದಕ್ಕೆ ಮೂಲ ಕಾರಣವೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts