More

    ಗ್ರೂಪ್ ಆಫ್ 23 ಯಲ್ಲಿ ಬಿರುಕು?- ವಿಷಯ ಮುಚ್ಚಿ ಹಾಕಲು ಒಪ್ಪದ ಭಿನ್ನಮತೀಯರು

    ನವದೆಹಲಿ: ಕಾಂಗ್ರೆಸ್ ಪಕ್ಷಕ್ಕೆ ಸಂಘಟನಾತ್ಮಕವಾಗಿ ಆಮೂಲಾಗ್ರ ಬದಲಾವಣೆ ತರಬೇಕು ಎಂದು ಬಯಸಿ ಪತ್ರ ಬರೆದ 23 ನಾಯಕ ಗುಂಪಿನೊಳಗೆ ಇದೀಗ ಭಿನ್ನಮತ ಶುರುವಾಗಿದೆ. ಪಕ್ಷದೊಳಗೆ ಸಾಕಷ್ಟು ಪ್ರಮಾಣದಲ್ಲಿ ಆಂತರಿಕ ಪ್ರಜಾಪ್ರಭುತ್ವ ಇಲ್ಲ ಎಂದು ವಾದಿಸಿದ್ದ ಗ್ರೂಪ್ ಆಫ್ 23 ಯಲ್ಲಿ ಈಗ ಒಡಕು ಮೂಡುವ ಲಕ್ಷಣಗಳು ಗೋಚರಿಸಿವೆ.

    ಸಿಡಬ್ಲ್ಯುಸಿ ಸಭೆಯಲ್ಲಿ ಪಕ್ಷ ವಿರೋಧಿಗಳೆಂಬ ಹಣೆಪಟ್ಟಿ ಕಟ್ಟಿಸಿಕೊಂಡ ಈ ಹಿರಿಯ ನಾಯಕರು ತಮ್ಮ ನಿಲುವಿಗೆ ಬದ್ಧರಾಗಿರುವುದಾಗಿ ತಿಳಿಸಿದ್ದಾರೆ. ಆದರೂ, ಗಾಂಧಿ ಕುಟುಂಬದ ವಿರುದ್ಧ ಹೋಗಲು ಯಾರೂ ಮುಂದಾಗ ಕಾರಣ ಈ ನಾಯಕರ ನಡುವೆ ಭಿನ್ನಮತ ಗೋಚರಿಸತೊಡಗಿದೆ. ಸಭೆಯಲ್ಲಿ ಪತ್ರದಲ್ಲಿ ಉಲ್ಲೇಖಿಸಿದ್ದ ಅಂಶಗಳು ಚರ್ಚೆಗೆ ಬರಲೇ ಇಲ್ಲ. ಹೀಗಾಗಿ, ಇನ್ನು ಮುಂದೆ ಈ ಬಗ್ಗೆ ಮಾತನಾಡದಿರುವುದೇ ಒಳಿತು ಎಂಬ ನಿರ್ಧಾರಕ್ಕೆ ಈ ಗುಂಪಿನ ಕೆಲವು ನಾಯಕರು ಬಂದಿದ್ದಾರೆ ಎಂದು ಹೇಳಲಾಗುತ್ತಿದೆ.

    ಇದನ್ನೂ ಓದಿ:  ಬಿಜೆಪಿ ಜತೆ ಸೇರ್ಕೊಂಡು ಕುತಂತ್ರ ಮಾಡ್ತಿದ್ದೀರಲ್ಲ- ಪತ್ರಬರೆದವರ ವಿರುದ್ಧ ರಾಗಾ ಆಕ್ರೋಶ

    ಈ ವಾರಾಂತ್ಯದಲ್ಲಿ ಗ್ರೂಪ್ ಆಫ್ 23 ನಾಯಕರು ಸಭೆ ಸೇರುವ ನಿರೀಕ್ಷೆ ಇದೆ. ಆದರೆ, ಇದಕ್ಕೆ ಎಲ್ಲರೂ ಹಾಜರಾಗುವ ಸಾಧ್ಯತೆ ಇಲ್ಲ. ಶಶಿತರೂರರ, ಮತ್ತು ಇತರೆ ನಾಯಕರು ಸಿಡಬ್ಲ್ಯುಸಿಗೆ ಬಿಟ್ಟುಬಿಡಿ, ಮುಗಿಸಿಬಿಡೋಣ ಎಂದರೆ, ಗುಲಾಂ ನಬಿ ಆಜಾದ್ ಮತ್ತು ಇತರರು ತಮ್ಮ ಬೇಡಿಕೆ ಈಡೇರಿಸಬೇಕು ಎಂಬ ಪಟ್ಟು ಹಿಡಿದಿದ್ದಾರೆ. ಇನ್ನು ಉತ್ತರ ಪ್ರದೇಶದ ಜಿತಿನ್ ಪ್ರಸಾದ್, ಬಿಹಾರದ ಅಖಿಲೇಶ್ ಪ್ರಸಾದ್ ಸಿಂಗ್ ಮುಂತಾದವರು ಇದು ಮುಗಿದ ಅಧ್ಯಾಯ ಎಂದು ಬಹಿರಂಗವಾಗಿಯೆ ಘೋಷಿಸಿದ್ದಾರೆ. ಕಪಿಲ್ ಸಿಬಲ್​, ಮನೀಶ್ ತಿವಾರಿ ಮತ್ತು ಇತರರು ಅಸಮಾಧಾನವನ್ನು ಹಾಗೆಯೇ ಇಟ್ಟುಕೊಂಡಿದ್ದಾರೆ. (ಏಜೆನ್ಸೀಸ್)

    ‘ಗ್ರೂಪ್ ಆಫ್​ 23’ ಮೇಲೆ ‘ಕೈ’ಕಮಾಂಡ್​ ಸರ್ಜಿಕಲ್ ಸ್ಟ್ರೈಕ್​ !: ಸಿಬಲ್​ ಕಳವಳ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts