More

    ’70 ಟನ್ ಆಕ್ಸಿಜನ್ ಬೇಡಿಕೆಗೆ 20 ಟನ್ ಪೂರೈಕೆ; ಸೋಂಕಿನಿಂದಾದ ಸಾವಲ್ಲ, ಅವ್ಯವಸ್ಥೆಯ ಸರ್ಕಾರದಿಂದಾದ ಕೊಲೆ’ ಎಂದ ಕಾಂಗ್ರೆಸ್

    ಬೆಂಗಳೂರು : ಚಾಮರಾಜನಗರ ಜಿಲ್ಲಾ ಆಸ್ಪತ್ರೆಯಲ್ಲಿ 24 ರೋಗಿಗಳು ಸಾವಪ್ಪಿರುವುದಕ್ಕೆ ಕಾಂಗ್ರೆಸ್​ ಪಕ್ಷ, ಬಿಜೆಪಿ ಸರ್ಕಾರವೇ ಹೊಣೆ ಎಂದು ಟ್ವೀಟ್​ ಮಾಡಿದೆ. “ಜಿಲ್ಲಾ ಉಸ್ತುವಾರಿ ಸಚಿವರ ಬೇಜವಾಬ್ದಾರಿತನ, ರಾಜ್ಯದ ಆರೋಗ್ಯ ಸಚಿವರ ನಿರ್ಲಕ್ಷ್ಯ, ಮುಖ್ಯಮಂತ್ರಿಗಳ ಕುರುಡುತನ, ಪ್ರಧಾನಿಯ ದುರಾಹಂಕಾರ ಈ ಮಾರಣಹೋಮಕ್ಕೆ ಕಾರಣ” ಎಂದಿದೆ.

    “ಈ ಸಾವುಗಳ ಹೊಣೆಯನ್ನು ಯಾರು ಹೊತ್ತುಕೊಳ್ಳುತ್ತೀರಿ ? ಇದು ಸೋಂಕಿನಿಂದಾದ ಸಾವುಗಳಲ್ಲ, ಅವ್ಯವಸ್ಥೆಯ ಸರ್ಕಾರದಿಂದಾದ ಕೊಲೆ. ಸುಧಾಕರ್ ಅವರೇ, ಸಿಡಿಗೆ ತಡೆಯಾಜ್ಞೆ ತರುವಲ್ಲಿ ತಾವು ತೋರಿದ ತುರಾತುರಿಯನ್ನು ಆಕ್ಸಿಜನ್ ವಿಚಾರದಲ್ಲಿ ತೋರದಿದ್ದಿದ್ದು ಏಕೆ? ಈ ಸಾವುಗಳ ಹೊಣೆ ನಿಮ್ಮದಲ್ಲದೆ ಇನ್ಯಾರದ್ದು?” ಎಂದು ರಾಜ್ಯ ಕಾಂಗ್ರೆಸ್, ಆರೋಗ್ಯ ಸಚಿವ ಸುಧಾಕರ್ ಅವರ ಮೇಲೆ ಹರಿಹಾಯ್ದಿದೆ.

    ಇದನ್ನೂ ಓದಿ: 10 ಗಂಟೆ ನಂತರ ಅರ್ಧ ಶಟರ್ ಮುಚ್ಚಿ ವ್ಯಾಪಾರ ! ಪೊಲೀಸರಿಂದ ಸೀಲ್‌ಡೌನ್

    ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಿಗೆ ಪ್ರತಿನಿತ್ಯ 70 ಟನ್ ಆಕ್ಸಿಜನ್ ಬೇಡಿಕೆ ಇದೆ. ಆದರೆ ಕೇವಲ 20 ಟನ್ ಪೂರೈಕೆಯಾಗುತ್ತಿದೆ. ಈ ಲೋಪಗಳಿದ್ದರೂ ಆರೋಗ್ಯ ಮಂತ್ರಿಗಳು ಗಮನ ಹರಿಸದೆ, ಸುಳ್ಳು ಹೇಳುತ್ತಲೇ 24 ಸಾವುಗಳಿಗೆ ಕಾರಣರಾಗಿದ್ದಾರೆ ಆರೋಪಿಸಿರುವ ಕಾಂಗ್ರೆಸ್​ “ಯಡಿಯೂರಪ್ಪ ಅವರೇ, ಇಷ್ಟೆಲ್ಲ ವೈಫಲ್ಯವಿದ್ದರೂ ಸಚಿವರ ತಲೆದಂಡಕ್ಕೆ ಮಿನಾಮೇಷವೇಕೆ ?” ಎಂದು ಪ್ರಶ್ನಿಸಿದೆ.

    “ತಜ್ಞರ ಅಭಿಪ್ರಾಯದ ಪ್ರಕಾರ ರಾಜ್ಯಕ್ಕೆ ಪ್ರತಿನಿತ್ಯ 1,500 ಟನ್ ಆಕ್ಸಿಜನ್ ಅಗತ್ಯವಿದೆ. ಆದರೆ ಒಕ್ಕೂಟ ಸರ್ಕಾರ ರಾಜ್ಯದ ಆಕ್ಸಿಜನ್ ಬಳಕೆಗೆ 802 ಟನ್ ಮಿತಿ ಹೇರಿದ್ದೇಕೆ ? ಹಿಂದೆಯೇ ಆಕ್ಸಿಜನ್ ಪ್ಲಾಂಟ್‌ಗಳಿಗೆ ಹಣ ಬಿಡುಗಡೆಯಾದರೂ ಆರೋಗ್ಯ ಸಚಿವ ಕಡತಗಳಿಗೆ ಸಹಿ ಹಾಕದೆ ಕುಳಿತಿದ್ದೇಕೆ ?” ಎಂದು ಸರಣಿ ಟ್ವೀಟ್​​ಗಳಲ್ಲಿ ಕಾಂಗ್ರೆಸ್​​ ಪ್ರಶ್ನಿಸಿದೆ.

    ಇದನ್ನೂ ಓದಿ: ಆಸ್ಪತ್ರೆ ಒಳಗೂ ಹೆಣಗಳ ರಾಶಿ, ಹೊರಗೂ ಹೆಣ… ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸುತ್ತೆ ಚಾಮರಾಜನಗರದ ಘಟನೆ

    ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು, “ಅಪರಾಧಿಕ ನಿರ್ಲಕ್ಷ್ಯವು ಕರ್ನಾಟಕದಲ್ಲಿ 24 ಸಾವುಗಳಿಗೆ ಎಡೆಮಾಡಿಕೊಟ್ಟಿದೆ. ಸಿಎಂ ಯಡಿಯೂರಪ್ಪ ಮತ್ತು ಸಚಿವ ಸುಧಾಕರ್​ ಅವರು ನಿತ್ಯ ಆಕ್ಸಿಜನ್ ಸಾಕಷ್ಟಿದೆ ಎಂದು ಏಕೆ ಸುಳ್ಳು ಹೇಳುತ್ತಿರುತ್ತಾರೆ ? ಯಾವುದೇ ಉತ್ತರದಾಯಿತ್ವ ಇಲ್ಲವೇ ? ಸರ್ಕಾರ ಆಕ್ಸಿಜನ್ ಪೂರೈಸಲು ಸಾಧ್ಯವಾಗದ ಕಾರಣಕ್ಕೆ ಇನ್ನೂ ಎಷ್ಟು ಜನರು ಸಾಯಿಸಲ್ಪಡುತ್ತಾರೆ ?” ಎಂದು ಪ್ರಶ್ನೆ ಹಾಕಿದ್ದಾರೆ.

    ವರುಣ್​ ಚಕ್ರವರ್ತಿ, ಸಂದೀಪ್​ ವಾರಿಯರ್​​ಗೆ ಕರೊನಾ; ಸ್ಕ್ಯಾನ್​ಗೆ ಹೋದಾಗ ಸೋಂಕು ?

    ಆಸ್ಪತ್ರೆ ದಾಖಲಾತಿಗೆ ರಾಷ್ಟ್ರೀಯ ನೀತಿ ರೂಪಿಸಿ : ಕೇಂದ್ರಕ್ಕೆ ಸುಪ್ರೀಂ ಸೂಚನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts