More

    ಕಾಂಗ್ರೆಸ್​ನ ವಿಶ್ವಾಸ ಅತಿಯಾದದ್ದು

    ಹುಬ್ಬಳ್ಳಿ : ಲೋಕಸಭೆ ಚುನಾವಣೆಯಲ್ಲಿ ಕೇವಲ 200 ಸ್ಥಾನಗಳಿಗೆ ಸ್ಪರ್ಧೆ ಮಾಡಿರುವ ಕಾಂಗ್ರೆಸ್, 543 ಕ್ಷೇತ್ರಗಳಿಗೆ ಸ್ಪರ್ಧೆ ಮಾಡಿರುವಂತೆ ಆ ಪಕ್ಷದ ಮುಖಂಡರು ಮಾತನಾಡುತ್ತಾರೆ. ಅತಿಯಾದ ವಿಶ್ವಾಸ ಹೊಂದಿರುವ ಕಾಂಗ್ರೆಸ್, ಅಧಿಕಾರಕ್ಕೆ ಬರಲು ಸಾಧ್ಯವೇ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

    ನಗರದಲ್ಲಿ ಬುಧವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಅಧಿಕಾರಕ್ಕೆ ಬರುವುದಿಲ್ಲ ಎಂಬ ವಿಷಯ ಗೊತ್ತಿದ್ದೂ ಜನರಿಗೆ ಲಕ್ಷ ಹಣ ಕೊಡುವ ಬಗ್ಗೆ ಪೊಳ್ಳು ಆಶ್ವಾಸನೆ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

    ಇಂಡಿ ಒಕ್ಕೂಟದಲ್ಲಿ ಹಲವಾರು ಗೊಂದಲಗಳು ಇವೆ. ಆಪ್, ಟಿಎಂಸಿ ಹೀಗೆ ಬೇರೆ ಬೇರೆ ಪಕ್ಷಗಳ ಪ್ರತ್ಯೇಕ ಪ್ರಣಾಳಿಕೆಗಳನ್ನು ಇಂಡಿ ಒಕ್ಕೂಟ ಹೊಂದಿದೆ. ಜನರು ಈ ಒಕ್ಕೂಟ ಹಾಗೂ ಅದರ ನೇತೃತ್ವ ವಹಿಸಿರುವ ಕಾಂಗ್ರೆಸ್ ಅನ್ನು ಹೇಗೆ ನಂಬುತ್ತಾರೆ ? ಎಂದು ಪ್ರಶ್ನಿಸಿದರು.

    ಬರಗಾಲದಿಂದ ಜನರು ತತ್ತರಿಸಿದ್ದಾರೆ. ಕೇಂದ್ರದ ಅನುದಾನಕ್ಕೆ ಕಾಯದೇ ರಾಜ್ಯ ಸರ್ಕಾರ ತನ್ನ ಬೊಕ್ಕಸದಿಂದ ತುರ್ತು ಪರಿಹಾರ ಒದಗಿಸಬೇಕು. ಯುಪಿಎ ಸರ್ಕಾರದ ಅವಧಿಯಲ್ಲಿಯೇ ಬರಗಾಲ ತಲೆದೋರಿದ 8-10 ತಿಂಗಳ ನಂತರ ಪರಿಹಾರ ನೀಡಿದ ಉದಾಹರಣೆಗಳು ಇವೆ ಎಂದರು.

    ರಾಜ್ಯ ಸರ್ಕಾರಕ್ಕೆ ರೈತರ ಬಗ್ಗೆ ಕಾಳಜಿ ಇಲ್ಲ. ಇದು ರೈತ ವಿರೋಧಿ ಸರ್ಕಾರ. ಬರಗಾಲ ತಲೆದೋರಿದ್ದರೂ, ರೈತರ ಸಹಾಯಕ್ಕೆ ಧಾವಿಸುತ್ತಿಲ್ಲ ಎಂದು ವ್ಯಂಗ್ಯವಾಡಿದರು.

    ಬಿಜೆಪಿ ನೇತೃತ್ವದ ಎನ್​ಡಿಎ ಸರ್ಕಾರದ ಕಳೆದ ಐದು ವರ್ಷದ ಅವಧಿಯಲ್ಲಿ 3,500 ಕಿಮೀಗೂ ಹೆಚ್ಚು ಹೆದ್ದಾರಿ ನಿರ್ಮಾಣ ಕೆಲಸ ಮಾಡಲಾಗಿದೆ. ಕಾಂಗ್ರೆಸ್ ಆಡಳಿತ ನಡೆಸಿದ 60 ವರ್ಷಗಳಲ್ಲಿ ಇಷ್ಟೊಂದು ಹೆದ್ದಾರಿಗಳು ಸಿದ್ದಗೊಂಡಿರಲಿಲ್ಲ. ಇದೀಗ, ಇನ್ನೂ ಮೂರು ಸಾವಿರ ಹೆದ್ದಾರಿ ನಿರ್ಮಾಣ ಕಾಮಗಾರಿಗೆ ಹಸಿರು ನಿಶಾನೆ ದೊರೆತಿದೆ ಎಂದು ತಿಳಿಸಿದರು.

    ಕಾಂಗ್ರೆಸ್​ನವರಂತೆ ಆ ಪಕ್ಷದ ಹೈಕಮಾಂಡ್ ಮುಂದೆ ಅರ್ಜಿ ಹಿಡಿದುಕೊಂಡು ನಿಲ್ಲುವ ಪ್ರಮೇಯ ಬಿಜೆಪಿಯವರಿಗೆ ಇಲ್ಲ. ನಾವು ಸದಾ ನರೇಂದ್ರ ಮೋದಿ ಅವರ ಜತೆಗೆ ನಿಲ್ಲುತ್ತೇವೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts