More

    ಪ್ರಧಾನಿ ಮೋದಿಯನ್ನು ಕೊಲ್ಲಲು ಸಿದ್ಧರಾಗಿ ಎಂದು ಕರೆ ನೀಡಿದ್ದ ಕಾಂಗ್ರೆಸ್​ ನಾಯಕನ ಬಂಧನ

    ಭೋಪಾಲ್​: ಪ್ರಧಾನಿ ಮೋದಿಯನ್ನು ಕೊಲ್ಲಲು ಸಿದ್ಧರಾಗಿ ಎಂದು ವಿವಾದಾತ್ಮಕ ಕರೆ ನೀಡಿದ್ದ ಮಧ್ಯ ಪ್ರದೇಶದ ಕಾಂಗ್ರೆಸ್​ ನಾಯಕ ಹಾಗೂ ಮಾಜಿ ಸಚಿವ ರಾಜಾ ಪಟೇರಿಯಾರನ್ನು ಇಂದು (ಡಿ.13) ಬಂಧಿಸಲಾಗಿದೆ.

    ‘ಮೋದಿಯನ್ನು ಕೊಲ್ಲಲು ಸಿದ್ಧರಾಗಿ. ಕೊಲ್ಲುವುದೆಂದರೆ ಅವರನ್ನು ಸೋಲಿಸುವುದೆಂದರ್ಥ’ ಎಂದು ಕಾಂಗ್ರೆಸ್ ಕಾರ್ಯಕರ್ತರಿಗೆ ಪಟೇರಿಯಾ ಕರೆ ನೀಡಿದ ವಿಡಿಯೋ ತುಣುಕೊಂದು ಸೋಮವಾರ ಬೆಳಿಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದ್ದು ಸಂಚಲನ ಮೂಡಿಸಿತು. ಸಂವಿಧಾನ ಮತ್ತು ದಲಿತರು ಹಾಗೂ ಅಲ್ಪಸಂಖ್ಯಾತರ ಭವಿಷ್ಯದ ರಕ್ಷಣೆಗಾಗಿ ಮೋದಿಯವರನ್ನು ‘ಕೊಲ್ಲಲು ಸಿದ್ಧರಾಗಿ’ ಎಂದು ಪನ್ನಾ ಜಿಲ್ಲೆಯ ಪವಾಯ್ ಪಟ್ಟಣದಲ್ಲಿ ನಡೆದ ಕಾರ್ಯಕರ್ತರ ಸಭೆಯೊಂದರಲ್ಲಿ ಕಾಂಗ್ರೆಸ್ ನಾಯಕ ಹೇಳಿದ್ದರು ಎನ್ನಲಾಗಿದೆ.

    ವಿಡಿಯೋ ವೈರಲ್​ ಆದ ಪಟೇರಿಯಾ ವಿರುದ್ಧ ಎಫ್​ಐಆರ್ ದಾಖಲಿಸುವಂತೆ ಮಧ್ಯ ಪ್ರದೇಶ ಸರ್ಕಾರ ಆದೇಶಿಸಿತ್ತು. ಬಳಿಕ ಪನ್ನಾ ಜಿಲ್ಲೆಯ ಪಾವೈ ಪೊಲೀಸ್​ ಠಾಣೆಯಲ್ಲಿ ಸೋಮವಾರ ಮಧ್ಯಾಹ್ನ ಪಟೇರಿಯಾ ವಿರುದ್ಧ ಎಫ್​ಐಆರ್​ ದಾಖಲಾಗಿತ್ತು. ಇದೀಗ ಪಟೇರಿಯಾರನ್ನು ಬಂಧಿಸಿದ್ದಾರೆ.

    ಪಟೇರಿಯಾ ಹೇಳಿಕೆಯನ್ನು ಮಧ್ಯ ಪ್ರದೇಶ ಮುಖ್ಯಮಂತ್ರಿ ಶಿವರಾಜ್​ ಸಿಂಗ್​ ಚೌಹಾಣ್​ ಅವರು ಖಂಡಿಸಿದ್ದರು. ಅಲ್ಲದೆ, ರಾಹುಲ್​ ಗಾಂಧಿ ಅವರನ್ನು ಉದ್ದೇಶಿಸಿ, ಭಾರತ್ ಜೋಡೋ ಯಾತ್ರೆ ಎಂದು ನಟಿಸುತ್ತಿರುವವರ ನಿಜವಾದ ಮುಖ ಹೊರಬರುತ್ತಿದೆ ಎಂದು ಕಿಡಿಕಾರಿದ್ದರು.

    ಕ್ಷೇತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಪೈಪೋಟಿ ನೀಡಲು ಕಾಂಗ್ರೆಸ್ ನವರಿಗೆ ಸಾಧ್ಯವಾಗುತ್ತಿಲ್ಲ, ಅದಕ್ಕಾಗಿಯೇ ಕಾಂಗ್ರೆಸ್ ನಾಯಕರೊಬ್ಬರು ಅವರನ್ನು ಕೊಲ್ಲುವ ಮಾತುಗಳನ್ನಾಡುತ್ತಿದ್ದಾರೆ. ಇದು ದ್ವೇಷದ ಪರಮಾವಧಿ. ಕಾಂಗ್ರೆಸ್ಸಿನ ನಿಜವಾದ ಭಾವನೆಗಳು ಬಯಲಾಗುತ್ತಿವೆ. ಕಾಂಗ್ರೆಸ್​ ನಾಯಕ ವಿರುದ್ಧ ಕಾನೂನು ತನ್ನ ಕ್ರಮ ತೆಗೆದುಕೊಳ್ಳುತ್ತದೆ ಎಂದು ಸಿಎಂ ಚೌಹಾಣ್​ ಹೇಳಿದ್ದರು.

    ಪಟೇರಿಯಾ ಆಡಿರುವ ಮಾತುಗಳನ್ನು ಕಾಂಗ್ರೆಸ್​ ಸಹ ಖಂಡಿಸಿದೆ. ಇದು ಸಂಪೂರ್ಣವಾಗಿ ಖಂಡನೀಯ. ಪ್ರಧಾನಿ ಮಂತ್ರಿ ಅಥವಾ ಯಾರೇ ಆಗಲಿ ಇಂತಹ ಪದಗಳನ್ನು ಬಳಸಬಾರದು. ಇಂತಹ ಹೇಳಿಕೆಗಳನ್ನು ಕಾಂಗ್ರೆಸ್​ ಪಕ್ಷ ಖಂಡಿಸುತ್ತದೆ ಎಂದು ಕಾಂಗ್ರೆಸ್​ ನಾಯಕ ಪವನ್​ ಖೇರಾ ಅವರು ಮಾಧ್ಯಮಕ್ಕೆ ತಿಳಿಸಿದ್ದಾರೆ.

    ಇನ್ನು ಪಟೇರಿಯಾ ಹೇಳಿಕೆಗೆ ಭಾರಿ ಆಕ್ರೋಶ ವ್ಯಕ್ತವಾಗಿದ್ದು ಅವರನ್ನು ಬಂಧಿಸುವಂತೆ ಅನೇಕ ಬಿಜೆಪಿ ಮುಖಂಡರು ಆಗ್ರಹಿಸಿದ್ದರು. ‘ಇಂದಿನ ಕಾಂಗ್ರೆಸ್ ಮಹಾತ್ಮಾ ಗಾಂಧಿಯ ಕಾಂಗ್ರೆಸ್ ಅಲ್ಲ ಎನ್ನುವುದು ಇಂಥ ಹೇಳಿಕೆಗಳು ತೋರಿಸುತ್ತವೆ. ಇದು ಮುಸಲೋನಿ ಮನಸ್ಥಿತಿಯ ಇಟಲಿಯ ಕಾಂಗ್ರೆಸ್ ಆಗಿದೆ’ ಎಂದು ಮಧ್ಯ ಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಹೇಳಿದ್ದಾರೆ.

    ಪಟೇರಿಯಾ ಹೇಳಿಕೆ ‘ಅಕ್ಷಮ್ಯ ಅಪರಾಧವಾಗಿದೆ’ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ವರ್ಣಿಸಿದ್ದರು. ಒಂದು ವೇಳೆ ರಾಜಾ ಪಟೇರಿಯಾ ಮಾನಸಿಕ ಅಸ್ವಸ್ಥ ಎಂದು ಘೋಷಿಸಿಕೊಂಡರೂ ಈ ಅಪರಾಧದಿಂದ ತಪ್ಪಿಸಿಕೊಳ್ಳಲು ಬಿಡಬಾರದು ಎಂದು ಹೇಳಿದ್ದರು. (ಏಜೆನ್ಸೀಸ್​)

    ಯೂಟ್ಯೂಬ್​ ವಿಡಿಯೋ ನೋಡಿ ಬಾಲಕನ ಎಡವಟ್ಟು: ಮರ್ಮಾಂಗದಲ್ಲಿ ಸಿಲುಕಿದ್ದ ರಿಂಗ್​ ತೆಗೆಯಲು ಹರಸಾಹಸ

    ನೀಟ್​, ಜೆಇಇ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ಮೂವರು ವಿದ್ಯಾರ್ಥಿಗಳು ಒಂದೇ ದಿನ ದುರಂತ ಅಂತ್ಯ! ಕೆಟ್ಟ ನಿರ್ಧಾರಕ್ಕೆ ನೂರಾರು ಕನಸುಗಳು ಭಗ್ನ

    ರಾಯಚೂರಿನ 5 ವರ್ಷದ ಬಾಲಕಿಗೆ ಜಿಕಾ ವೈರಸ್​​ ದೃಢ: ಸೋಂಕಿನ ಲಕ್ಷಣ ಕಂಡುಬಂದರೆ ಏನು ಮಾಡಬೇಕು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts