More

    ಚೀನಾದಿಂದ ರಾಜೀವ್​ ಗಾಂಧಿ ಪ್ರತಿಷ್ಠಾನಕ್ಕೆ ಹರಿದು ಬಂತು ಲಕ್ಷಾಂತರ ರೂಪಾಯಿ ದೇಣಿಗೆ

    ನವದೆಹಲಿ: ಕೇಂದ್ರದಲ್ಲಿ ಮನಮೋಹನ್​ ಸಿಂಗ್​ ನೇತೃತ್ವದ ಯುಪಿಎ ಸರ್ಕಾರ ಆಡಳಿತದಲ್ಲಿ ಇದ್ದಾಗ ಚೀನಾ ಅಧ್ಯಕ್ಷ ಕ್ಸಿ ಜಿನ್​ಪಿಂಗ್​ ಉಪಸ್ಥಿತಿಯಲ್ಲಿ ಕಾಂಗ್ರೆಸ್​ ಮುಖಂಡ ರಾಹುಲ್​ ಗಾಂಧಿ ಒಪ್ಪಂದ ಒಂದಕ್ಕೆ ಸಹಿ ಹಾಕಿದ್ದರು. ಆಗ ಕಾಂಗ್ರೆಸ್​ ಅಧ್ಯಕ್ಷೆಯಾಗಿದ್ದ ಸೋನಿಯಾ ಗಾಂಧಿ ಅವರ ಉಪಸ್ಥಿತಿಯಲ್ಲಿ ಈ ಒಪ್ಪಂದ ಏರ್ಪಟ್ಟ ನಂತರದಲ್ಲಿ ರಾಜೀವ್​ ಗಾಂಧಿ ಪ್ರತಿಷ್ಠಾನಕ್ಕೆ ಚೀನಾ ಸರ್ಕಾರದಿಂದ 90 ಲಕ್ಷ ರೂಪಾಯಿ ದೇಣಿಗೆ ಸಂದಾಯವಾಗಿದೆ. ಇದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

    ಚೀನಾದಿಂದ ರಾಜೀವ್​ ಗಾಂಧಿ ಪ್ರತಿಷ್ಠಾನಕ್ಕೆ ಹರಿದು ಬಂತು ಲಕ್ಷಾಂತರ ರೂಪಾಯಿ ದೇಣಿಗೆ

    ಲಡಾಖ್​ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಪ್ರತಿಪಕ್ಷ ಕಾಂಗ್ರೆಸ್​ ನರೇಂದ್ರ ಮೋದಿ ನೇತೃತ್ವದ ಎನ್​ಡಿಎ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿದೆ. ಮುಜುಗರ ಹುಟ್ಟಿಸುವಂಥ ಪ್ರಶ್ನೆಗಳನ್ನು ಎತ್ತುತ್ತಿದೆ. ಇದೇ ಸಂದರ್ಭದಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್​ಪಿಂಗ್​ ಜತೆ ಒಪ್ಪಂದ ಒಂದಕ್ಕೆ ರಾಹುಲ್​ ಗಾಂಧಿ ಸಹಿ ಹಾಕುತ್ತಿರುವ ಭಾವಚಿತ್ರವೊಂದು ಮುಂಚೂಣಿಗೆ ಬಂದಿದೆ.

    ಈ ಒಪ್ಪಂದದ ಪ್ರಕಾರ ಅಂತಾರಾಷ್ಟ್ರೀಯ ಮತ್ತು ಸ್ಥಳೀಯವಾದ ಪ್ರಮುಖ ವಿಷಯದ ಕುರಿತು ಭಾರತ ಮತ್ತು ಚೀನಾ ನಡುವೆ ಉನ್ನತಮಟ್ಟದ ರಾಜತಾಂತ್ರಿಕ ಚರ್ಚೆಗೆ ಅವಕಾಶ ಕಲ್ಪಿಸಲಾಗಿದೆ.

    ಇದನ್ನೂ ಓದಿ: ಭಾರತ, ಚೀನಾ, ದಕ್ಷಿಣ ಆಫ್ರಿಕಾಕ್ಕೆ ಸಂಬಂಧಪಟ್ಟ ಆತಂಕಕಾರಿ ಸುದ್ದಿ ಇದು; ಅಧ್ಯಯನವೊಂದರ ವರದಿ

    ಇದರ ಬೆನ್ನಲ್ಲೇ ರಾಜೀವ್​ ಗಾಂಧಿ ಪ್ರತಿಷ್ಠಾನ 2008-09ನೇ ಸಾಲಿಗೆ ಸಲ್ಲಿಸಿದ್ದ ಲೆಕ್ಕಪತ್ರ ವರದಿಯಲ್ಲಿ ಚೀನಾ ಸರ್ಕಾರ ಪ್ರತಿಷ್ಠಾನಕ್ಕೆ ನೇರವಾಗಿ 90 ಲಕ್ಷ ರೂಪಾಯಿ ದೇಣಿಗೆ ನೀಡಿರುವ ಅಂಶವೂ ಬಹಿರಂಗಗೊಂಡಿದ್ದು, ಕಾಂಗ್ರೆಸ್​ಗೆ ತೀವ್ರ ಇರಿಸುಮುರಿಸು ಉಂಟು ಮಾಡುತ್ತಿದೆ.

    ಯುಪಿಎ ಸರ್ಕಾರದ ಅವಧಿಯಲ್ಲಿ ಚೀನಾದೊಂದಿಗೆ ಮುಕ್ತ ವ್ಯಾಪಾರ ಒಪ್ಪಂದ (ಎಫ್​ಟಿಎ) ಮಾಡಿಕೊಳ್ಳುವ ಬಗ್ಗೆ ಅಧ್ಯಯನವನ್ನು ಕೈಗೊಳ್ಳಲಾಗಿತ್ತು. ಈ ಅಧ್ಯಯನ ವರದಿಯಲ್ಲಿ ಭಾರತದಲ್ಲಿ ಉತ್ಪಾದನೆಯಾಗುವ ವಸ್ತುಗಳಿಗಿಂತಲೂ ಚೀನಾದ ವಸ್ತುಗಳು ಅಗ್ಗವಾಗಿರುವುದರಿಂದ, ಎಫ್​ಟಿಎ ಮಾಡಿಕೊಳ್ಳಲು ಯಾವುದೇ ತೊಂದರೆಯಿಲ್ಲ. ಇದರಿಂದ ಭಾರತಕ್ಕೆ ಹೆಚ್ಚಿನ ಲಾಭವಾಗುತ್ತದೆ ಎಂದು ಹೇಳಲಾಗಿತ್ತು. ಇದಾದ ನಂತರದಲ್ಲಿ ಚೀನಾದಿಂದ ರಾಜೀವ್​ ಗಾಂಧಿ ಪ್ರತಿಷ್ಠಾನಕ್ಕೆ 90 ಲಕ್ಷ ರೂಪಾಯಿ ದೇಣಿಗೆ ಸಂದಾಯವಾಗಿರುವುದು ಅನುಮಾನಕ್ಕೆ ಕಾರಣವಾಗಿದೆ.

    ಇದನ್ನೂ ಓದಿ: ಭಾರತದ 10 ಯೋಧರ ಬಿಡುಗಡೆಯನ್ನು ಬೇಕೆಂದೇ ವಿಳಂಬಿಸಿದ ಚೀನಾ

    ರಾಜೀವ್​ ಗಾಂಧಿ ಪ್ರತಿಷ್ಠಾನದ 2005-06ನೇ ಸಾಲಿನ ವಾರ್ಷಿಕ ವರದಿಯಲ್ಲಿ ಕೂಡ ಚೀನಾ ಕೂಡ ಸಂಸ್ಥೆಗೆ ದೇಣಿಗೆ ನೀಡಿರುವುದಾಗಿ ಪ್ರಸ್ತಾಪಿಸಲಾಗಿದೆ. ಇದಕ್ಕೆ ಪೂರಕವಾಗಿ ರಾಜೀವ್​ ಗಾಂಧಿ ಸಮಕಾಲೀನ ಅಧ್ಯಯನ ಸಂಸ್ಥೆ ಕೂಡ ಚೀನಾ ಸರ್ಕಾರ ಡೊನಾರ್​ ಎಂದು ಹೇಳಿಕೊಂಡಿರುವುದು ಇದೀಗ ಬಹಿರಂಗಗೊಂಡಿದೆ.

    ಇದೆಲ್ಲವನ್ನೂ ಗಮನಿಸಿದಾಗ ಕಾಂಗ್ರೆಸ್​ ಭಾರತದ ಭದ್ರತೆಯನ್ನು ನಿರ್ಲಕ್ಷಿಸಿ, ಚೀನಾದಂಥ ಶತ್ರು ರಾಷ್ಟ್ರದೊಂದಿಗೆ ನೇರವಾಗಿ ಸ್ನೇಹ ಸಂಪಾದಿಸಿಕೊಂಡಿದೆ. ತನ್ಮೂಲಕ ಗಡಿ ರಕ್ಷಣೆಯಲ್ಲಿ ತೊಡಗಿರುವ ಸಹಸ್ರಾರು ಯೋಧರ ಮಾನ-ಪ್ರಾಣವನ್ನು ಪಣಕ್ಕೆ ಒಡ್ಡಿದೆ ಎಂಬುದು ಸಾಬೀತಾಗುತ್ತದೆ.

    ಭಾರತ-ಚೀನಾ ಗಡಿ ಬಿಕ್ಕಟ್ಟು: ಪರಿಸ್ಥಿತಿ ಗಂಭೀರವಾಗಿದೆ ಎಂದ ಬ್ರಿಟಿಷ್​ ಪ್ರಧಾನಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts