More

    ಲೋಕಸಭಾ ಚುನಾವಣೆ- ಅ.29 ರಂದು ಅಂಕೋಲಾದಲ್ಲಿ ಕಾಂಗ್ರೆಸ್ ಮಹತ್ವದ ಸಭೆ

    ಕಾರವಾರ: ಲೋಕಸಭಾ ಚುನಾವಣೆ ಸಂಬಂಧ ಚರ್ಚೆಗೆ ಅ. 29 ರಂದು ಅಂಕೋಲಾ ನಾಡವರ ಭವನದಲ್ಲಿ ಸಭೆ ಆಯೋಜಿಸಲಾಗಿದೆ ಎಂದು ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಆರ್.ಎಚ್.ನಾಯ್ಕ ತಿಳಿಸಿದರು.

    ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು , ಲೋಕಸಭಾ ಅಭ್ಯರ್ಥಿ ಆಯ್ಕೆ ಇನ್ನಿತರ ವಿಚಾರಗಳ ಬಗ್ಗೆ ಚರ್ಚೆ ನಡೆಯಲಿದೆ ಎಂದರು.

    ಬೆಳಗಾವಿ ವಿಭಾಗದ ಪ್ರಭಾರಿ ಸತೀಶ ಜಾರಕಿಹೋಳಿ ಹಾಗೂ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಎಚ್.ಕೆ.ಪಾಟೀಲ ಅವರು ಅ.29 ರಂದು ಸಭೆಗೆ ಆಗಮಿಸುವರು.

    ಅಲ್ಲಿ ಪಕ್ಷದ ಕಾರ್ಯ ಚಟುವಟಿಕೆಗಳ ಬಗ್ಗೆಯೂ ಹಾಗೂ ಮುಂದಿನ ಕಾರ್ಯಕ್ರಮಗಳ ಬಗ್ಗೆ ಚರ್ಚೆ ನಡೆಸಲಾಗುವುದು ಎಂದು ಆರ್.ಎಚ್.ನಾಯ್ಕ ತಿಳಿಸಿದರು. 

    ಕಾಗೇರಿ ಸೋತಿದ್ದೇಕೆ ..?
    ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳಿಂದ ಜನರ ಮನಸ್ಸು ಗೆದ್ದಿದೆ. ಅದರಿಂದ ಬಿಜೆಪಿ ನಾಯಕರು ಹತಾಶರಾಗಿ ಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಆರ್.ಎಚ್.ನಾಯ್ಕ ಹೇಳಿದರು.
    ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ನ ಒಳ್ಳೆಯ ಯೋಜನೆಗಳ ಬಗ್ಗೆ ಸುಳ್ಳು ಆಪಾದನೆ ಮಾಡುವುದೇ ಬಿಜೆಪಿ ಕೆಲಸವಾಗಿದೆ ಎಂದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಶಿರಸಿಯ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಸೋಲನ್ನು ಇಡೀ ರಾಜ್ಯಕ್ಕೆ ಅನ್ವಯಿಸಿ ಲೆಕ್ಕ ಹಾಕಿ ನೋಡಬೇಕಿದೆ. ಕಾಂಗ್ರೆಸ್ ಬಗ್ಗೆ ಹಲವು ಆರೋಪ ಮಾಡುವ ವಿಶ್ವೇಶ್ವರ ಹೆಗಡೆ ಕಾಗೇರಿ ದೇಶದ ಹಿಂದಿನ ಇತಿಹಾಸ ತೆಗೆದು ನೋಡಬೇಕು. ಪಂಚ ವಾರ್ಷಿಕ ಯೋಜನೆ, 20 ಅಂಶಗಳ ಕಾರ್ಯಕ್ರಮ ಹೀಗೆ ಹಲವು ಅಭಿವೃದ್ಧಿಪರ ಯೋಜನೆ ತಂದು ದೇಶವನ್ನು ಸದೃಢ ಮಾಡಿದ್ದು ಯಾರು ಎಂಬುದು ಅರ್ಥವಾಗುತ್ತದೆ ಎಂದರು.
    ಬಿಜೆಪಿ ನಾಯಕರು ಕಾಂಗ್ರೆಸ್ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡುತ್ತಿದ್ದಾರೆ. ಆದರೆ, ಹಿಂದಿನ ಬಿಜೆಪಿ ಸರ್ಕಾರವೇ ಭ್ರಷ್ಟಾಚಾರದಲ್ಲಿ ಮುಳುಗಿತ್ತು.

    ಇದನ್ನೂ ಓದಿ: ಶಿರಸಿ ಸಬ್ ರಿಜಿಸ್ಟ್ರಾರ್ ಲೋಕಾಯುಕ್ತ ಬಲೆಗೆ

    ಹಿಂದಿನ ಬಿಜೆಪಿ ಸರ್ಕಾರ 40 ಪರ್ಸೆಂಟ್ ಆಸೆಗಾಗಿ ಸಾಕಷ್ಟು ಕಾಮಗಾರಿ ಮಂಜೂರು ಮಾಡಿ ಅದಕ್ಕೆ ಬೇಕಾದ ಹಣ ನಿಗದಿ ಮಾಡಿರಲಿಲ್ಲಿ. ಆಗಿನ ಸರ್ಕಾರದ ಕೋಟ್ಯಂತರ ರೂ. ಕಾಮಗಾರಿಗಳ ಬಿಲ್ ಈಗ ಕಾಂಗ್ರೆಸ್ ಸರ್ಕಾರದ ಹೆಗಲೇರಿದೆ ಎಂದರು.ಮೋಹನ ಆಚಾರಿ, ಗಾಂಧೀಜಿ ನಾಯ್ಕ ಸುದ್ದಿಗೋಷ್ಠಿಯಲ್ಲಿದ್ದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts